ರಿಯಾಸಿ(ಜಮ್ಮು- ಕಾಶ್ಮೀರ): ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಉಗ್ರರು ರಕ್ತಬೀಜಾಸುರರಂತೆ ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಭಾರತೀಯ ಸೇನಾಪಡೆಗಳ ಗುಂಡೇಟಿಗೆ ಈ ವರ್ಷ ಅತಿಹೆಚ್ಚು ಉಗ್ರರು ಹತರಾದರೂ ಅವರ ಸಂಖ್ಯೆ ಮಾತ್ರ ಕುಗ್ಗಿಲ್ಲ. ಇಂದು ರಿಯಾಸಿ ಜಿಲ್ಲೆಯ ತುಕ್ಸಾನ್ನ ಗ್ರಾಮಸ್ಥರು ಲಷ್ಕರ್ ಇ ತೊಯ್ಬಾ(ಎಲ್ಇಟಿ) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹಿಡಿದು ಭದ್ರತಾ ಪಡೆಗಳಿಗೆ ಒಪ್ಪಿಸಿದ್ದಾರೆ.
ಬಂಧಿತ ಉಗ್ರರನ್ನು ಫೈಝಲ್ ಅಹ್ಮದ್ ದಾರ್ ಮತ್ತು ತಾಲಿಬ್ ಹುಸೇನ್ ಎಂದು ಗುರುತಿಸಲಾಗಿದೆ. ತುಕ್ಸಾನ್ ಗ್ರಾಮದಲ್ಲಿ ಉಳಿದುಕೊಂಡಿದ್ದ ಇವರ ಚಟುವಟಿಕೆಯ ಮೇಲೆ ಅನುಮಾನ ಬಂದು, ಗ್ರಾಮಸ್ಥರು ಅವರನ್ನು ಹಿಡಿದು ಭದ್ರತಾ ಪಡೆಗಳಿಗೆ ನೀಡಿದ್ದಾರೆ. ಉಗ್ರರಿಂದ ಎರಡು ಎಕೆ47 ರೈಫಲ್‌ಗಳು, 7 ಗ್ರೆನೇಡ್‌ಗಳು ಮತ್ತು ಪಿಸ್ತೂಲ್ ಜಪ್ತಿ ಮಾಡಲಾಗಿದೆ.
ಗ್ರಾಮಸ್ಥರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಮ್ಮು ಕಾಶ್ಮೀರ ಡಿಜಿಪಿ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: ಇಂದು ಶಿಂಧೆ ಸರ್ಕಾರಕ್ಕೆ ಮೊದಲ ಪರೀಕ್ಷೆ: ಹೊಸ ಸ್ಪೀಕರ್ ಆಯ್ಕೆ ಕಸರತ್ತು, ನಾಳೆ ವಿಶ್ವಾಸಮತ