ETV Bharat / bharat

EXPLAINER: ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ-2021 ಹಾಗೂ ಭಾರತದ ಸ್ಥಾನ

author img

By

Published : Mar 4, 2021, 10:30 PM IST

ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರಗಳಾದ ಚೀನಾ ಮತ್ತು ಭಾರತಗಳು ಬಹುತೇಕ ಆರ್ಥಿಕ ಸ್ವಾತಂತ್ರ್ಯವಿಲ್ಲದ ದೇಶಗಳಾಗಿದ್ದು, ಸಮಗ್ರ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದು ಅಗತ್ಯವಾಗಿದೆ. ಸೂಚ್ಯಂಕದಲ್ಲಿ 120ನೇ ಸ್ಥಾನದಲ್ಲಿರುವ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

The 2021 Index of Economic freedom
ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ-2021 ಹಾಗೂ ಭಾರತದ ಸ್ಥಾನ

ದೇಶವೊಂದರ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕವು ಆ ದೇಶದ ಸರ್ಕಾರವು 12 ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಬಿಂಬವಾಗಿದ್ದು, ಇದು ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಸಮೃದ್ಧತೆಯ ಮೇಲೆ ಅಗಾಧ ಪರಿಣಾಮ ಬೀರುವಂಥದ್ದಾಗಿರುತ್ತದೆ.

ವ್ಯಕ್ತಿಯ ತಲಾ ಆದಾಯದ ಮೇಲೆ ನಿರ್ಧರಿತವಾಗುವ ಜೀವನ ಮಟ್ಟದ ಪ್ರಮಾಣವು ಆರ್ಥಿಕ ಸ್ವಾತಂತ್ರ್ಯವಿರುವ ದೇಶಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ.

ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ "ಸ್ವತಂತ್ರ" ಅಥವಾ "ಬಹುತೇಕ ಸ್ವತಂತ್ರ" ಎಂದು 2021ರಲ್ಲಿ ಗುರುತಿಸಲ್ಪಟ್ಟ ದೇಶಗಳ ಒಟ್ಟು ಆದಾಯವು ಇತರ ದೇಶಗಳಿಗಿಂತ ದುಪ್ಪಟ್ಟಾಗಿರುತ್ತದೆ ಹಾಗೂ ಅತಿ ಹಿಂದುಳಿದ ದೇಶಗಳಿಗಿಂತ 6 ಪಟ್ಟು ಹೆಚ್ಚಾಗಿರುತ್ತದೆ.

2021ನೇ ಸಾಲಿನಲ್ಲಿ ವಿಶ್ವದ 178 ದೇಶಗಳ ಪೈಕಿ 89 ದೇಶಗಳ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಏರಿಕೆಯಾಗಿದೆ. ಇನ್ನುಳಿದ ಪೈಕಿ 80 ದೇಶಗಳ ಸೂಚ್ಯಂಕ ಕುಸಿದಿದ್ದು, 9 ದೇಶಗಳ ಸೂಚ್ಯಂಕ ಸ್ಥಿರವಾಗಿದೆ.
ವಿಶ್ವದ 5 ದೇಶಗಳಾದ ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ವಿಟ್ಜರಲೆಂಡ್​ ಮತ್ತು ಐರ್ಲೆಂಡ್​ಗಳು 80 ಅಥವಾ ಅದಕ್ಕೂ ಹೆಚ್ಚು ಆರ್ಥಿಕ ಸೂಚ್ಯಂಕದ ಅಂಕಗಳನ್ನು ಪಡೆದು, ವಿಶ್ವದ ಅತಿ ಹೆಚ್ಚು ಆರ್ಥಿಕ ಸ್ವಾತಂತ್ರ್ಯದ ದೇಶಗಳಾಗಿ ಹೊರಹೊಮ್ಮಿವೆ.

