ETV Bharat / bharat

ಇಸ್ರೇಲಿನಲ್ಲಿ ನೂತನ ಸರ್ಕಾರದ ವಿಶ್ವಾಸಮತ ಯಾಚನೆ ಇಂದು - ನಫ್ತಾಲಿ ಬೆನೆಟ್ ಪ್ರಧಾನಿ

ಇಸ್ರೇಲಿನಲ್ಲಿ ಕಳೆದ ಎರಡು ವರ್ಷದಿಂದಲೂ ರಾಜಕೀಯ ಅಸ್ಥಿರತೆ ಇತ್ತು. ಇದೇ ಕಾರಣದಿಂದ ಕೇವಲ ಎರಡು ವರ್ಷಗಳಲ್ಲಿ 4 ಚುನಾವಣೆಗಳೂ ನಡೆದವು. ಇದರೊಂದಿಗೆ ಕೊರೊನಾ ಬಿಕ್ಕಟ್ಟು ಹಾಗೂ ಇತ್ತೀಚೆಗೆ 11 ದಿನಗಳ ಕಾಲ ನಡೆದ ಗಾಜಾ ಯುದ್ಧದಿಂದ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಆದರೆ, ಕೊನೆಗೂ ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದರಿಂದ ರಾಜಕೀಯ ಅಸ್ಥಿರತೆ ಕೊನೆಗಾಣಬಹುದು ಎಂದು ನಿರೀಕ್ಷಿಸಲಾಗಿದೆ..

Naftali Bennett, the head of a small ultranationalist party
ಉಗ್ರ ರಾಷ್ಟ್ರೀಯತಾವಾದಿ ಪಕ್ಷದ ಮುಖ್ಯಸ್ಥ ನಫ್ತಾಲಿ ಬೆನೆಟ್
author img

By

Published : Jun 13, 2021, 7:13 PM IST

ಜೆರುಸಲೆಂ : ಇಸ್ರೇಲಿನಲ್ಲಿ ರವಿವಾರ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದರೊಂದಿಗೆ ನೆತನ್ಯಾಹು ಅವರ 12 ವರ್ಷಗಳ ಸುದೀರ್ಘಾವಧಿಯ ಆಡಳಿತ ಅಂತ್ಯವಾಗಲಿದೆ.

ಸಣ್ಣ ಗಾತ್ರದ ಉಗ್ರ ರಾಷ್ಟ್ರೀಯತಾವಾದಿ ಪಕ್ಷದ ಮುಖ್ಯಸ್ಥ ನಫ್ತಾಲಿ ಬೆನೆಟ್ ದೇಶದ ನೂತನ ಪ್ರಧಾನಿಯಾಗಲಿದ್ದಾರೆ. ಆದರೆ, ಇವರು ಅಧಿಕಾರದಲ್ಲಿ ಬಹುಕಾಲ ಉಳಿಯಬೇಕಾದರೆ ಎಡ, ಬಲ ಹಾಗೂ ಮಧ್ಯ ಮಾರ್ಗೀಯ ಹಲವಾರು ಚಿಕ್ಕಪುಟ್ಟ ಪಕ್ಷಗಳ ಮರ್ಜಿ ಕಾಯ್ದುಕೊಂಡಿರುವುದು ಅನಿವಾರ್ಯ.

ನೆತನ್ಯಾಹು ವಿರುದ್ಧ ಒಟ್ಟು ಎಂಟು ಸಣ್ಣ ರಾಜಕೀಯ ಪಕ್ಷಗಳು ಒಂದಾಗಿವೆ. ಈ ಒಕ್ಕೂಟದಲ್ಲಿ ಚಿಕ್ಕದೊಂದು ಅರಬ್ ಪಕ್ಷವೂ ಇದ್ದು, ಇಸ್ರೇಲ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅರಬ್ ಪಕ್ಷವೊಂದು ಆಡಳಿತ ಸರ್ಕಾರದ ಭಾಗವಾಗಲಿದೆ. ಹೊಸ ಸರ್ಕಾರವು ಮಧ್ಯಮ ಮಾರ್ಗದ ಆಡಳಿತವನ್ನು ಅನುಸರಿಸುವ ಸಾಧ್ಯತೆ ಇದ್ದು, ಪ್ಯಾಲೆಸ್ತೇನ್​ ಜೊತೆಗೆ ಸಂಘರ್ಷ ಕಡಿಮೆ ಮಾಡುವ ಹಾಗೂ ಅಮೆರಿಕದೊಂದಿಗೆ ಉತ್ತಮ ಸಂಬಂಧವಿಟ್ಟುಕೊಳ್ಳುವ ನೀತಿ ಅನುಸರಿಸಲಿದೆ ಎನ್ನಲಾಗಿದೆ. ಅಲ್ಲದೆ ಹೊಸ ಸರ್ಕಾರವು ಯಾವುದೇ ಹೊಸ ಉಪಕ್ರಮಗಳ ಜಾರಿಗೆ ಮುಂದಾಗದು ಎಂದು ಹೇಳಲಾಗಿದೆ.

