ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಸ್ಥಳೀಯ ಪತ್ರಕರ್ತರಿಗೆ ಆನ್ಲೈನ್ನಲ್ಲಿ ಬರುತ್ತಿರುವ ಭಯೋತ್ಪಾದಕ ಬೆದರಿಕೆಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಕೇಂದ್ರಾಡಳಿತ ಪ್ರದೇಶದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಶ್ರೀನಗರ, ಬದ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ನಡೆಸಿದ ತನಿಖೆಯಿಂದ ಸಿಕ್ಕ ಸುಳಿವುಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀನಗರ ಪೊಲೀಸರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರವೂ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: ಜನನಿಬಿಡ ಪ್ರದೇಶದಲ್ಲಿ ಭೀಕರ ಮಹಿಳಾ ಆತ್ಮಾಹುತಿ ದಾಳಿ: 6 ಮಂದಿ ಸಾವು, ಭಾರತ ಸಂತಾಪ