ETV Bharat / bharat

ದೇಶದ ಮೊದಲ ‘BH’​ ಸರಣಿಯ ವಾಹನ ಮುಂಬೈನಲ್ಲಿ ನೋಂದಣಿ - ಬಿಹೆಚ್​ ಸಿರೀಸ್​​

ಯಾವುದೇ ಒಂದು ವಾಹನವೂ ಒಂದು ರಾಜ್ಯದಲ್ಲಿ ನೋಂದಣಿಯಾಗಿ ಬೇರೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗಿ 12 ತಿಂಗಳು ಕಾಲ ಅಲ್ಲೇ ಇಟ್ಟಕೊಂಡರೆ, ಆ ರಾಜ್ಯದಲ್ಲಿ ಮರುನೋಂದಣಿ ಮಾಡಿಸಬೇಕಿತ್ತು. ಇದನ್ನ ತಪ್ಪಿಸಲು ಇದೀಗ ಕೇಂದ್ರ ಸರ್ಕಾರ ಬಿಹೆಚ್ ಸಿರೀಸ್ ಆರಂಭಿಸಿದೆ..

The first vehicle of Bharat series in the country is registered in Mumbai!
ದೇಶದ ಮೊದಲ ಬಿಹೆಚ್​ ಸರಣಿಯ ವಾಹನ ಮುಂಬೈನಲ್ಲಿ ನೋಂದಣಿ
author img

By

Published : Oct 27, 2021, 7:52 PM IST

Updated : Oct 27, 2021, 8:01 PM IST

ಮುಂಬೈ : ದೇಶದೊಳಗೆ ಯಾವುದೇ ರಾಜ್ಯಕ್ಕೆ ಹೋದರೂ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲದೆ ಓಡಾಡಲು ನೆರವಾಗುವಂತೆ ಜಾರಿ ಮಾಡಲಾಗಿದ್ದ ಬಿಹೆಚ್​ ಸಿರೀಸ್​​ನ ವಾಹನ ನಂಬರ್​​ ನೋಂದಣಿ ಆರಂಭವಾಗಿದೆ. ಮುಂಬೈನಲ್ಲಿ ಮೊದಲ ವಾಹನ ನೋಂದಣಿಯಾಗಿದೆ.

ಮಹಾರಾಷ್ಟ್ರ ಸಾರಿಗೆ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಅವರ ಸಮ್ಮುಖದಲ್ಲಿ 'ಬಿಹೆಚ್' ಸರಣಿಯ ಮೊದಲ ನೋಂದಾಯಿತ ವಾಹನವನ್ನು ಅನಾವರಣಗೊಳಿಸಲಾಯಿತು. ಆರ್‌ಸಿಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯ ವಾಹನವನ್ನು ಈ ಸರಣಿಯಲ್ಲಿ ನೋಂದಾಯಿಸಲಾಗಿದೆ.

ಆರ್‌ಸಿಎಫ್‌ನಲ್ಲಿ ಕೆಲಸ ಮಾಡುತ್ತಿರುವ ಶ್ರದ್ಧಾ ಸುತೆ ಎಂಬುವರ ವಾಹನವನ್ನು ಹೊಸ ಬಿಹೆಚ್​​ ಸರಣಿಯ ಪ್ರಕಾರ ನೋಂದಾಯಿಸಲಾಗಿದೆ. ರಾಜ್ಯ ಸಾರಿಗೆ ಸಚಿವರ ಸಮನ್ವಯದಿಂದ ಕೇವಲ ಎಂಟು ದಿನಗಳಲ್ಲಿ ಸಂಪೂರ್ಣ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸುತೆ ತಿಳಿಸಿದ್ದಾರೆ.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನ ತೆಗೆದುಕೊಂಡು ಹೋದರೆ, ಆ ರಾಜ್ಯದಲ್ಲಿ ಮರು ನೋಂದಣಿ ಮಾಡಬೇಕಿತ್ತು. ಇದು ರಾಜ್ಯದಿಂದ ರಾಜ್ಯಕ್ಕೆ ಓಡಾಡೋರಿಗೆ ದೊಡ್ಡ ತಲೆನೋವಾಗಿತ್ತು.

ಯಾವುದೇ ಒಂದು ವಾಹನವೂ ಒಂದು ರಾಜ್ಯದಲ್ಲಿ ನೋಂದಣಿಯಾಗಿ ಬೇರೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗಿ 12 ತಿಂಗಳು ಕಾಲ ಅಲ್ಲೇ ಇಟ್ಟಕೊಂಡರೆ, ಆ ರಾಜ್ಯದಲ್ಲಿ ಮರುನೋಂದಣಿ ಮಾಡಿಸಬೇಕಿತ್ತು. ಇದನ್ನ ತಪ್ಪಿಸಲು ಇದೀಗ ಕೇಂದ್ರ ಸರ್ಕಾರ ಬಿಹೆಚ್ ಸಿರೀಸ್ ಆರಂಭಿಸಿದೆ.

ಬಿಹೆಚ್ ಸರಣಿ ಯಾರಿಗೆ ಲಭ್ಯ? : 4 ಅಥವಾ ಹೆಚ್ಚಿನ ರಾಜ್ಯಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕರರಿಗೆ, ರಕ್ಷಣಾ ಪಡೆಗಳ ಸಿಬ್ಬಂದಿ, ಕೇಂದ್ರ, ರಾಜ್ಯ ಸರ್ಕಾರದ ನೌಕರರಿಗೆ, ಸರ್ಕಾರಿ ಸ್ವಾಮ್ಯದ ಉದ್ಯಮಗಳ ನೌಕರರ ಖಾಸಗಿ ವಾಹನಗಳಿಗೆ ಹೊಸ ಸರಣಿಯಲ್ಲಿ ನಂಬರ್ ನೀಡಲಾಗುತ್ತದೆ.

Last Updated : Oct 27, 2021, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.