ETV Bharat / bharat

ಗುಜರಾತ್​: ಸುರೇಂದ್ರನಗರದಲ್ಲಿ 110 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತ - ಈಟಿವಿ ಭಾರತ್​ ಕನ್ನಡ ನ್ಯೂಸ್

ಟಿಪ್ಪರ್​ ಹೋಗುವಾಗ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸೇತುವೆ ಕುಸಿತ
ಸೇತುವೆ ಕುಸಿತ
author img

By ETV Bharat Karnataka Team

Published : Sep 24, 2023, 11:10 PM IST

ಗುಜರಾತ್​ : ಗುಜರಾತಿನ ಸುರೇಂದ್ರನಗರ ಜಿಲ್ಲೆಯ ವಸ್ತಾಡಿ ಮತ್ತು ಚೂರ ಗ್ರಾಮಗಳ ನಡುವೆ ಸಂಪರ್ಕಿಸುವ ಸೇತುವೆ ಕುಸಿದಿದ್ದು, ಟಿಪ್ಪರ್​ ಸಮೇತ ಎರಡು ಬೈಕ್‌ಗಳು ನದಿಗೆ ಬಿದ್ದಿವೆ. ನಾಲ್ಕಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಘಟನೆಯಿಂದಾಗಿ ಸ್ಥಳೀಯ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸೇತುವೆ 110 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಇದೀಗ ಕುಸಿತಗೊಂಡಿರುವುದರಿಂದ ಎಲ್ಲ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಸೇತುವೆ ಕುಸಿಯುವ ಮೊದಲು ಮರಳು ಲೋಡ್​ ಮಾಡಿದ ಟಿಪ್ಪರ್​ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಬಹುಭಾರದಿಂದ ಸೇತುವೆಯ ಒಂದು ಭಾಗ ಕುಸಿದಿದೆ. ಪರಿಣಾಮ ಟಿಪ್ಪರ್​ ನೇರವಾಗಿ ನದಿಗೆ ಬಿದ್ದಿದೆ. ಈ ವೇಳೆ ಟಿಪ್ಪರ್​ ಜೊತೆಗೆ ಸಂಚರಿಸುತ್ತಿದ್ದ ಎರಡು ಬೈಕ್‌ಗಳು ಕೂಡ ಬಿದ್ದಿವೆ. ಅಲ್ಲೇ ಇದ್ದ ಸ್ಥಳೀಯರು ಟಿಪ್ಪರ್​ ಚಾಲಕ ಸೇರಿದಂತೆ ನಾಲ್ವರನ್ನು ರಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆಯೇ ಸೇತುವೆ ಶಿಥಿಲೀಕರಣಗೊಂಡಿದ್ದರಿಂದ ಹೊಸ ಸೇತುವೆ ನಿರ್ಮಿಸುವ ಪ್ರಸ್ತಾವನೆ ಬಹಳ ದಿನಗಳಿಂದ ನಡೆಯುತ್ತಿತ್ತು. ಆದರೇ, ಕೇವಲ ವ್ಯವಸ್ಥೆ ಮಾತ್ರ ದುರಸ್ತಿಗೆ ತೃಪ್ತಿಪಟ್ಟಿತ್ತು. ಹೀಗಾಗಿ ಸರಿಯಾದ ದುರಸ್ತಿ ಮಾಡದ ಕಾರಣ ಸೇತುವೆ ಕುಸಿದು ಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೊಂದೆಡೆ ಜಿಲ್ಲಾಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಿ ಈ ಸೇತುವೆ 40 ವರ್ಷ ಹಳೆಯದಾಗಿದ್ದು, ಭಾರೀ ವಾಹನಗಳಿಗೆ ಅಪಾಯವಾಗುವಂತಿತ್ತು. ಆದರಿಂದ ಸೇತುವೆ ಮೇಲೆ ಟಿಪ್ಪರ್​ ಹೋಗುವಾಗ ಕುಸಿದಿದೆ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸೆಂಚುರಿ ಕಂಪನಿಯಲ್ಲಿ ಸ್ಫೋಟ: ಐವರು ಕಾರ್ಮಿಕರು ಸಾವು, ಹಲವರಿಗೆ ಗಾಯ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.