ETV Bharat / bharat

'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು? - ಕಾರ್ತಿಕಿ ಗೊನ್ಸಾಲ್ವೆಸ್ ಮಾಹಿತಿ

ಕಾರ್ತಿಕಿ ಗೋನ್ಸ್‌ಸ್ಲೇವ್ಸ್‌ ನಿರ್ದೇಶನ ಹಾಗು ಗುನೀತ್ ಮೊಂಗಾ ಅವರ ನಿರ್ಮಾಣದ ‘ದ ಎಲಿಫೆಂಟ್‌ ವಿಸ್ಪರರ್ಸ್‌’ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.

ದ ಎಲೆಫೆಂಟ್‌ ವಿಸ್ಪರರ್ಸ್‌
The Elephant Whisperers
author img

By

Published : Mar 13, 2023, 7:39 AM IST

Updated : Mar 13, 2023, 10:23 PM IST

ಲಾಸ್‌ ಎಂಜಲಿಸ್(ಯುಎಸ್‌ಎ)ಚೆನ್ನೈ(ತಮಿಳುನಾಡು) : ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ "ದಿ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರವಾಗಿ ಹೊರಹೊಮ್ಮಿದ್ದು, ಪ್ರತಿಷ್ಟಿತ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಇದು ಎಂಬ ಖ್ಯಾತಿಗೂ ಪಾತ್ರವಾಗಿದೆ.

'ದಿ ಎಲಿಫೆಂಟ್ ವಿಸ್ಪರರ್ಸ್' ಕಥೆ ಏನು?: ಸಾಕ್ಷ್ಯಚಿತ್ರದ ಕಥಾವಸ್ತು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಸುತ್ತ ಸುತ್ತುತ್ತದೆ. ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ ಇದರಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಲಾಗಿದೆ. ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಡಾಕ್ಯುಮೆಂಟರಿಯಲ್ಲಿ ಮೂಡಿಬಂದಿದೆ. ಇದೀಗ 41 ನಿಮಿಷಗಳ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಭಾರತಕ್ಕೆ ಕೀರ್ತಿ ತಂದಿದೆ.

ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ: ಆಸ್ಕರ್‌ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಮಾತನಾಡಿದ ಕಾರ್ತಿಕಿ ಗೊನ್ಸಾಲ್ವಿಸ್, "ನಮ್ಮ ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಾಂಧವ್ಯ ಹಾಗೂ ಸ್ಥಳೀಯ ಸಮುದಾಯಗಳ ಗೌರವಕ್ಕಾಗಿ ಮತ್ತು ಇತರೆ ಜೀವಿಗಳ ಕುರಿತು ಸಹಾನುಭೂತಿ, ಸಹಬಾಳ್ವೆಯ ಕುರಿತು ಮಾತನಾಡಲು ನಾನು ಇಂದು ಇಲ್ಲಿ ನಿಂತಿದ್ದೇನೆ" ಎಂದು ಹೇಳಿದರು.

'ನನಗೆ ಆನೆ ಗೊತ್ತು, ಆಸ್ಕರ್​ ಗೊತ್ತಿಲ್ಲ': "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರದಲ್ಲಿ ಬೊಮ್ಮನ್​ ಮತ್ತು ಬೆಳ್ಳಿ​ ಮುಖ್ಯ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ. ಈ ಡಾಕ್ಯುಮೆಂಟರಿ ಆಸ್ಕರ್​ ಪ್ರಶಸ್ತಿಯನ್ನು ಪಡೆದಕ್ಕಾಗಿ ಬೆಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ. ರಘು ಎಂಬ ಹೆಸರಿನ ಮರಿ ಆನೆಯನ್ನು ಮೊದಲು ನೋಡಿದಾಗ ಅದರ ಬಾಲ ತುಂಡಾಗಿ ದಯನೀಯ ಸ್ಥಿತಿಯಲ್ಲಿದ್ದು, ಪತಿ ಬೊಮ್ಮನ್​ ಬೆಂಬಲದಿಂದ ಮಗುವಿನಂತೆ ಕಾಪಾಡಿದ್ದು ಎಂದು ಬೆಳ್ಳಿ ನೆನಪಿಸಿಕೊಂಡರು.

