ETV Bharat / bharat

ಏಷ್ಯಾದ ಮೊದಲ ಮರಾಠಿ ಮಹಿಳಾ ರೈಲು ಚಾಲಕಿ ಬಗ್ಗೆ ನಿಮಗೆಷ್ಟು ಗೊತ್ತು? - The first Marathi woman train driver in Asia

ಜೀವನದಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂಬ ಕನಸು ಸುರೇಖಾ ಅವರನ್ನು ಕಾಡುತ್ತಿತ್ತು. ಆ ಕನಸಿಗೆ ಕೇಂದ್ರ ರೈಲ್ವೇ ಮತ್ತು ಸುರೇಖ್ ಯಾದವ್ ಕುಟುಂಬ ನೀರೆರೆದಿದೆ. ಪರಿಣಾಮ ಇಂದು ಅವರು ಭಾರತದಲ್ಲಿ ಮಾತ್ರವಲ್ಲ, ಏಷ್ಯಾದಲ್ಲೇ ಮೊದಲ ಮಹಿಳಾ ರೈಲು ಚಾಲಕಿ ಎಂಬ ಬಿರುದು ಪಡೆದಿದ್ದಾರೆ.

ಸುರೇಖಾ ಯಾದವ್ ಅವರು ಮೊದಲ ಮಹಿಳಾ ರೈಲು ಚಾಲಕಿ
ಸುರೇಖಾ ಯಾದವ್ ಅವರು ಮೊದಲ ಮಹಿಳಾ ರೈಲು ಚಾಲಕಿ
author img

By

Published : Mar 7, 2022, 8:07 PM IST

ಮುಂಬೈ: ಅದೊಂದು ಕಾಲವಿತ್ತು, ಮಹಿಳೆಯರು ಒಬ್ಬಂಟಿಯಾಗಿ ನಡೆದುಹೋಗಲೂ ಸಹ ಭಯ ಪಡುತ್ತಿದ್ದರು. ಆ ಕಾಲಘಟ್ಟದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡುವುದು ಅಂದರೆ ಸುಲಭದ ಮಾತಾಗಿರಲಿಲ್ಲ. ಅಂತಹ ಸಂದರ್ಭದಲ್ಲೂ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮರಾಠಿ ಹುಡುಗಿ ಸುರೇಖ್ ಯಾದವ್ ರೈಲು ಓಡಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದರು.

ಅಂದು ಸುರೇಖ್‌ ಯಾದವ್‌ ತೆಗೆದುಕೊಂಡ ಆ ನಿರ್ಧಾರ ಇಂದು ಅವರನ್ನು ಭಾರತೀಯ ರೈಲ್ವೇಯಲ್ಲಷ್ಟೇ ಅಲ್ಲದೇ ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿಯನ್ನಾಗಿದೆ ಮಾಡಿದೆ. ಈ ಅಪರೂಪದ ಉದಾಹರಣೆಯಿಂದ ಪ್ರೇರೇಪಿತರಾಗಿ ಭಾರತೀಯ ರೈಲ್ವೇಯಲ್ಲಿಂದು ನೂರಾರು ಮಹಿಳೆಯರು ರೈಲು ಓಡಿಸುತ್ತಿದ್ದಾರೆ.

ಕನಸು ನನಸು: ಯಾದವ್ ಅವರು ಸತಾರಾ ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದವರು. ಚಿಕ್ಕಂದಿನಿಂದಲೂ ಶಿಕ್ಷಣದ ಬಗ್ಗೆ ಅತೀವ ಆಸಕ್ತಿ ಇದ್ದುದರಿಂದ 1986ರಲ್ಲಿ ಕರಾದ್‌ನ ಸರ್ಕಾರಿ ಪಾಲಿಟೆಕ್ನಿಕ್‌ಗೆ ಪ್ರವೇಶ ಪಡೆದು ಎಲೆಕ್ಟ್ರಿಕಲ್ ಅಧ್ಯಯನದಲ್ಲಿ ಪದವಿ ಪಡೆದರು. ಇದಾದ ನಂತರ ಜೀವನದಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂಬ ಕನಸು ಅವರನ್ನು ಕಾಡುತ್ತಿತ್ತು. ಆ ಕನಸಿಗೆ ಕೇಂದ್ರ ರೈಲ್ವೇ ಮತ್ತು ಸುರೇಖ್ ಯಾದವ್ ಕುಟುಂಬದ ನೀರೆರೆದಿದೆ. ಪರಿಣಾಮ ಇಂದು ಅವರು ಭಾರತದಲ್ಲಿ ಮಾತ್ರವಲ್ಲ, ಏಷ್ಯಾದಲ್ಲೇ ಮೊದಲ ಮಹಿಳಾ ರೈಲು ಚಾಲಕಿಯಾಗಿ ಎಂಬ ಬಿರುದನ್ನು ಪಡೆದಿದ್ದಾರೆ.

