ನವದೆಹಲಿ: ಬೆಂಗಳೂರು ಮೆಟ್ರೋ ರೈಲು ಯೋಜನೆಯ ಎರಡನೇ ಹಂತಕ್ಕೆ ಇದೀಗ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
-
The Govt has approved Bangalore Metro Rail Project Phase 2A from Central Silk Board Junction to K.R. Puram and Phase 2B from K.R. Puram to Airport via Hebbal Junction of total length 58 km. The total completion cost of the project is ₹14,788 crore: Union Minister Piyush Goyal pic.twitter.com/AUnpKyJCKx
— ANI (@ANI) April 20, 2021 " class="align-text-top noRightClick twitterSection" data="
">The Govt has approved Bangalore Metro Rail Project Phase 2A from Central Silk Board Junction to K.R. Puram and Phase 2B from K.R. Puram to Airport via Hebbal Junction of total length 58 km. The total completion cost of the project is ₹14,788 crore: Union Minister Piyush Goyal pic.twitter.com/AUnpKyJCKx
— ANI (@ANI) April 20, 2021The Govt has approved Bangalore Metro Rail Project Phase 2A from Central Silk Board Junction to K.R. Puram and Phase 2B from K.R. Puram to Airport via Hebbal Junction of total length 58 km. The total completion cost of the project is ₹14,788 crore: Union Minister Piyush Goyal pic.twitter.com/AUnpKyJCKx
— ANI (@ANI) April 20, 2021
58 ಕಿಲೋ ಮೀಟರ್ 2ಎ ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆಆರ್ ಪುರಂವರೆಗೆ ಹಾಗೂ 2ಬಿ ಹಂತದಲ್ಲಿ ಕೆಆರ್ ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ 14,788 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆ ಸೇರಿ ಐದೇ ನಿಮಿಷದಲ್ಲಿ ಶವವಾಗಿ ಹೊರ ಬಂದ ಕೊರೊನಾ ಸೋಂಕಿತ ವ್ಯಕ್ತಿ!
ಈ ಯೋಜನೆ ಬೆಂಗಳೂರು ನಗರ ಸಾರಿಗೆ ವ್ಯವಸ್ಥೆ ಸುಗಮಗೊಳಿಸಲಿದ್ದು, ತೀವ್ರ ಬೆಳವಣಿಗೆ, ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ನಗರದಲ್ಲಿ ಮೂಲಸೌಕರ್ಯ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ಒತ್ತು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಯಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣ ಮಾರ್ಗವನ್ನ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಸಿಎಂ ಬಿಎಸ್ವೈ ಉದ್ಘಾಟನೆ ಮಾಡಿದ್ದಾರೆ.