oscar to the elephant whisperers
ದ ಎಲಿಫೆಂಟ್‌ ವಿಸ್ಪರರ್ಸ್​​ಗೆ ಆಸ್ಕರ್

ಬುಡಕಟ್ಟು ಜನಾಂಗದವರಾಗಿರುವ ಬೆಳ್ಳಿ, ತಾಯಿಯಿಲ್ಲದ ಅದೆಷ್ಟೋ ಮರಿ ಆನೆಗಳನ್ನು ತನ್ನ ಸ್ವಂತ ಎಂದೇ ಸಾಕಿದ್ದಾರೆ. ತನ್ನ ಪೂರ್ವಜರು ಕೂಡ ಇದೇ ಕೆಲಸವನ್ನು ಮಾಡಿದ್ದರಿಂದ ನನಗದು ರಕ್ತಗತವಾಗಿ ಬಂದಿದೆ ಎಂದು ಹೇಳಿದರು. ಬಳಿಕ, "ನನಗೆ ಆನೆ ಬಗ್ಗೆ ಮಾತ್ರ ಗೊತ್ತು. ಆಸ್ಕರ್​ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಸರ್ಕಾರದಿಂದ ಅನುಮೋದನೆ ಪಡೆದು ಸಾಕ್ಷ್ಯಚಿತ್ರ ಮಾಡಲು ನನ್ನನ್ನು ಸಂಪರ್ಕಿಸಿದರು. ಕಾರ್ತಿಕಿ ಅವರು ಆನೆಗಳೊಂದಿಗೆ ನಡೆಸುವ ಸಂವಹನ, ಅವುಗಳನ್ನು ಸ್ನಾನ ಮಾಡಿಸುವುದು ಎಂಬಿತ್ಯಾದಿ ವಿಷಯಗಳನ್ನು ಚಿತ್ರೀಕರಿಸಿದ್ದಾರೆ. ಪ್ರಶಸ್ತಿ ಸಿಕ್ಕಿರುವ ಬಗ್ಗೆ ನನಗೆ ಅಭಿಮಾನವಿದೆ" ಎಂದು ಹೇಳಿದರು.

ಇದನ್ನೂ ಓದಿ: RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್‌ ಗರಿ!

ಕಾರ್ತಿಕಿ ಗೊನ್ಸಾಲ್ವೆಸ್ ಯಾರು?: 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನ ಮಾಡಿದ್ದಾರೆ. ಸಿಖ್ಯ ಎಂಟರ್‌ಟೈನ್‌ಮೆಂಟ್‌ನ ಗುನೀತ್ ಮೊಂಗಾ ಮತ್ತು ಅಚಿನ್ ಜೈನ್ ನಿರ್ಮಿಸಿದ್ದಾರೆ. ಮೂಲತಃ ತಮಿಳುನಾಡಿನವರಾದ ಕಾರ್ತಿಕಿ, ಡಾಕ್ಯುಮೆಂಟರಿ ಫಿಲ್ಮ್‌ ಮೇಕರ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಉತ್ತಮ ಫೋಟೋಗ್ರಾಫರ್ ಕೂಡ ಹೌದು. ಈ ಹಿಂದೆ ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿ ಚಾನೆಲ್‌ಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಕರ್‌ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಮೋಹಕ ನೋಟ

ಆಸ್ಕರ್ ರೇಸ್‌ನಲ್ಲಿದ್ದ ಸಾಕ್ಷ್ಯಚಿತ್ರಗಳಿವು..: 'ದಿ ಎಲಿಫೆಂಟ್ ವಿಸ್ಪರರ್ಸ್' ಜೊತೆಗೆ 'ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ‘ಹಾಲ್‌ ಔಟ್’, ‘ಹೌ ಡು ಯು ಮೆಷರ್‌ ಎ ಈಯರ್?' ಮತ್ತು 'ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಹಾಗೂ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಸಾಕ್ಷ್ಯಚಿತ್ರಗಳು ನಾಮನಿರ್ದೇಶನಗೊಂಡಿದ್ದವು. ಅಂತಿಮವಾಗಿ ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' ಪ್ರಶಸ್ತಿ ಲಭಿಸಿದೆ.

Last Updated : Mar 13, 2023, 10:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.