ಹೈದರಾಬಾದ್ (ತೆಲಂಗಾಣ): ಪ್ರಸ್ತುತ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇರುವ ಮೀಸಲಾತಿಯನ್ನು ಕಿತ್ತುಹಾಕಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು.
ಇಲ್ಲಿಗೆ ಸಮೀಪದ ಚೆವೆಲ್ಲಾದಲ್ಲಿ ಭಾನುವಾರ ನಡೆದ ವಿಜಯ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಈ ವರ್ಷಾಂತ್ಯದಲ್ಲಿ ದಕ್ಷಿಣ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಕಳೆದ ಎಂಟು-ಒಂಬತ್ತು ವರ್ಷಗಳಿಂದ ತೆಲಂಗಾಣ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ಬಿಜೆಪಿ ಹೋರಾಟ ನಿಲ್ಲುವುದಿಲ್ಲ ಎಂದರು.
ಕೆಸಿಆರ್ಗೆ ಪ್ರಧಾನಿ ಸ್ಥಾನ ಖಾಲಿ ಇಲ್ಲ: "ಕೆಸಿಆರ್ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಕೆಸಿಆರ್.. ಪ್ರಧಾನಿ ಸ್ಥಾನ ಖಾಲಿ ಇಲ್ಲ. ಮುಂದಿನ ಚುನಾವಣೆಯ ನಂತರವೂ ಮೋದಿಯೇ ಪ್ರಧಾನಿಯಾಗುತ್ತಾರೆ. ಕೆಸಿಆರ್.. ಮೊದಲು ಸಿಎಂ ಸ್ಥಾನ ಭದ್ರಪಡಿಸಿಕೊಂಡರೆ ಸಾಕು. ನಾವು ಅಧಿಕಾರಕ್ಕೆ ಬಂದು ವಿಮೋಚನಾ ದಿನ ಆಚರಿಸುತ್ತೇವೆ. ತೆಲಂಗಾಣದ ಮಜ್ಲಿಸ್‌ಗೆ ಬಿಜೆಪಿ ಹೆದರುವುದಿಲ್ಲ, ಕೆಸಿಆರ್ ಕಾರಿನ ಸ್ಟೀರಿಂಗ್ ಮಜ್ಲಿಸ್ ಕೈಯಲ್ಲಿದೆ ಎಂದು ಅಮಿತ್ ಶಾ ಆರೋಪಿಸಿದರು.
ಪೇಪರ್ ಲೀಕೇಜ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ನಾಯಕ ಸಂಜಯ್ಗೆ ಜೈಲು: ಟಿಎಸ್‌ಪಿಎಸ್‌ಸಿ ಪರೀಕ್ಷೆಯ ಪತ್ರಿಕೆಗಳು ಸೋರಿಕೆಯಾಗುತ್ತಿರುವ ಸಮಸ್ಯೆಗಳ ಬಗ್ಗೆ ಕೆಸಿಆರ್ ಒಂದೇ ಒಂದು ಮಾತನ್ನೂ ಆಡಿಲ್ಲ. ಕೆಸಿಆರ್ ಸಿಎಂ ಯುವಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಸೋರಿಕೆಯಿಂದ ನಿರುದ್ಯೋಗಿಗಳ ಬದುಕು ಕತ್ತಲೆಯಲ್ಲಿ ಮುಳುಗಿದೆ. ಪೇಪರ್ ಲೀಕೇಜ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ರಾಜ್ಯಾರ್ಧಯಕ್ಷ ಬಂಡಿ ಸಂಜಯ್ ಅವರನ್ನು ಜೈಲಿಗೆ ಹಾಕಿದರು. ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜೈಲಿಗೆ ಹೋಗುವ ಭಯವಿಲ್ಲ, 24 ಗಂಟೆಯೊಳಗೆ ಬಂಡಿ ಸಂಜಯ್ ಗೆ ಜಾಮೀನು ಸಿಕ್ಕಿದೆ ಎಂದು ಅಮಿತ್ ಶಾ ತಿಳಿಸಿದರು.
ಇದನ್ನೂಓದಿ:ದ.ಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು ಸಿಡಿ ರಿಲೀಸ್ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದೇಕೆ?: ಡಿಕೆಶಿ
ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ನ್ಯಾಯಾಧೀಶರಿಂದ ತನಿಖೆ ಆಗಲಿ: ಈ ಪ್ರಶ್ನೆ ಪತ್ರಿಕೆ ಸೋರಿಕೆಗಳ ಸರ್ಕಾರವು ಮುಂದುವರಿಯಲು ಅರ್ಹವಾಗಿದೆಯೇ? TSPSC ಸೋರಿಕೆಯನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ತೆಲಂಗಾಣದ ಬಡ ಜನರನ್ನು ಮೋದಿಯಿಂದ ದೂರ ಮಾಡಲು ಕೆಸಿಆರ್ಗೆ ಸಾಧ್ಯವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ತನ್ನಿ ಎಂದು ಅಮಿತ್ ಶಾ ಜನತೆಗೆ ಮನವಿ ಮಾಡಿದರು.
ತೆಲಂಗಾಣದಲ್ಲಿ ಹೆದ್ದಾರಿಗಳಿಗೆ ಒಂದು ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ರಾಜ್ಯಕ್ಕೆ ಕೇಂದ್ರದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರದಿಂದ ಸಾವಿರಾರು ಕೋಟಿ ರೂಪಾಯಿ ಹರಿದು ಬರುತ್ತಿದೆ. ಆದರೆ ಜನರಿಗೆ ಸಿಗುತ್ತಿದೆಯೇ? ಎಂದು ಕಾರ್ಯಕರ್ತರನ್ನು ಶಾ ಪ್ರಶ್ನಿಸಿದರು.
ರಾಮಗುಂಡಂ ಪವರ್ ಸ್ಟೇಷನ್, ಸಿಕಂದರಾಬಾದ್ ನಿಲ್ದಾಣದ ಆಧುನೀಕರಣ ಮತ್ತು ಎಂಎಂಟಿಎಸ್ ವಿಸ್ತರಣೆಗೆ ಹಣ ನೀಡಲಾಗಿದೆ. ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ) ಮತ್ತು ಕೆಸಿಆರ್ ವಿರುದ್ಧದ ಸಾರ್ವಜನಿಕ ಆಕ್ರೋಶವನ್ನು ಇಡೀ ಜಗತ್ತು ಗಮನಿಸುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂಓದಿ:ಬಿಜೆಪಿಯೊಳಗೆ ಲಿಂಗಾಯತ ನಾಯಕರನ್ನು ಮುಗಿಸುವ ವ್ಯವಸ್ಥಿತ ಸಂಚು: ಸಿದ್ದರಾಮಯ್ಯ