ETV Bharat / bharat

12ನೇ ತರಗತಿ ಪರೀಕ್ಷೆ ನಡೆಯುವುದು ಖಚಿತ ; ಜೂನ್‌ 1ಕ್ಕೆ ದಿನಾಂಕ ನಿಗದಿ ಸಾಧ್ಯತೆ - ಶಾರ್ಟ್​ ಫಾರ್ಮ್ಯಾಟ್

ಪೂರ್ವ ಪರೀಕ್ಷೆ ಚಟುವಟಿಕೆ ಹಾಗೂ ಪರೀಕ್ಷಾ ನಂತರದ ಹಂತಗಳು ಸಹ ಒಳಗೊಂಡಿವೆ. ಪರೀಕ್ಷೆಗಳು ಕೇವಲ ಮುಖ್ಯ ವಿಷಯಗಳಿಗೆ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ..

ಶಿಕ್ಷಣ ಸಚಿವ ರಮೇಶ್ ಫೋಖ್ರಿಯಾಲ್
ಶಿಕ್ಷಣ ಸಚಿವ ರಮೇಶ್ ಫೋಖ್ರಿಯಾಲ್
author img

By

Published : May 23, 2021, 6:17 PM IST

Updated : May 23, 2021, 11:03 PM IST

ನವದೆಹಲಿ : 12ನೇ ತರಗತಿ ಸಿಬಿಎಸ್​ಸಿ ಪರೀಕ್ಷೆ ಕುರಿತ ವಿದ್ಯಾರ್ಥಿಗಳ ಹಾಗೂ ಪೋಷಕರ ಗೊಂದಲಕ್ಕೆ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಕೊಂಚ ತೆರೆ ಎಳೆದಿದ್ದಾರೆ.

ಈ ಕುರಿತು ಇಂದು ನಡೆದ ಸಚಿವರ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದ್ದು, ಪರೀಕ್ಷೆ ರದ್ದಾಗುವುದಿಲ್ಲ ಎಂಬ ಸೂಚನೆ ನೀಡಿದ್ದಾರೆ. ಜೊತೆಗೆ ಈ ಕುರಿತು ಜೂನ್ 1ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

  • I'm confident we will be able to arrive at an informed, collaborative decision regarding the Class 12th board exams and remove the uncertainty among student's and parent's minds by informing them of our final decision at the earliest. pic.twitter.com/eVny4JV3Yf

    — Dr. Ramesh Pokhriyal Nishank (@DrRPNishank) May 23, 2021 " class="align-text-top noRightClick twitterSection" data=" ">

ಅಲ್ಲದೆ ಬೋರ್ಡ್ ಪರೀಕ್ಷೆಯನ್ನು ಶಾರ್ಟ್​ ಫಾರ್ಮ್ಯಾಟ್​​​​ನಲ್ಲಿ ನಡೆಸಲು ಆಸಕ್ತಿ ತೋರಿದ್ದು, ರಾಜ್ಯ ಮಂಡಳಿಗಳಿಗೆ ತಮ್ಮದೇ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಲಾಗುವುದು ಎಂಬ ಕುರಿತು ಚರ್ಚೆ ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ಸಲಹೆಯಂತೆ ಸಭೆ ಅತ್ಯಂತ ಫಲಪ್ರದವಾಯಿಗಿದೆ. ಮೇ 25ರೊಳಗೆ ರಾಜ್ಯ ಸರ್ಕಾರಗಳು ತಮ್ಮ ವಿವರವಾದ ಸಲಹೆಗಳನ್ನು ನಮಗೆ ಕಳುಹಿಸುವಂತೆ ವಿನಂತಿಸಿದ್ದೇನೆ ಶಿಕ್ಷಕರ ಜೊತೆ, ಮಕ್ಕಳ ಆರೋಗ್ಯವು ನಮಗೆ ಮುಖ್ಯ ಎಂದು ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

ಇತ್ತ ಪರೀಕ್ಷೆ ನಡೆಸುವತ್ತ ಸಿಬಿಇ ಮಂಡಳಿ ಎರಡು ಅಂಶಗಳನ್ನ ಪ್ರಸ್ತಾಪಿಸಿದೆ. ಮೊದಲನೆಯದಾಗಿ ಪರೀಕ್ಷೆಗಳ ಅವಧಿಯನ್ನ ಮೂರು ತಿಂಗಳೊಳಗೆ ಮುಗಿಸುವುದು.

ಇದರಲ್ಲಿ ಪೂರ್ವ ಪರೀಕ್ಷೆ ಚಟುವಟಿಕೆ ಹಾಗೂ ಪರೀಕ್ಷಾ ನಂತರದ ಹಂತಗಳು ಸಹ ಒಳಗೊಂಡಿವೆ. ಪರೀಕ್ಷೆಗಳು ಕೇವಲ ಮುಖ್ಯ ವಿಷಯಗಳಿಗೆ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ.

ಈ ವಿಷಯಗಳಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಉಳಿದ ವಿಷಯಗಳಿಗೂ ಅಂಕ ನಿಗದಿ ಮಾಡಲಾಗುವುದು. ಈ ಪರೀಕ್ಷೆ ನಡೆಸಲು ಆಗಸ್ಟ್ ತಿಂಗಳು ಸಹ ಚರ್ಚೆಗೆ ಬಂದಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಪ್ರಕ್ರಿಯೆ ಮುಂದುವರಿಯಬಹುದು ಎಂದು ಮಂಡಳಿ ತಿಳಿಸಿದೆ.

ಎರಡನೇ ಆಯ್ಕೆಯಡಿಯಲ್ಲಿ 19 ಪ್ರಮುಖ ವಿಷಯಗಳಲ್ಲಿ 90 ನಿಮಿಷಗಳ ಪರೀಕ್ಷೆ ನಡೆಯಲಿವೆ. ವಿದ್ಯಾರ್ಥಿಗಳು ಒಂದೇ ಭಾಷೆಯಲ್ಲಿ ಮತ್ತು 3 ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಮಾತ್ರ ಪರೀಕ್ಷೆ ಎದುರಿಸಬೇಕು.

ಈ ವಿಷಯಗಳಲ್ಲಿನ ಅವರ ಅಂಕಗಳ ಆಧಾರದ ಮೇಲೆ, 5ನೇ ಮತ್ತು 6ನೇ ವಿಷಯಗಳ ಫಲಿತಾಂಶವನ್ನು ನಿರ್ಣಯಿಸಲಾಗುತ್ತದೆ ಎಂಬ ಅಂಶಗಳು ಚರ್ಚೆಗೆ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಓದಿ: ಮಕ್ಕಳನ್ನೇ ಕಾಡುತ್ತಿದೆ ಕೊರೊನಾ: ಒಂದೇ ಜಿಲ್ಲೆಯ 341 ಮಕ್ಕಳಿಗೆ ಸೋಂಕು

Last Updated : May 23, 2021, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.