ETV Bharat / bharat

ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ: ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ವಶ - ಜಮ್ಮು- ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ

ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದ ಉಗ್ರರ ಅಡಗುತಾಣದಿಂದ ಎರಡು ಎಕೆ-47 ಅಸಾಲ್ಟ್ ರೈಫಲ್‌ಗಳು, ಒಂದು 223 ಬೋರ್ ಎಕೆ ಆಕಾರದ ಹ್ಯಾಂಡ್‌ಗ್ರಿಪ್‌ ಗನ್ ಹಾಗೂ ಒಂದು ಚೈನೀಸ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

terrorist-hideout-busted-near-loc-in-j-ks-poonch
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ
author img

By

Published : Apr 4, 2022, 10:16 AM IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಹಳ್ಳಿಯೊಂದರಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗುತಾಣವನ್ನು ಕಂಡು ಹಿಡಿದಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ಮ್ಯಾಗಜೀನ್‌ ಮತ್ತು 63 ರೌಂಡ್ಸ್​ಗಳಿರುವ ಎರಡು ಎಕೆ-47 ಅಸಾಲ್ಟ್ ರೈಫಲ್‌ಗಳು, ಒಂದು 223 ಬೋರ್ ಎಕೆ ಆಕಾರದ ಹ್ಯಾಂಡ್‌ಗ್ರಿಪ್‌ ಗನ್, ಅದರ ಎರಡು ಮ್ಯಾಗಜೀನ್‌ ಮತ್ತು 20 ರೌಂಡ್ಸ್​ ಮತ್ತು ಮ್ಯಾಗಜೀನ್ ಮತ್ತು ನಾಲ್ಕು ರೌಂಡ್ಸ್​ಗಳನ್ನು ಹೊಂದಿದ ಒಂದು ಚೈನೀಸ್ ಪಿಸ್ತೂಲ್ ಜಪ್ತಿ ಮಾಡಲಾಗಿದೆ.

  • J&K | Army & Spl Ops Group carried out a jt op & recovered arms & ammunition from a village along LoC in Poonch dist. Two AK-47 rifles, one 223 bore AK shape gun with handgrip, 1 Chinese Pistol, 1 Chinese pistol magazine, 63 AK-47 rounds, four Chinese pistol rounds etc recovered pic.twitter.com/4z2zfDwMRL

    — ANI (@ANI) April 4, 2022 " class="align-text-top noRightClick twitterSection" data=" ">

ನೂರ್ಕೋಟೆ ಗ್ರಾಮದಲ್ಲಿ ಸೇನೆ ಮತ್ತು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ನಡೆಸಿದ ಈ ಶೋಧ ಕಾರ್ಯಾಚರಣೆಯಲ್ಲಿ ಅಡಗುತಾಣ ಪತ್ತೆಯಾಗಿದೆ. ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದ ತುರ್ತು ಮನವಿಗೆ ಭಾರತ ತ್ವರಿತವಾಗಿ ಸ್ಪಂದಿಸಿದೆ: ಗೋಪಾಲ್‌ ಬಾಗ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.