ETV Bharat / bharat

ಕೊರೊನಾ ಸೋಂಕು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು, ಕೇವಲ ರೂ.250 ಮಾತ್ರ!

ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ಲಿಮಿಟೆಡ್ ಸಂಶೋಧಿಸಿರುವ ಕೊರೊನಾ ಪರೀಕ್ಷಾ ಕಿಟ್​ಗೆ ಐಸಿಎಂಆರ್ 250 ರೂಪಾಯಿ ಬೆಲೆ ನಿಗದಿ ಮಾಡಿದೆ.

Test yourself for COVID-19 at just Rs 250!
ಸ್ವಯಂ ಕೊರೊನಾ ಸೋಂಕು ಪರೀಕ್ಷೆ ಮಾಡಬಹುದು, ಕೇವಲ ರೂ.250 ಮಾತ್ರ!
author img

By

Published : May 21, 2021, 3:04 AM IST

ಪುಣೆ, ಮಹಾರಾಷ್ಟ್ರ: ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಈಗ ತಾವೇ ಸ್ವಯಂ ಆಗಿ ಕೋವಿಡ್ ಸೋಂಕು ಪರೀಕ್ಷೆ ಮಾಡಿಕೊಳ್ಳುವ ಕಿಟ್ ಅನ್ನು ಪುಣೆ ಮೂಲದ ಕಂಪನಿಯೊಂದು ರೂಪಿಸಿದೆ.

ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ಲಿಮಿಟೆಡ್ ಎಂಬ ಕಂಪನಿ ಕೋವಿಸೆಲ್ಫ್​ ಎಂಬ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್​ (ಆರ್​ಎಟಿ) ಕಿಟ್​ ಅನ್ನು ಸಂಶೋಧಿಸಿದ್ದು, ಈ ಕಿಟ್​ ಮೂಲಕ ಸ್ವಯಂ ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್​​) ಈ ಕಿಟ್​ಗೆ ಸುಮಾರು 250 ರೂಪಾಯಿ ಬೆಲೆ ನಿಗದಿ ಮಾಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ: ಇಸ್ರೇಲ್​ನೊಂದಿಗೆ ಕದನ ವಿರಾಮ ಒಪ್ಪಂದವಾಗಿದೆ: ಹಮಾಸ್

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ಲಿಮಿಟೆಡ್​ನ ನಿರ್ದೇಶಕ ಸುಜಿತ್ ಜೈನ್ ಈ ಕಿಟ್​ನ ಮೂಲಕ ಟೆಸ್ಟ್​ ಮಾಡಿಕೊಂಡ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಆತ ಬೇರೆ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಸೋಂಕಿನ ಲಕ್ಷಣಗಳಿದ್ದು, ಈ ಕಿಟ್​​ನಲ್ಲಿ ನೆಗೆಟಿವ್ ವರದಿ ಕಂಡುಬಂದರೆ ಅವರು ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.