ETV Bharat / bharat

125 ವರ್ಷಗಳಲ್ಲಿ 2ನೇ ಬಾರಿಗೆ ತೆಲಂಗಾಣದಲ್ಲಿ ಅತಿ ಕಡಿಮೆ ತಾಪಮಾನ ದಾಖಲು - Lowest temperature records in Telangana

ತೆಲಂಗಾಣದ ಕುಮುರಂ ಭೀಮ್ ಜಿಲ್ಲೆಯ ಗಿನ್ನೆಧಾರಿ ಪ್ರದೇಶದಲ್ಲಿ ಮಂಗಳವಾರ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, 1897ರ ನಂತರ ಎರಡನೇ ಬಾರಿಗೆ ರಾಜ್ಯದಲ್ಲಿ ಅತಿ ಕಡಿಮೆ ತಾಪಮಾನ ವರದಿಯಾಗಿದೆ.

Lowest temperature records in Telangana
ತೆಲಂಗಾಣದಲ್ಲಿ ಅತಿ ಕಡಿಮೆ ತಾಪಮಾನ ದಾಖಲು
author img

By

Published : Dec 23, 2021, 5:30 PM IST

ಹೈದರಾಬಾದ್​ (ತೆಲಂಗಾಣ): 125 ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ತೆಲಂಗಾಣ ರಾಜ್ಯದಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ. ಕುಮುರಂ ಭೀಮ್ ಜಿಲ್ಲೆಯ ಗಿನ್ನೆಧಾರಿ ಪ್ರದೇಶದಲ್ಲಿ ಮಂಗಳವಾರ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, 1897ರ ನಂತರ ಎರಡನೇ ಬಾರಿಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ.

1897 ರ ಡಿಸೆಂಬರ್ 17 ರಂದು ತೆಲಂಗಾಣದ ನಿಜಾಮಾಬಾದ್‌ನಲ್ಲಿ 4.4 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿತ್ತು. ಆ ಬಳಿಕ 2017ರ ಡಿಸೆಂಬರ್​ 27ರಂದು ಆದಿಲಾಬಾದ್‌ನಲ್ಲಿ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆ ಬಳಿಕ ಇದೀಗ 2021ರ ಡಿಸೆಂಬರ್​ 21ರಂದು 3.5 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಕುಮುರಂ ಭೀಮ್ ಜಿಲ್ಲೆಯ ಜನರು ನಲುಗಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್ ಆಯ್ತು.. ಈಗ ಬಂತು ಒಮಿಕ್ರಾನ್ ಮತ್ತು ಡೆಲ್ಟಾ ಮಿಶ್ರಣ ಡೆಲ್ಮಿಕ್ರಾನ್ !

ಇನ್ನು ಮಂಗಳವಾದ ಆದಿಲಾಬಾದ್ ಜಿಲ್ಲೆಯಲ್ಲಿ ಕೂಡ 4 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ತಾಪಮಾನ, ರಂಗಾರೆಡ್ಡಿಯಲ್ಲಿ 8.4 ಡಿಗ್ರಿ ಮತ್ತು ಹೈದರಾಬಾದ್​ನ ಇತರ ಕೆಲ ಜಿಲ್ಲೆಗಳಲ್ಲಿ 9.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿದು, ಚಳಿ ಮತ್ತು ಶೀತಗಾಳಿ ಹೆಚ್ಚಳವಾಗಲಿದೆ. ಈ ತಿಂಗಳ 27 ರವರೆಗೆ ಇದು ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.