ಪ್ರಯಾಗ್ರಾಜ್: ದೇಶಾದ್ಯಂತ ಸುದ್ದಿಯಾಗಿದ್ದ ಕೊಲೆಯಾದ ಅಪರಾಧಿ- ರಾಜಕಾರಣಿ ಅತೀಕ್ ಅಹಮದ್ ಅವರ ಕೆಡವಲಾದ ಕಚೇರಿಯಲ್ಲಿ ಪತ್ತೆಯಾದ ರಕ್ತದ ಕಲೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ರಕ್ತ ಮಾನವರದ್ದಾ ಅಥವಾ ಪ್ರಾಣಿಗಳದ್ದ ಎಂಬ ಅನುಮಾನ ಕೂಡ ವ್ಯಕ್ತವಾಗಿತ್ತು. ಇದೀಗ ಈ ರಕ್ತ ಮಾನವನದ್ದು ಎಂಬುದನ್ನು ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ದೃಢಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಯಾದ ರಕ್ತದ ಕಲೆಗಳ ಅಸಲಿಯತ್ತನ್ನು ತಿಳಿಯಲು ಈ ಮಾದರಿಯನ್ನು ಫಾರೆನ್ಸಿಕ್ ಇಲಾಖೆಗೆ ಈ ಹಿಂದೆ ಕಳುಹಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಈ ರಕ್ತದ ಕಲೆಗಳು ಮಾನವನದ್ದೇ ಎಂದು ದೃಢಪಡಿಸಲಾಗಿದೆ.
ಅತೀಕ್ ಅಹಮದ್ ಕಚೇರಿಯಲ್ಲಿ ಕೆಲವು ಮಾದಕ ವ್ಯಸನಿ ಯುವಕರ ಗುಂಪು ಪ್ರವೇಶಿಸಿದ್ದು, ಅವರು ಕೆಲವು ಹಣ ಮತ್ತು ಮೌಲ್ಯಯುತ ವಸ್ತುಗಳನ್ನು ದೋಚಲು ಆಗಮಿಸಿದ್ದಾರೆ. ಈ ಹಿನ್ನೆಲೆ ಈ ರಕ್ತದ ಕಲೆಗಳು ಮೂಲಗಳನ್ನು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವಿವರಣೆ ನೀಡಿದ ಪೊಲೀಸರು, ಐವರು ಮದ್ಯ ವಸನಿ ಯುವಕರು ಅತೀಕ್ ಅವರ ಕೆಡವಲಾದ ಮನೆಗೆ ಭಾನುವಾರ ನುಗ್ಗಿದ್ದರು. ಏನಾದರೂ ಹಣ ಮತ್ತಿತ್ತರ ವಸ್ತುಗಳು ಸಿಗಬಹುದಾ ಎಂಬ ಕಾರಣಕ್ಕೆ ಮನೆ ಮೂಲೆ ಮೂಲೆ ಜಾಲಾಡಿದ್ದಾರೆ. ಈ ನಡುವೆ ಅವರ ಮಧ್ಯದಲ್ಲೇ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ. ಜಗಳ ಅತಿರೇಕಕ್ಕೆ ಒಳಗಾದ ವೇಳೆ ಅವರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಜಗಳದಲ್ಲಿ ಇಬ್ಬರು ಯುವಕರಿಗೆ ಗಂಭೀರವಾಗಿ ಇರಿಯಲಾಗಿದೆ. ಅವರ ಕೈ ಗಾಯಗೊಂಡಿದ್ದು, ರಕ್ತ ಸ್ರಾವ ಆಗಿದೆ. ಈ ರಕ್ತ ಕಚೇರಿಯ ಅನೇಕ ಕಡೆ ಚೆಲ್ಲಿದೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ಈಗಾಗಲೇ ನಡೆಸಲಾಗಿದ್ದು, ಯುವಕರ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಇದುವರೆಗೂ ನೀಡಿಲ್ಲ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ತೀವ್ರಗೊಳಿಸಿದ್ದಾರೆ.
ಅತೀಕ್ ಕಚೇರಿಯಲ್ಲಿ 74 ಲಕ್ಷ ನಗದು ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದ ಯುವಕರು, ಧ್ವಂಸಗೊಂಡ ಕಟ್ಟದಲ್ಲಿ ಮತ್ತಷ್ಟು ಹಣ ಇಟ್ಟಿರಬಹುದು ಎಂಬ ಕಾರಣಕ್ಕೆ ದ್ವಂಸಗೊಂಡ ಮನೆಗೆ ನುಗ್ಗಿರುವ ಸಾಧ್ಯತೆ ಇದೆ. ಹಣ ಇಲ್ಲದಿದ್ದರೂ ಕೆಲವು ಮೌಲ್ಯಯುತ ವಸ್ತುಗಳಾದರೂ ತಮಗೆ ಸಿಗಬಹುದು ಎಂಬ ಉದ್ದೇಶದಿಂದ ಅವರು ಬಂದಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಏಪ್ರಿಲ್ 15ರಂದು ಅತೀಕ್ ಅಹ್ಮದ್ ಮತ್ತು ಆತನ ಸಹೋದರನನ್ನು ಆಸ್ಪತ್ರೆಗೆ ಪೊಲೀಸರ ಬಂದೋಬಸ್ತ್ನಲ್ಲಿ ಕರೆದೊಯ್ಯುತ್ತಿದ್ದಾಗ ಮಾಧ್ಯಮದವರು ಅವರ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ, ಪತ್ರಕರ್ತರ ವೇಷದಲ್ಲಿ ಬಂದ ಆರೋಪಿಗಳು ಹಿಂದಿನಿಂದ ಬಂದು ಅತೀಕ್ ತಲೆಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದರು. ಬಳಿಕ ಅಶ್ರಫ್ನಿಗೂ ಗುಂಡು ಹಾರಿಸಲಾಯಿತು. ನೆಲಕ್ಕುರುಳಿ ಬಿದ್ದ ಇಬ್ಬರೂ ಸಾವನ್ನಪ್ಪಿದರು. ಈ ಪ್ರಕರಣದ ಆರೋಪಿಗಳಾದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದರು.
ಅಲಹಾಬಾದ್ ಪಶ್ಚಿಮದಿಂದ 1989ರಲ್ಲಿ ಚುನಾವಣೆಗೆ ಸ್ಪರ್ಧಿಸಿದ ಅತೀಕ್ ಐದು ಬಾರಿ ಗೆಲುವು ಕಂಡಿದ್ದರು. 2019ರಲ್ಲೂ ವಾರಾಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕೂಡ ಸ್ಪರ್ಧೆ ಮಾಡಿ, ಸೋಲು ಕಂಡಿದ್ದ. ಈತನ ಮೇಲೆ 101 ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿ: ಹುತಾತ್ಮ ಜವಾನರಿಗೆ ಗೌರವ ನಮನ ಸಲ್ಲಿಸಿದ ಸಿಎಂ ಭೂಪೇಶ್ ಬಘೇಲ್