ETV Bharat / bharat

ಥಪ್ಪಡ್.. ವರನ ಒಂದೇ ಏಟಿಗೆ ಮುರಿದು ಬಿತ್ತು ಮದುವೆ: ವಧುವಿನ ದಿಟ್ಟ ನಿರ್ಧಾರಕ್ಕೆ ಶಹಬ್ಬಾಸ್​ಗಿರಿ - slap breaks marriage

Slap breaks marriage: ವಿವಾಹದ ಹಿಂದಿನ ದಿನ ತನ್ನ ಸ್ನೇಹಿತರು, ಸಂಬಂಧಿಕರೊಂದಿಗೆ ವೇದಿಕೆಯ ಕೆಳಗೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವಧುವಿಗೆ ವರ ಕಪಾಳಮೋಕ್ಷ ಮಾಡಿದ್ದು, ಆಘಾತಕ್ಕೊಳಗಾದ ವಧು ಆತನೊಂದಿಗೆ ಮದುವೆಯಾಗದೇ ಇರಲು ನಿರ್ಧರಿಸಿದ್ದಾಳೆ.

Thappad
ವರನ ಒಂದೇ ಏಟಿಗೆ ಮುರಿದು ಬಿತ್ತು ಮದುವೆ
author img

By

Published : Jan 21, 2022, 12:56 PM IST

ಕಡಲೂರು (ತಮಿಳುನಾಡು): 'ಥಪ್ಪಡ್', ಇದು 2020ರ ಫೆಬ್ರವರಿಯಲ್ಲಿ ತೆರೆಕಂಡ ತಾಪ್ಸಿ ಪನ್ನು ಅಭಿನಯದ ಬಾಲಿವುಡ್​ ಸಿನಿಮಾ. ಈ ಚಿತ್ರದಲ್ಲಿ ತುಂಬಾ ಅನ್ಯೋನ್ಯತೆಯಿಂದ ದಂಪತಿ ಬಾಳಲ್ಲಿ ಒಂದೇ ಒಂದು ಥಪ್ಪಡ್ (slap) ಅಥವಾ ಕಪಾಳಮೋಕ್ಷ ಬಿರುಗಾಳಿಯನ್ನೇ ಎಬ್ಬಿಸಿ ಬಿಡುತ್ತದೆ. ಪಾರ್ಟಿಯಲ್ಲಿ ಎಲ್ಲರ ಮುಂದೆ ಪತಿ ತನ್ನ ಕೆನ್ನೆಗೆ ಹೊಡೆದಿದ್ದಕ್ಕೆ ಆಕೆ ಮನೆ ಬಿಟ್ಟು ಹೋಗಿ ಡಿವೋರ್ಸ್​ ನೀಡುತ್ತಾಳೆ. ಇದೀಗ ಈ ಸಿನಿಮಾವನ್ನು ನೆನಪಿಸುವ ಅಂತಹದೇ ಒಂದು ಘಟನೆ ನಡೆದಿದೆ.

ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಪ್ರದೇಶದಲ್ಲಿ ಇಂಜಿನಿಯರ್​​ ವರನೊಂದಿಗೆ ಸ್ನಾತಕೋತ್ತರ ಪದವೀಧರೆಯ ಮದುವೆ ಜನವರಿ 20ರಂದು ನಿಶ್ವಯವಾಗಿರುತ್ತದೆ. ವಿವಾಹದ ಹಿಂದಿನ ದಿನ ಅಂದರೆ ಆರತಕ್ಷತೆಯ ದಿನ ಎರಡೂ ಕುಟುಂಬದವರು ಸಂಭ್ರಮದಲ್ಲಿ ಮುಳುಗಿರುತ್ತಾರೆ.

ವಧು ಕೂಡ ತನ್ನ ಸ್ನೇಹಿತರು, ಸಂಬಂಧಿಕರೊಂದಿಗೆ ವೇದಿಕೆಯ ಕೆಳಗೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಆದರೆ, ಮದುಮಗನು ಆಕೆಗೆ ನೃತ್ಯ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾನೆ. ಅಷ್ಟೇ ಅಲ್ಲ ಆಕೆಯನ್ನು ವೇದಿಕೆಯ ಮೇಲೆ ಕರೆದು ಕಪಾಳಮೋಕ್ಷ ಮಾಡಿದ್ದಾನೆ.

Thappad
'ಥಪ್ಪಡ್' ಸಿನಿಮಾ ಪೋಸ್ಟ್​

ಇದನ್ನೂ ಓದಿ: ಕಿರಿಕ್​ ಮಾಡ್ತಿದ್ದ ಗಂಡನ ರುಂಡವನ್ನೇ ಕಡಿದು ಪೊಲೀಸ್​ ಠಾಣೆಗೆ ತೆಗೆದುಕೊಂಡು ಹೋದ ಪತ್ನಿ!

ಇದರಿಂದ ಆಘಾತಕ್ಕೊಳಗಾದ ವಧು ಆತನೊಂದಿಗೆ ಮದುವೆಯಾಗದೇ ಇರಲು ನಿರ್ಧರಿಸಿದ್ದಾಳೆ. ರಾತ್ರಿಯೇ ಮದುವೆ ಸಭಾಂಗಣವನ್ನು ತೊರೆದು ಹೋಗಿದ್ದಾಳೆ. ಬಳಿಕ ಅದೇ ಮುಹೂರ್ತದಲ್ಲಿ ಆಕೆಯ ಸಂಬಂಧಿ ಯುವಕನೊಬ್ಬನ ಜೊತೆ ಪೋಷಕರು ದೇವಸ್ಥಾನದಲ್ಲಿ ಮಗಳ ವಿವಾಹ ಮಾಡಿದ್ದಾರೆ. ವಧುವಿನ ದಿಟ್ಟ ನಿರ್ಧಾರಕ್ಕೆ ಪೋಷಕರು, ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರು ಹೀಗೆ ಎಲ್ಲೆಡೆಯಿಂದ ಶಹಬ್ಬಾಸ್​ಗಿರಿ ವ್ಯಕ್ತವಾಗುತ್ತಿದೆ.

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.