ನವದೆಹಲಿ: ಮಹಿಳೆಯರು ಆಭರಣ ಪ್ರಿಯರು. ಮನೆ ಕೆಲಸ ಮಾಡುವಾಗ ಗೃಹಿಣಿಯ ಕೈ ಬಳೆಯ ನಾದ ಕೇಳಲು ಕಿವಿಗೆ ಇಂಪು. ಕೆಂಪು, ಹಳದಿ, ಹಸಿರು ಹೀಗೆ ನಾನಾ ಬಣ್ಣಗಳ ಬಳೆಗಳು ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ. ಶುಭ ಸಮಾರಂಭಗಳು, ದೇವತಾ ಕಾರ್ಯಗಳಲ್ಲಿ ಬಳೆಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ಅದಕ್ಕಾಗಿಯೇ ಈ ವರ್ಣರಂಜಿತ ಬಳೆಗಳನ್ನು ತಯಾರಿಸುವ ಕುಶಲಕರ್ಮಿಗಳನ್ನು "ಭಾರತ್ ರಂಗ್ ಮಹೋತ್ಸವ" ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಮೇಳವನ್ನು ಜೈಪುರದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಆಯೋಜಿಸಿದೆ.
ಬಳೆಗಳನ್ನು ತಯಾರಿಸುವುದೇ ಕುಶಲಕರ್ಮಿ ಮೊಹಮ್ಮದ್ ಆಸಿಫ್ ಅವರ ಕುಟುಂಬದ ವ್ಯವಹಾರವಾಗಿದೆ. ಈ ಉದ್ಯಮದಲ್ಲಿ ಆಸಿಫ್ ಕುಟುಂಬ 32 ವರ್ಷಗಳನ್ನು ಪೂರೈಸಿದೆ. ನಾವು ಅರಗಿನ ಬಗ್ಗೆ ಮಾತನಾಡುವಾಗ, ಮಹಾಭಾರತವನ್ನು ನೆನಪಿಸಿಕೊಳ್ಳುತ್ತೇವೆ.
ಗಾಜು ಅಥವಾ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟ ಬಳೆಗಳು ಸ್ವಲ್ಪ ಸಮಯದ ನಂತರ ತಮ್ಮ ಹೊಳಪು ಕಳೆದುಕೊಳ್ಳಬಹುದು. ಆದರೆ ಅರಗಿನಿಂದ ತಯಾರಿಸಲ್ಪಟ್ಟ ಬಳೆಗಳು ಬಹುಕಾಲ ಬಾಳಿಕೆ ಬರುತ್ತವೆ. ಅದೇ ಕಾರಣಕ್ಕೆ ಜನರು ಇವುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.
ಕುಶಲಕರ್ಮಿಗಳು ಹಲವಾರು ರೀತಿಯ ಬಳೆಗಳನ್ನು ಲ್ಯಾಕ್ನಿಂದ ತಯಾರಿಸುತ್ತಿದ್ದಾರೆ. ಈ ಬಳೆಗಳು ಸಾಕಷ್ಟು ಜನರನ್ನು ಆಕರ್ಷಿಸುತ್ತಿವೆ. ಅಲ್ಲದೇ ಅನೇಕ ಕುಶಲಕರ್ಮಿಗಳಿಗೆ ಜೀವನೋಪಾಯವಾಗಿದೆ.