ಇನ್ನು 70 ರಿಂದ 79.9 ಅಂಕಗಳನ್ನು ಗಳಿಸಿರುವ 33 ದೇಶಗಳು "ಬಹುತೇಕ ಸ್ವಾತಂತ್ರ್ಯ" ದ ಪಟ್ಟಿಯಲ್ಲಿವೆ. ಹಾಗೆಯೇ 59 ದೇಶಗಳು 60 ರಿಂದ 69.9 ಅಂಕಗಳನ್ನು ಪಡೆದು "ಮಧ್ಯಮ ಮಟ್ಟದ ಸ್ವತಂತ್ರ" ದೇಶಗಳಾಗಿ ಗುರುತಿಸಿಕೊಂಡಿವೆ.

2021ರ ಸೂಚ್ಯಂಕದಲ್ಲಿ ಮಾಪನ ಮಾಡಲಾದ ಒಟ್ಟಾರೆ 97 ದೇಶಗಳು ಅಥವಾ ಎಲ್ಲ ದೇಶಗಳ ಪೈಕಿ ಶೇ 54 ರಷ್ಟು ದೇಶಗಳು ಮತ್ತು ಪ್ರಾಂತಗಳು ಸಾಂಸ್ಥಿಕ ವಾತಾವರಣ ಹೊಂದಿದ್ದು, ಖಾಸಗಿ ವ್ಯವಹಾರಸ್ಥರು ಹಾಗೂ ವ್ಯಕ್ತಿಗಳಿಗೆ ಕನಿಷ್ಠ ಮಧ್ಯಮ ಮಟ್ಟದ ಆರ್ಥಿಕಾಭಿವೃದ್ಧಿ ಮತ್ತು ಸಮೃದ್ಧತೆಯ ಬೆಳವಣಿಗೆಗೆ ಪೂರಕವಾಗಿವೆ.

ಆರ್ಥಿಕ ಸ್ವಾತಂತ್ರ್ಯದ ಟಾಪ್​-5 ದೇಶಗಳು: ಸಿಂಗಾಪುರ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ವಿಟ್ಜರಲೆಂಡ್​ ಮತ್ತು ಐರ್ಲೆಂಡ್​

ಪ್ರಾದೇಶಿಕ ಮಟ್ಟದಲ್ಲಿ ಮುಂಚೂಣಿಯ ಆರ್ಥಿಕ ಸ್ವಾತಂತ್ರ್ಯದ ರಾಷ್ಟ್ರಗಳು

ವಲಯರಾಷ್ಟ್ರ
ಏಷ್ಯಾ ಪೆಸಿಫಿಕ್ಸಿಂಗಾಪುರ
ಮಧ್ಯ ಪ್ರಾಚ್ಯ/ ಉತ್ತರ ಆಫ್ರಿಕಾಯುನೈಟೆಡ್ ಅರಬ್ ಎಮಿರೇಟ್ಸ್​
ಉಪ-ಸಹಾರಾ ಆಫ್ರಿಕಾಮಾರಿಷಸ್
ಯುರೋಪ್ಸ್ವಿಟ್ಜರಲೆಂಡ್
ಅಮೆರಿಕಾಸ್ಕೆನಡಾ

ಪ್ರತಿ ಆರ್ಥಿಕ ಸ್ವಾತಂತ್ರ್ಯ ವಲಯದಲ್ಲಿ ಸ್ಥಾನ ಪಡೆದ ದೇಶಗಳು

ದೇಶಗಳ ಸಂಖ್ಯೆ
ಸ್ವತಂತ್ರ5
ಬಹುತೇಕ ಸ್ವತಂತ್ರ33
ಮಧ್ಯಮ ಸ್ವತಂತ್ರ59
ಕಡಿಮೆ ಸ್ವತಂತ್ರ63
ಅತಿ ಕಡಿಮೆ ಸ್ವತಂತ್ರ18

ತಲಾ ಆದಾಯ ಜಿಡಿಪಿಯ ಸರಾಸರಿ ವಾರ್ಷಿಕ ಆರ್ಥಿಕ ಬೆಳವಣಿಗೆ

ಕಳೆದ 25 ವರ್ಷಗಳಲ್ಲಿ ಕಳೆದ 15 ವರ್ಷಗಳಲ್ಲಿಕಳೆದ 5 ವರ್ಷಗಳಲ್ಲಿ
ಆರ್ಥಿಕ ಸ್ವಾತಂತ್ರ್ಯ ಹೆಚ್ಚಿಸಿಕೊಳ್ಳುತ್ತಿರುವ ದೇಶಗಳು2.6%2.6%1.9%
ಆರ್ಥಿಕ ಸ್ವಾತಂತ್ರ್ಯ ಕಡಿಮೆಯಾಗುತ್ತಿರುವ ದೇಶಗಳು1.7%1.5%1.5%