ಸುರೇಖಾ ಯಾದವ್ ಅವರು ಮೊದಲ ಮಹಿಳಾ ರೈಲು ಚಾಲಕಿ

ಇದನ್ನೂ ಓದಿ: 'ಅತಿಥಿ ಸತ್ಕಾರ' ಮಾಡಿ ಉದ್ಯಮಿಯಾಗಿ ಬೆಳೆದ ಮೈಸೂರು ಮಹಿಳೆ!

ರೈಲು ಚಾಲಕಿ ಎಂಬ ಹೆಮ್ಮೆ ಇದೆ: ಸುರೇಖಾ ಯಾದವ್ ಹೇಳುವಂತೆ, ಏಷ್ಯಾ ಖಂಡದಲ್ಲಿ ನಾನು ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಮ್ಮೆ ಇದೆ. ಆದರೆ, ಅದಕ್ಕಿಂತ ಹೆಚ್ಚಾಗಿ ನನ್ನ ಈ ಕೆಲಸದಿಂದ ಹಲವರು ಸ್ಫೂರ್ತಿ ಪಡೆದು ರೈಲು ಓಡಿಸಲು ಮುಂದಾಗಿದ್ದಾರೆ ಎಂದರು.

ಸುರೇಖ್ ಯಾದವ್ ಅವರು ಮುಂಬೈನಲ್ಲಿನ ಸೆಂಟ್ರಲ್ ರೈಲ್ವೇಯಲ್ಲಿ ಮೊದಲ ಮಹಿಳಾ ಚಾಲಕಿಯಾಗಿ ವೃತ್ತಿ ಜೀವನ ಆರಂಭಿಸಿ ಈಗ ಎಲ್ಲರೂ ಗುರುತಿಸುವಂತ ವ್ಯಕ್ತಿತ್ವ ತಮ್ಮದಾಗಿಸಿಕೊಂಡಿದ್ದಾರೆ.

ಏಷ್ಯಾದ ಮೊದಲ ಮರಾಠಿ ಮಹಿಳಾ ರೈಲು ಚಾಲಕಿ

ನಾನು ಮೊದಲು ಸೆಂಟ್ರಲ್ ರೈಲ್ವೆಯ ಮುಂಬೈ ವಿಭಾಗದಲ್ಲಿ ಡ್ರೈವರ್ ಆಗಿ ಆಯ್ಕೆಯಾದೆ. ನಂತರ ಸೆಪ್ಟೆಂಬರ್ 1989 ರಲ್ಲಿ ಸರಕು ಸಾಗಣೆ ರೈಲಿಗೆ ಸಹಾಯಕ ಇಂಜಿನ್ ಚಾಲಕಿಯಾದೆ. ಮಾರ್ಚ್ 1993 ರವರೆಗೆ ಅಲ್ಲಿಯೇ ಕೆಲಸ ನಿರ್ವಹಿಸಿದೆ. ಮಾರ್ಚ್ 1993 ರಿಂದ ಆಗಸ್ಟ್ 1993 ರವರೆಗೆ ಇಗತ್ಪುರಿ ಘಾಟ್ ಮತ್ತು ಸೆಪ್ಟೆಂಬರ್ 1993 ರಿಂದ ಏಪ್ರಿಲ್ 1994 ರವರೆಗೆ ಲೋನಾವ್ಲಾ ಘಾಟ್ ನಲ್ಲಿ ರೈಲು ಓಡಿಸುತ್ತಿದ್ದೆ. ಘಾಟ್‌ಗಳಲ್ಲಿ ರೈಲು ಓಡಿಸುವುದು ತುಂಬಾ ಕಷ್ಟ. ಆದರೆ, ಸಿಗ್ನಲ್, ನಿಲ್ದಾಣ, ರೈಲಿನ ವೇಗ, ಟ್ರ್ಯಾಕ್​ಗಳನ್ನು ಬದಲಾಯಿಸುವಾಗ ಎಚ್ಚರಿಕೆ ಬಹಳ ಮುಖ್ಯ. ಆದರೂ ಇದರಿಂದ ನಾನು ಭಯಭೀತಳಾಗುತ್ತಿರಲಿಲ್ಲ ಎನ್ನುತ್ತಾರೆ ಯಾದವ್.

ಆಗಸ್ಟ್ 1994 ರಿಂದ ಮಾರ್ಚ್ 1995 ರವರೆಗೆ ನಾನು ಸರಕು ರೈಲಿನ ಚಾಲಕಿಯಾಗಿದ್ದೆ. 1988 ರಲ್ಲಿ ಮೊದಲ ಬಾರಿಗೆ ರೈಲ್ವೆಯ ಮೊದಲ ಮಹಿಳಾ ವಿಶೇಷ ರೈಲನ್ನು ಓಡಿಸಿದ ಗೌರವವೂ ನನಗೆ ಲಭಿಸಿತು. ನನ್ನ ಕೆಲಸಕ್ಕಾಗಿ ಭಾರತ ಸರ್ಕಾರದಿಂದ ನನಗೆ ಪ್ರಥಮ ಮಹಿಳೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಹೆಮ್ಮೆಯಿಂದಲೇ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.