ETV Bharat / bharat

ಉಗ್ರರಿಗೆ ಹಣ ಬೆಂಬಲ: ಪ್ರತ್ಯೇಕತಾವಾದಿ ನಾಯಕ ಪ್ರೊ. ಅಬ್ದುಲ್ ಗನಿ ಭಟ್ ತೀವ್ರ ವಿಚಾರಣೆ - ಮುಸ್ಲಿಂ ಕಾನ್ಫರೆನ್ಸ್ ಅಧ್ಯಕ್ಷ ಪ್ರೊಫೆಸರ್ ಭಟ್

ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಜಿತೇಂದ್ರ ಸಿಂಗ್ ಅಲಿಯಾಸ್ ಬಾಬು ಸಿಂಗ್ ವಿಚಾರಣೆ ವೇಳೆ ಆಲ್ ಪಾರ್ಟಿಗಳ ಹುರಿಯತ್ ಕಾನ್ಫರೆನ್ಸ್‌ನ ಮಾಜಿ ಅಧ್ಯಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಕಾನ್ಫರೆನ್ಸ್ ಅಧ್ಯಕ್ಷ ಪ್ರೊಫೆಸರ್ ಭಟ್ ಅವರ ಹೆಸರು ಕೇಳಿಬಂದಿದೆ.

ಉಗ್ರರಿಗೆ ಹಣ ಬೆಂಬಲ: ಪ್ರತ್ಯೇಕತಾವಾದಿ ನಾಯಕ ಪ್ರೊ. ಅಬ್ದುಲ್ ಗನಿ ಭಟ್ ತೀವ್ರ ವಿಚಾರಣೆ
terror-funding-case-former-hurriyat-chief-abdul-gani-bhat-questioned-for-8-hours
author img

By

Published : Nov 27, 2022, 5:16 PM IST

ಶ್ರೀನಗರ: ಉಗ್ರಗಾಮಿ ಚಟುವಟಿಕೆ ಮತ್ತು ಹವಾಲಾ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ಹುರಿಯತ್ ನಾಯಕ ಪ್ರೊ.ಅಬ್ದುಲ್ ಗನಿ ಭಟ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಜಂಟಿ ತನಿಖಾ ಕೇಂದ್ರ ಅವರಿಗೆ ಸಮನ್ಸ್​ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರೊ. ಅಬ್ದುಲ್ ಗನಿ ಭಟ್ ಅವರನ್ನು ವಿಶೇಷ ತನಿಖಾ ದಳ ಎಂಟು ಗಂಟೆಗಳ ತೀವ್ರ ವಿಚಾರಣೆ ನಡೆಸಿದೆ.

ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಜಿತೇಂದ್ರ ಸಿಂಗ್ ಅಲಿಯಾಸ್ ಬಾಬು ಸಿಂಗ್ ವಿಚಾರಣೆ ವೇಳೆ ಆಲ್ ಪಾರ್ಟಿಗಳ ಹುರಿಯತ್ ಕಾನ್ಫರೆನ್ಸ್‌ನ ಮಾಜಿ ಅಧ್ಯಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಕಾನ್ಫರೆನ್ಸ್ ಅಧ್ಯಕ್ಷ ಪ್ರೊಫೆಸರ್ ಭಟ್ ಅವರ ಹೆಸರು ಕೇಳಿಬಂದಿದೆ. ತನಿಖಾ ಸಂಸ್ಥೆಯು ಕಳೆದ ವಾರ ಅವರಿಗೆ ವಿಚಾರಣೆಗಾಗಿ ನೋಟಿಸ್ ಕಳುಹಿಸಿತ್ತು. ಅದರಂತೆ ಭಟ್ ವಿಚಾರಣೆಗೆ ಹಾಜರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳ ಬಗ್ಗೆ ತನಿಖಾ ಸಂಸ್ಥೆ ಅವರಿಂದ ವಿವರಣೆ ಪಡೆದಿದೆ.

ಪ್ರೊಫೆಸರ್ ಅಬ್ದುಲ್ ಘನಿ ಭಟ್ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಾಗಿದ್ದು, ಕಾಶ್ಮೀರ ಸಮಸ್ಯೆಯ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಒಲವು ಹೊಂದಿದ್ದಾರೆ. ಅವರ ಪ್ರತ್ಯೇಕತಾವಾದಿ ