ಸ್ಯಾನ್ ಫ್ರಾನ್ಸಿಸ್ಕೋ: ಎಲೋನ್ ಮಸ್ಕ್ ಒಂದಿಲ್ಲೊಂದು ವಿನೂತನ ಪ್ರಯೋಗಕ್ಕೆ ಒಗ್ಗಿಕೊಳ್ಳುವ ಮೂಲಕ ವಿಶ್ವದ ಮನೆ ಮಾತಾಗಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಎಲೋನ್ ಮಸ್ಕ್ ಅವರ ಕನಸಿ ಕೂಸು ಆದ ಟೆಸ್ಲಾ ಕಂಪನಿಯು 2022ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಹಣವನ್ನು ಗಳಿಸಿ ಹೊಸ ದಾಖಲೆಯನ್ನೇ ಬರೆದಿದೆ.
ಟೆಸ್ಲಾದ ಒಟ್ಟು ಆದಾಯವು ಶೇಕಡಾ 51ರಷ್ಟು ಬೆಳೆದಿದ್ದು, 81.5 ಶತಕೋಟಿ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 6,635 ರೂ. ಕೋಟಿ) ಮತ್ತು ನಿವ್ವಳ ಆದಾಯವು 12.6 ಶತಕೋಟಿ ಡಾಲರ್ಗೆ ದ್ವಿಗುಣಗೊಂಡಿದೆ. 2022ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು ವಾಲ್ ಸ್ಟ್ರೀಟ್‌ನ ಆದಾಯದ ಅಂದಾಜುಗಳನ್ನು ಬುಡಮೇಲು ಮಾಡಿದೆ. 24.3 ಬಿಲಿಯನ್ ಡಾಲರ್ ಆದಾಯ ದಾಖಲಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೊಲಿಕೆ ಮಾಡಿದರೆ, ಶೇಕಡಾ 37ಕ್ಕಿಂತ ಹೆಚ್ಚು, ನಿವ್ವಳ ಆದಾಯದಲ್ಲಿ 3.7 ಬಿಲಿಯನ್ ಡಾಲರ್ ಗಳಿಸಿದೆ.
ವೆಚ್ಚ ಕಡಿತ ಮಾಡುವ ಮಾರ್ಗಸೂಚಿ: ನಾವು 2023ರಲ್ಲಿ ಮುಂದುವರಿಯುತ್ತಿದ್ದೇವೆ ಅನಿಶ್ಚಿತ ಸ್ಥೂಲ ಆರ್ಥಿಕ ಪರಿಸ್ಥತಿ ಮತ್ತು ವಿಶೇಷವಾಗಿ ಹೆಚ್ಚುತ್ತಿರುವ ಬಡ್ಡಿದರಗಳ ಸಮೀಪದ ಅವಧಿಯ ಪ್ರಭಾವದ ಬಗ್ಗೆ ಪ್ರಶ್ನೆಗಳಿವೆ ಎಂದು ನಮಗೆ ತಿಳಿದಿದೆ. ಸದ್ಯದಲ್ಲಿಯೇ ವೆಚ್ಚ ಕಡಿತ ಮಾಡುವ ಮಾರ್ಗಸೂಚಿಯನ್ನು ವೇಗಗೊಳಿಸುತ್ತಿದ್ದೇವೆ. ಹೆಚ್ಚಿನ ಉತ್ಪಾದನಾ ದರಗಳ ಕಡೆಗೆ ನಮ್ಮ ಮಾರ್ಗಸೂಚಿಯ ಮುಂದಿನ ಹಂತವನ್ನು ಕೇಂದ್ರೀಕರಿಸುತ್ತಿದ್ದೇವೆ. ಅಲ್ಪಾವಧಿಯ ಅನಿಶ್ಚಿತತೆಗೆ ಇದು ಸಿದ್ಧವಾಗಿದೆ ಎಂದು ಟೆಸ್ಲಾ ಹೇಳಿದೆ. ಸ್ವಾಯತ್ತತೆ, ವಿದ್ಯುದೀಕರಣ ಮತ್ತು ಶಕ್ತಿಯ ಪರಿಹಾರಗಳ ದೀರ್ಘಾವಧಿಯ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಲಾಗಿದೆ.
ಮೂರು ಸಾವಿರಕ್ಕೂ ಹೆಚ್ಚು ವಾಹನಗಳ ಉತ್ಪಾದನೆ: ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಗ್ರಾಹಕರಿಗೆ 405,278 ವಾಹನಗಳನ್ನು ಮತ್ತು 2022ರಲ್ಲಿ 1.3 ಮಿಲಿಯನ್ ವಾಹನಗಳನ್ನು ವಿತರಿಸಿದೆ ಎಂದು ಕಂಪನಿ ಹೇಳಿದೆ. ನಿರಂತರ ವೆಚ್ಚ ನಿಯಂತ್ರಣ ಮತ್ತು ವೆಚ್ಚದ ಆವಿಷ್ಕಾರದಿಂದಾಗಿ, 2023ರಲ್ಲಿ ನಮಗಿಂತ ಉತ್ತಮವಾಗಿ ಬೇರೆ ಯಾರೂ ಸಿದ್ಧರಿಲ್ಲ. ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಮಾಡೆಲ್ ವೈ ಪ್ರೊಡಕ್ಷನ್ ಲೈನ್ ನಾಲ್ಕನೇ ತ್ರೈಮಾಸಿಕದ ಕೊನೆಯಲ್ಲಿ ವಾರಕ್ಕೆ 3,000ಕ್ಕಿಂತ ಹೆಚ್ಚು ವಾಹನಗಳನ್ನು ಉತ್ಪಾದಿಸಿತು ಎಂದು ಟೆಸ್ಲಾ ತಿಳಿಸಿದೆ.
ಎಫ್‌ಎಸ್‌ಡಿ ಬೀಟಾ ವಾಹನಗಳ ಬಿಡುಗಡೆ: 2022ರಲ್ಲಿ ಉತ್ಪಾದನೆ ಮತ್ತು ವಿತರಣಾ ಸವಾಲುಗಳು ಹೆಚ್ಚಾಗಿ ಚೀನಾದಲ್ಲಿ ಕೇಂದ್ರೀಕೃತವಾಗಿವೆ. ಏಕೆಂದರೆ, ಶಾಂಘೈನ ಬಳಿ ಇರುವ ನಮ್ಮ ಕಾರ್ಖಾನೆಯು ಹಲವಾರು ತಿಂಗಳುಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾಲ್ಕನೇ ತ್ರೈಮಾಸಿಕದ ಕೊನೆಯಲ್ಲಿ ಜರ್ಮನಿಯಲ್ಲಿ ಮಾಡೆಲ್ ವೈ ಉತ್ಪಾದನಾ ಘಟಕವು ವಾರಕ್ಕೆ 3,000 ಕ್ಕೂ ಹೆಚ್ಚು ವಾಹನಗಳನ್ನು ಸಿದ್ಧಪಡಿಸುತ್ತಿದೆ. ಅಮೆರಿಕಾ ಮತ್ತು ಕೆನಡಾದಲ್ಲಿ ಸುಮಾರು 400,000 ಎಫ್‌ಎಸ್‌ಡಿ ವಾಹನಗಳನ್ನು ಖರೀದಿಸಿದ್ದಾರೆ. ಬಹುತೇಕ ಎಲ್ಲ ಗ್ರಾಹಕರಿಗಾಗಿ ನಾವು ಈಗ ಎಫ್‌ಎಸ್‌ಡಿ ಬೀಟಾ ವಾಹನಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಟೆಸ್ಲಾ ಹೇಳಿದೆ.
ಇದನ್ನೂ ಓದಿ: ಐಬಿಎಂ ಕಂಪನಿಯಿಂದ ಉದ್ಯೋಗಿಗಳಿಗೆ ಶಾಕ್: 3,900 ನೌಕರರನ್ನು ತೆಗೆದುಹಾಕಲು ನಿರ್ಧಾರ!