ETV Bharat / bharat

ಭಯೋತ್ಪಾದನೆಯನ್ನು ಸಮರ್ಥವಾಗಿ ಹತ್ತಿಕ್ಕಲಾಗಿದೆ: ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ

author img

By PTI

Published : Nov 26, 2023, 1:05 PM IST

PM Modi Mann ki baat on terrorism: ಮುಂಬೈ ಭಯೋತ್ಪಾದಕ ದಾಳಿಯಿಂದ ದೇಶವು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಭಾರತ ಈಗ ಭಯೋತ್ಪಾದನೆಯನ್ನು ಸಮರ್ಥವಾಗಿ ಹತ್ತಿಕ್ಕುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

India crushing terrorism with all its courage: PM Modi

ನವದೆಹಲಿ: 26/11ರ ಮುಂಬೈ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಈ ದಿನದಂದು ಅತ್ಯಂತ ಘೋರ ದಾಳಿಯನ್ನು ಎದುರಿಸಿತ್ತು. ಆದರೆ ಆ ದಾಳಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಮತ್ತು ಭಯೋತ್ಪಾದನೆಯನ್ನು ತನ್ನ ಎಲ್ಲಾ ಸಾಮರ್ಥ್ಯದಿಂದ ಹತ್ತಿಕ್ಕುತ್ತಿದೆ ಎಂದು ಹೇಳಿದರು.

ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಗೌರವ ನಮನ ಸಲ್ಲಿಸಿದ ಪ್ರಧಾನಿ ದೇಶವು ಧೈರ್ಯಶಾಲಿ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದೆ ಎಂದು ಹೇಳಿದರು. ನವೆಂಬರ್ 26ನೇ ದಿನಾಂಕವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನ ದೇಶದಲ್ಲಿ ಅತ್ಯಂತ ಘೋರ ಭಯೋತ್ಪಾದಕ ದಾಳಿ ನಡೆಯಿತ್ತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಆದರೆ, ನಾವು ಆ ದಾಳಿಯಿಂದ ಚೇತರಿಸಿಕೊಂಡಿದ್ದೇವೆ ಮತ್ತು ಈಗ ನಾವು ಭಯೋತ್ಪಾದನೆಯನ್ನು ಪೂರ್ಣ ಶಕ್ತಿಯಿಂದ ಹತ್ತಿಕ್ಕುತ್ತಿದ್ದೇವೆ ಎಂದು ಅವರು ಪ್ರತಿಪಾದಿಸಿದರು.

ನವೆಂಬರ್ 26, 2008 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದೊಳಕ್ಕೆ ನುಸುಳಿದ್ದ 10 ಜನ ಲಷ್ಕರ್-ಎ-ತೈಬಾ ಭಯೋತ್ಪಾದಕರು ಮುಂಬೈನ ಹಲವಾರು ಪ್ರದೇಶಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. 60 ಗಂಟೆಗಳ ಕಾಲ ಭಯೋತ್ಪಾದಕರ ಅಟ್ಟಹಾಸಕ್ಕೆ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನ ಸಾವಿಗೀಡಾಗಿ ಮತ್ತು ಹಲವಾರು ಜನರು ಗಾಯಗೊಂಡಿದ್ದರು. 1949ರಲ್ಲಿ ಸಂವಿಧಾನ ಸಭೆಯು ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ್ದರಿಂದ ನವೆಂಬರ್ 26 ಆ ಕಾರಣಕ್ಕಾಗಿಯೂ ಭಾರತದ ಪಾಲಿಗೆ ಮುಖ್ಯ ದಿನವಾಗಿದೆ ಎಂದು ಪ್ರಧಾನಿ ತಿಳಿಸಿದರು.

2015 ರಲ್ಲಿ ನಾವು ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ನವೆಂಬರ್ 26ರಂದು ಸಂವಿಧಾನ ದಿನವಾಗಿ ಆಚರಿಸುವ ಆಲೋಚನೆ ಬಂದಿತ್ತು. ಸಮಸ್ತ ದೇಶವಾಸಿಗಳಿಗೆ ಸಂವಿಧಾನ ದಿನದ ಶುಭಾಶಯಗಳು ಎಂದು ಮೋದಿ ಹೇಳಿದರು.

ಇತ್ತೀಚಿನ ಹಬ್ಬ ಋತುವಿನಲ್ಲಿ ಸುಮಾರು 4 ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆದಿದೆ ಮತ್ತು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಖರೀದಿಸಲು ಜನ ಸಾಕಷ್ಟು ಸಾಕಷ್ಟು ತೋರಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಕೆಲ ಕುಟುಂಬಗಳು ವಿದೇಶದಲ್ಲಿ ವಿವಾಹಗಳನ್ನು ಆಯೋಜಿಸುವ ಕ್ರಮವನ್ನು ಪ್ರಶ್ನಿಸಿದ ಪ್ರಧಾನಿ ಮೋದಿ, ಅಂಥ ಅದ್ದೂರಿ ಸಮಾರಂಭಗಳನ್ನು ಭಾರತದಲ್ಲಿಯೇ ಆಯೋಜಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಮುಂಬೈ ಮೇಲೆ ಪಾಕ್‌ ಉಗ್ರರ ದಾಳಿಗೆ 15 ವರ್ಷ: 174 ಮುಗ್ಧ ಜೀವಗಳ ಬಲಿ ಪಡೆದ ಕಹಿನೆನಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.