ಈಗಲೂ ನೆತನ್ಯಾಹು ಬಲಶಾಲಿ

ಈಗಲೂ ಇಸ್ರೇಲ್ ಸಂಸತ್ತಿನಲ್ಲಿ ನೆತನ್ಯಾಹು ಅವರ ಪಕ್ಷವೇ ಅತಿದೊಡ್ಡ ರಾಜಕೀಯ ಪಕ್ಷವಾಗಿರುವುದರಿಂದ ಹೊಸ ಸರ್ಕಾರವನ್ನು ತಮ್ಮೆಲ್ಲ ಬಲದಿಂದ ಅವರು ವಿರೋಧಿಸಲಿದ್ದಾರೆ. ಸದ್ಯ ಅಧಿಕಾರಕ್ಕೆ ಬರಲಿರುವ ಎಂಟು ಪಕ್ಷಗಳ ಒಕ್ಕೂದಲ್ಲಿನ ಒಂದೇ ಒಂದು ಪಕ್ಷ ಹೊರಗೆ ಹೋದರೆ ಸರ್ಕಾರ ಪತನವಾಗಿ ಮತ್ತೆ ನೆತನ್ಯಾಹು ಅವರಿಗೆ ಅವಕಾಶ ಸಿಗಬಹುದು.

ಯಶಸ್ವಿ ಕೊರೊನಾ ಲಸಿಕಾ ಅಭಿಯಾನ

ಇಸ್ರೇಲಿನಲ್ಲಿ ಕಳೆದ ಎರಡು ವರ್ಷದಿಂದಲೂ ರಾಜಕೀಯ ಅಸ್ಥಿರತೆ ಇತ್ತು. ಇದೇ ಕಾರಣದಿಂದ ಕೇವಲ ಎರಡು ವರ್ಷಗಳಲ್ಲಿ 4 ಚುನಾವಣೆಗಳೂ ನಡೆದವು. ಇದರೊಂದಿಗೆ ಕೊರೊನಾ ಬಿಕ್ಕಟ್ಟು ಹಾಗೂ ಇತ್ತೀಚೆಗೆ 11 ದಿನಗಳ ಕಾಲ ನಡೆದ ಗಾಜಾ ಯುದ್ಧದಿಂದ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಆದರೆ, ಕೊನೆಗೂ ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದರಿಂದ ರಾಜಕೀಯ ಅಸ್ಥಿರತೆ ಕೊನೆಗಾಣಬಹುದು ಎಂದು ನಿರೀಕ್ಷಿಸಲಾಗಿದೆ. ಇಡೀ ದೇಶಾದ್ಯಂತ ಯಶಸ್ವಿಯಾಗಿ ಕೋವಿಡ್​ ಲಸಿಕೆ ನೀಡುವ ಮೂಲಕ ಕೊರೊನಾ ಸೋಂಕನ್ನು ದೇಶದಲ್ಲಿ ಬಹುತೇಕ ಹತೋಟಿಗೆ ತರಲಾಗಿದೆ ಎಂಬುದು ಗಮನಾರ್ಹ.

ಎರಡು ವರ್ಷದ ನಂತರ ಹೊಸ ಪ್ರಧಾನಿ

ಸದ್ಯದ ಹೊಸ ಸರ್ಕಾರವು ಎರಡು ವರ್ಷಕ್ಕೂ ಅಧಿಕ ಕಾಲ ಮುಂದುವರೆದಲ್ಲಿ ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಮುಖಂಡ ಯಾಯಿರ್ ಲಾಪಿಡ್​ ದೇಶದ ಪ್ರಧಾನಿಯಾಗಲಿದ್ದಾರೆ.

ವಿಶ್ವಾಸಮತ ಗೆದ್ದರೆ ಮಾತ್ರ ಪ್ರಮಾಣವಚನ

ನೆಸೆಟ್​ ಎಂದು ಕರೆಯಲಾಗುವ ಇಸ್ರೇಲಿನ ಸಂಸತ್ತಿನ ಅಧಿವೇಶನವು ಇಂದು ಸಂಜೆ ನಡೆಯಲಿದೆ. ಹೊಸ ಸರ್ಕಾರವು ವಿಶ್ವಾಸಮತ ಯಾಚನೆ ಮಾಡಲಿದೆ. 120 ಸದಸ್ಯ ಬಲದ ಸಂಸತ್ತಿನಲ್ಲಿ ಹೊಸ ಒಕ್ಕೂಟವು 61 ಸದಸ್ಯರ ಬೆಂಬಲ ಪಡೆಯಬಹುದು ಎನ್ನಲಾಗಿದೆ. ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ನಂತರವಷ್ಟೇ ಹೊಸ ಸರ್ಕಾರ ಪ್ರಮಾನವಚನ ಸ್ವೀಕರಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.