ಭರತ್ಪುರ್(ರಾಜಸ್ಥಾನ): ಕಡಲ ದಾಟಿ ಬಂದ.. ಕುದುರೆ ಏರಿ ಬಂದ ಎಂಬ ಹಾಡಿನಂತೆ ಇಲ್ಲೋರ್ವ ವರ ಭಾರತೀಯರ ನಾರಿಯ ಕೈ ಹಿಡಿಯಲು ಅಮೆರಿಕದಿಂದ ಬಂದಿದ್ದಾರೆ. ರಾಜಸ್ಥಾನದ ಭರತ್ಪುರ್ದಲ್ಲಿ ಈ ವಿಶೇಷವಾದ ಮದುವೆ ಕಾರ್ಯಕ್ರಮ ಸಹ ನಡೆದಿದೆ.
ಭರತ್ಪುರ್ ಜಿಲ್ಲೆಯ ಬಯಾನ ಪಟ್ಟಣದಲ್ಲಿ ವಿಶಿಷ್ಠ ವಿವಾಹ ನಡೆದಿದ್ದು, ಮಧುವಿನ ಕೈ ಹಿಡಿಯಲು ವರ ತನ್ನ ಕುಟುಂಬಸ್ಥರೊಂದಿಗೆ ಅಮೆರಿಕದಿಂದ ಬಂದಿದ್ದಾನೆ. ಜೊತೆಗೆ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಬಯಾನಾ ನಿವಾಸಿ ಕರಿಷ್ಮಾ ಅಮೆರಿಕದ ನಾಸಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದು, ಅಲ್ಲೇ ವಾಸವಾಗಿರುವ ರೆಸಿಡೆಂಟ್ ನ್ಯಾಷನಲ್ ಲ್ಯಾಬ್ನ ವಿಜ್ಞಾನಿ ಕ್ಯಾಲೆಬ್ ಅವರಿಂದಿಗೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾರೆ. ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಎರಡು ಕುಟುಂಬ ಒಪ್ಪಿಗೆ ಸೂಚಿಸಿದ್ದರಿಂದ ಡಿಸೆಂಬರ್2ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿರಿ: ಭಾರತದಲ್ಲಿ ಎರಡು ಒಮಿಕ್ರೋನ್ ಕೇಸ್.. ಆತಂಕಕ್ಕೊಳಗಾಗಬೇಡಿ ಎಂದ ಕೇಂದ್ರ ಸರ್ಕಾರ
ಅಮೆರಿಕದಿಂದ ಕ್ಯಾಲೆಬ್ ಕುಟುಂಬದ ಏಳು ಸದಸ್ಯರು ರಾಜಸ್ಥಾನಕ್ಕೆ ಆಗಮಿಸಿದ್ದು, ವೈದ್ಯಕೀಯ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲರೂ ಕೋವಿಡ್ ಪರೀಕ್ಷೆಗೊಳಪಟ್ಟಿದ್ದಾಗಿ ತಿಳಿದು ಬಂದಿದೆ.