ETV Bharat / bharat

ಕೊರೊನಾಗೆ ಜಗತ್ತು ತಲ್ಲಣ: ಒಂದು ವರ್ಷದಲ್ಲಿ 7 ಕೋಟಿ ಜನರಿಗೆ ಅಂಟಿದ ವೈರಸ್​​ - ಪ್ರಪಂಚದಲ್ಲಿ 7 ಕೋಟಿ ಕೋವಿಡ್​ ಕೇಸ್​

ಒಂದು ವರ್ಷದ ಅವಧಿಯಲ್ಲಿ 7,07,45,886 ಜನರಿಗೆ ಕೋವಿಡ್​ ಅಂಟಿದ್ದು, 15,88,911 ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಅಮೆರಿಕ, ಬ್ರೆಜಿಲ್​​, ಭಾರತ, ಮೆಕ್ಸಿಕೋ, ಇಂಗ್ಲೆಂಡ್​ ಹಾಗೂ ಇಟಲಿ ದೇಶಗಳು ಮುಂಚೂಣಿಯಲ್ಲಿವೆ.

Global COVID-19 tracker
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​
author img

By

Published : Dec 11, 2020, 5:58 PM IST

ಹೈದರಾಬಾದ್​: ಇಡೀ ವಿಶ್ವದಲ್ಲಿ ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಕಾರಣವಾಗಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡಿದೆ ಕಣ್ಣಿಗೆ ಕಾಣದ ಕೊರೊನಾ ವೈರಸ್​. ಒಂದು ವರ್ಷದ ಅವಧಿಯಲ್ಲಿ ವಿಶ್ವದಾದ್ಯಂತ 7 ಕೋಟಿಗೂ ಹೆಚ್ಚು (7,07,45,886) ಜನರನ್ನು ತನ್ನ ಬಲೆಯಲ್ಲಿ ಸಿಲುಕಿಸಿಕೊಂಡಿದೆ. ಇವರಲ್ಲಿ 15,88,911 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, 4,91,72,205 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,60,39,393 ಇದ್ದು, ಮೃತರ ಸಂಖ್ಯೆ 2,99,692ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: 'ಫೈಜರ್'​ಗೆ ಅಸ್ತು ಎಂದ ಸೌದಿ; ಉಚಿತ ಲಸಿಕೆ ನೀಡಲು ಬಹ್ರೇನ್ ರೆಡಿ

ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 97,96,992 ಕೇಸ್​ಗಳು ಪತ್ತೆಯಾಗಿದ್ದು, 1,42,222 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 67,83,543 ಪ್ರಕರಣಗಳು ಹಾಗೂ 1,79,801 ಸಾವುಗಳು ವರದಿಯಾಗಿವೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 25,69,126 ಕೇಸ್​​ಗಳಿದ್ದು, 45,280 ಜನರು ಸಾವನ್ನಪ್ಪಿದ್ದಾರೆ.

ಅಮೆರಿಕ, ಬ್ರೆಜಿಲ್​​, ಭಾರತದ ಬಳಿಕ ಸಾವಿನ ಸಂಖ್ಯೆಯಲ್ಲಿ ಮೆಕ್ಸಿಕೋ, ಇಂಗ್ಲೆಂಡ್​ ಹಾಗೂ ಇಟಲಿ ಕ್ರಮವಾಗಿ 4, 5 ಹಾಗೂ 6ನೇ ಸ್ಥಾನದಲ್ಲಿವೆ. ಒಟ್ಟು 218 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Global COVID-19 tracker
ಗ್ಲೋಬಲ್​ ಕೋವಿಡ್-19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 86,688 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.