ಆರ್ಥಿಕ ಸ್ವಾತಂತ್ರ್ಯದ ವಿಭಾಗವಾರು ತಲಾ ಆದಾಯದ ಸರಾಸರಿ ಜಿಡಿಪಿ

ವಿಭಾಗ

ತಲಾ ಆದಾಯದ

ಸರಾಸರಿ ಜಿಡಿಪಿ (PPP)

ಸ್ವತಂತ್ರ$ 71,756
ಬಹುತೇಕ ಸ್ವತಂತ್ರ$47,706
ಮಧ್ಯಮ ಸ್ವತಂತ್ರ$22,005
ಕಡಿಮೆ ಸ್ವತಂತ್ರ$6,834
ಅತಿ ಕಡಿಮೆ ಸ್ವತಂತ್ರ$7,163

ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ-2021 ರಲ್ಲಿ ಭಾರತ ಹಾಗೂ ಚೀನಾ ಸಾಧನೆ

ಭಾರತವು 2021ರ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 56.5 ಅಂಕಗಳೊಂದಿಗೆ 121ನೇ ಸ್ಥಾನದಲ್ಲಿದೆ. ಕಳೆದ ಬಾರಿಗಿಂತ ಭಾರತದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿರದಿದ್ದರೂ, ಬಹುತೇಕ ಸ್ವತಂತ್ರ ಪಟ್ಟಿಯಲ್ಲಿ ಶ್ರೇಯಾಂಕ ಕೊಂಚ ಕುಸಿತವಾಗಿದೆ.

ಸಮಗ್ರವಾದ ಆರ್ಥಿಕ ಸ್ವಾತಂತ್ರ್ಯದ ವಾತಾವರಣ ನಿರ್ಮಿಸಲು ಬಹು ಆಯಾಮದ ಹಾಗೂ ದೂರದೃಷ್ಟಿಯ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕಾಗುತ್ತದೆ. ವಿತ್ತೀಯ ಶಿಸ್ತು ಹಾಗೂ ಕಾನೂನು ಸುವ್ಯವಸ್ಥೆಯ ಬಲವರ್ಧನೆಗೆ ಸರ್ಕಾರವು ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಬೇಕಾಗುತ್ತದೆ ಹಾಗೂ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ಬಂಡವಾಳ ಹೂಡಿಕೆ ಸರಳೀಕರಣ ಮತ್ತು ಕಾರ್ಮಿಕ ನೀತಿಗಳಲ್ಲಿ ಸುಧಾರಣೆಗಳನ್ನು ತರಬೇಕಾಗುತ್ತದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರಗಳಾದ ಚೀನಾ ಮತ್ತು ಭಾರತಗಳು ಬಹುತೇಕ ಆರ್ಥಿಕ ಸ್ವಾತಂತ್ರ್ಯವಿಲ್ಲದ ದೇಶಗಳಾಗಿದ್ದು, ಸಮಗ್ರ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದು ಅಗತ್ಯವಾಗಿದೆ. ಸೂಚ್ಯಂಕದಲ್ಲಿ 120ನೇ ಸ್ಥಾನದಲ್ಲಿರುವ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

ಸೂಚ್ಯಂಕದಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶದೊಂದಿಗೆ ಭಾರತದ ಹೋಲಿಕೆ

ಭಾರತಸಿಂಗಾಪುರ
ರ್ಯಾಂಕ್1211
ವಲಯವಾರು ರ್ಯಾಂಕ್261
ಆಸ್ತಿ ಹಕ್ಕುಗಳು59.297.5
ಕಾನೂನು ಸುವ್ಯವಸ್ಥೆ55.990.8
ಸರ್ಕಾರದ ಭದ್ರತೆ48.193.2
ತೆರಿಗೆ ಹೊರೆ78.790.5

ಸರ್ಕಾರದಿಂದ ಮಾಡಲಾಗುವ

ಖರ್ಚು

78.594.1
ವಿತ್ತೀಯ ಆರೋಗ್ಯ18.080.0
ವ್ಯಾಪಾರದ ಸ್ವಾತಂತ್ರ್ಯ76.793.8
ಕಾರ್ಮಿಕ ಸ್ವಾತಂತ್ರ್ಯ41.391.5
ಹಣಕಾಸು ಸ್ವಾತಂತ್ರ್ಯ72.185.4
ವಹಿವಾಟು ಸ್ವಾತಂತ್ರ್ಯ69.495.0
ಬಂಡವಾಳ ಹೂಡಿಕೆ ಸ್ವಾತಂತ್ರ್ಯ40.085.0
ಆರ್ಥಿಕ ಸ್ವಾತಂತ್ರ್ಯ40.080.0

ಬ್ರಿಕ್ಸ್​ ದೇಶಗಳೊಂದಿಗೆ ಭಾರತದ ಹೋಲಿಕೆ

ಚೀನಾ ಹಾಗೂ ಬಾಂಗ್ಲಾದೇಶಗಳು ಭಾರತಕ್ಕಿಂತ ಉತ್ತಮ ಸಾಧನೆ ಮಾಡಿವೆ. ಚೀನಾ 107ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 120ನೇ ಸ್ಥಾನದಲ್ಲಿದೆ.

ಭಾರತಚೀನಾಬ್ರೆಜಿಲ್ರಷ್ಯಾದಕ್ಷಿಣ ಆಫ್ರಿಕಾ
ರ್ಯಾಂಕ್12110714361.599

ವಲಯವಾರು ಸಾರಾಂಶ

ಅಮೆರಿಕ ಉಪಖಂಡಏಷ್ಯಾ ಪೆಸಿಫಿಕ್ಯುರೋಪ್

ಮಧ್ಯ ಪ್ರಾಚ್ಯ/

ಉತ್ತರ ಆಫ್ರಿಕಾ

ಉಪ-ಸಹಾರಾ ಆಫ್ರಿಕಾ
ದೇಶಗಳು 3240461848
ಸ್ವತಂತ್ರಮಾಹಿತಿ ಲಭ್ಯವಿಲ್ಲ32ಮಾಹಿತಿ ಲಭ್ಯವಿಲ್ಲಮಾಹಿತಿ ಲಭ್ಯವಿಲ್ಲ
ಬಹುತೇಕ ಸ್ವತಂತ್ರ352131
ಮಧ್ಯಮ ಸ್ವತಂತ್ರ15102167
ಅತಿ ಕಡಿಮೆ ಸ್ವತಂತ್ರ44ಮಾಹಿತಿ ಲಭ್ಯವಿಲ್ಲ28
ಸ್ವತಂತ್ರ ಇಲ್ಲ10181331

ಸರಾಸರಿ ಜಿಡಿಪಿ ತಲಾದಾಯ, ಆರ್ಥಿಕ ಸ್ವಾತಂತ್ರ್ಯ ವಲಯವಾರು

ಸ್ವತಂತ್ರಮಾಹಿತಿ ಲಭ್ಯವಿಲ್ಲ$66,216$79,615ಮಾಹಿತಿ ಲಭ್ಯವಿಲ್ಲಮಾಹಿತಿ ಲಭ್ಯವಿಲ್ಲ
ಬಹುತೇಕ ಸ್ವತಂತ್ರ$47,205$39,752$44,612$69,529$ 23,942
ಮಧ್ಯಮ ಸ್ವತಂತ್ರ$17,894$15,663$31,716$32,485$10,973
ಅತಿ ಕಡಿಮೆ ಸ್ವತಂತ್ರ $12,077$7,313$13,341$12,926$4,065
ಸ್ವತಂತ್ರ ಇಲ್ಲದ್ದು$11,540$6,381ಮಾಹಿತಿ ಲಭ್ಯವಿಲ್ಲ$12,366$4,064

ETV Bharat Logo

Copyright © 2024 Ushodaya Enterprises Pvt. Ltd., All Rights Reserved.