ETV Bharat / bharat

ಕಾರಿನ ಚಕ್ರದಡಿ ಸಿಲುಕಿ ಹಲವು ಮೀಟರ್‌ ದೂರ ಎಳೆದೊಯ್ಯಲ್ಪಟ್ಟು ವ್ಯಕ್ತಿ ಸಾವು - ಕೊಲೆ ಪ್ರಕರಣ

ಕಾರಿನ ಚಕ್ರದಡಿ ಸಿಲುಕಿ ಹಲವು ಮೀಟರ್​ ದೂರ ಎಳೆದೊಯ್ಯಲ್ಪಟ್ಟ ವ್ಯಕ್ತಿ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಕಾರಿನ ಚಕ್ರದಡಿ ಸಿಲುಕಿದ ವ್ಯಕ್ತಿ ಮೃತ
ಕಾರಿನ ಚಕ್ರದಡಿ ಸಿಲುಕಿದ ವ್ಯಕ್ತಿ ಮೃತ
author img

By PTI

Published : Oct 11, 2023, 9:43 PM IST

ಕಾರಿನ ಚಕ್ರದಡಿ ಸಿಲುಕಿ ಹಲವು ಮೀಟರ್‌ ದೂರ ಎಳೆದೊಯ್ಯಲ್ಪಟ್ಟು ವ್ಯಕ್ತಿ ಸಾವು

ನವದೆಹಲಿ : ನೈರುತ್ಯ ದೆಹಲಿಯ ವಸಂತ್ ಕುಂಜ್ ಪ್ರದೇಶದ ಜನನಿಬಿಡ ರಸ್ತೆಯೊಂದರಲ್ಲಿ 43 ವರ್ಷದ ಟ್ಯಾಕ್ಸಿ ಚಾಲಕ ತನ್ನದೇ ವಾಹನದ ಚಕ್ರಗಳ ಕೆಳಗೆ ಸಿಲುಕಿ ಹಲವು ಮೀಟರ್‌ಗಳವರೆಗೆ ಎಳೆದೊಯ್ಯಲ್ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮಂಗಳವಾರ ರಾತ್ರಿ 11.30ಕ್ಕೆ ವಸಂತ್ ಕುಂಜ್ ನಾರ್ತ್‌ನ NH-8 ಸರ್ವಿಸ್ ರಸ್ತೆಯ ಬಳಿ ವ್ಯಕ್ತಿಯ ಶವ ಬಿದ್ದಿರುವ ಕುರಿತು ದೆಹಲಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಸಾವಿಗೀಡಾದವರನ್ನು ಫರೀದಾಬಾದ್ ನಿವಾಸಿ ಬಿಜೇಂದರ್ ಎಂದು ಗುರುತಿಸಲಾಗಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದರೋಡೆ ಪ್ರಯತ್ನದ ವೇಳೆ ವ್ಯಕ್ತಿಯ ಮೇಲೆ ದಾಳಿ ನಡೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ಘಟನೆಗಳ ಅನುಕ್ರಮವನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷದ ದಿನದಂದು ದೆಹಲಿಯ ಕಂಝಾವಾಲಾ ಪ್ರದೇಶದಲ್ಲಿ ಕಾರಿನಡಿ ಸಿಲುಕಿ 20 ವರ್ಷದ ಯುವತಿಯೊಬ್ಬಳನ್ನು ಎಳೆದೊಯ್ದು ಹತ್ಯೆಗೈದ ಹಿಟ್ ಅಂಡ್ ರನ್ ಪ್ರಕರಣ ಈ ಘಟನೆಯನ್ನು ನೆನಪಿಸುವಂತಿದೆ.

ಕಾರಿನ ಚಕ್ರ ಸ್ಫೋಟಗೊಂಡು ಅಪಘಾತ: ಕುಟುಂಬಸಮೇತರಾಗಿ ದೇವಾಲಯಕ್ಕೆ ಹೋಗುತ್ತಿದ್ದಾಗ ಕಾರಿನ ಚಕ್ರ ಸ್ಫೋಟಗೊಂಡು ಕಾರು ಪಲ್ಟಿಯಾಗಿದ್ದು, ಉದ್ಯಮಿ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಹಾಗೂ ಮಕ್ಕಳು (ಮಾರ್ಚ್​ -7-2021) ಗಾಯಗೊಂಡಿದ್ದರು. ಟಿ. ದಾಸರಹಳ್ಳಿ ನಿವಾಸಿ ಪವನ ಕುಮಾರ ಜೈನ್ (48) ಮೃತಪಟ್ಟವರು. ಇವರ ಪತ್ನಿ ಪುಷ್ಪಾ ಜೈನ್ (40), ಪುತ್ರ ವಿನಿತ್ ಜೈನ್ (23), ಮಗಳು ವರ್ಷಾ ಜೈನ್ (18) ಗಾಯಗೊಂಡಿದ್ದರು. ಕೋಡಿಗೆಹಳ್ಳಿ ಗೇಟ್ ಬಳಿ ಭಾನುವಾರ ಮಧ್ಯಾಹ್ನ 12.45ರಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ದಾಸರಹಳ್ಳಿಯಲ್ಲಿ ಅಂಗಡಿ ಹೊಂದಿರುವ ಪವನ ಕುಮಾರ್ ಕುಟುಂಬಸಮೇತರಾಗಿ ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ದೇವಾಲಯವೊಂದಕ್ಕೆ ತೆರಳುತ್ತಿದ್ದರು. ಭಾನುವಾರ ಮಧ್ಯಾಹ್ನ ದಾಸರಹಳ್ಳಿಯಿಂದ ತಮ್ಮ ಆಲ್ಟೋ ಕಾರಿನಲ್ಲಿ ಕೃಷ್ಣಗಿರಿಗೆ ಪತ್ನಿ ಮಕ್ಕಳೊಂದಿಗೆ ಹೊರಟಿದ್ದರು. ಕೋಡಿಗೆಹಳ್ಳಿ ಗೇಟ್ ಬಳಿ ಪವನ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಕೋಡಿಗೆಹಳ್ಳಿ ಗೇಟ್ ಸಮೀಪ ಏಕಾಏಕಿ ಕಾರಿನ ಹಿಂಬದಿ ಚಕ್ರ ಸ್ಫೋಟಗೊಂಡಿತ್ತು. ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮೂರು-ನಾಲ್ಕು ಬಾರಿ ಪಲ್ಟಿ ಹೊಡೆದು ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: ಕಾರಿನ ಚಕ್ರ ಸ್ಫೋಟಗೊಂಡು ಅಪಘಾತ; ಉದ್ಯಮಿ ಸಾವು, ಮೂವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.