ಕೊಚ್ಚಿ(ಕೇರಳ): ಶಬರಿಮಲೆ ದೇಗುಲಕ್ಕೆ ಕೇವಲ ‘ಮಲಯಾಳಂ ಬ್ರಾಹ್ಮಣ’ರನ್ನೇ ನೇಮಿಸಬೇಕೆಂಬ ತಿರುವಂಕೂರು ದೇವಸ್ವಂ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಹಿಂದೂ ಅರ್ಚಕರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ವಕೀಲ ಸಂತೋಷ್ ಮ್ಯಾಥ್ಯೂ ಮೂಲಕ ಕೊಟ್ಟಾಯಂನ ಮೂಲವತ್ತಂನ ವಿಷ್ಣುನಾರಾಯಣನ್ ಸಿ.ವಿ ಈ ಅರ್ಜಿ ಸಲ್ಲಿಸಿದ್ದಾರೆ.
ಟಿಡಿಬಿ ಮೇ 27 ರಂದು ಅಧಿಸೂಚನೆ ಹೊರಡಿಸಿದ್ದು, ಇದು ಸಂವಿಧಾನದ ನಿಬಂಧನೆಗಳಿಗೆ ಮತ್ತು ಸುಪ್ರೀಂಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅಲ್ಲದೆ, ಈ ಹುದ್ದೆಗೆ ‘ಮಲಯಾಳಂ ಬ್ರಾಹ್ಮಣ’ ಎಂಬುದನ್ನು ಹೊರತುಪಡಿಸಿ, ‘ಅರ್ಹರು’ ಎಂದು ಉಲ್ಲೇಖಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ದರ್ಶನ ನೀಡಲಿರುವ ಶಬರಿಮಲೆ ಅಯ್ಯಪ್ಪ... ಭಕ್ತರಿಗೆ ಈ ಷರತ್ತು ಅನ್ವಯ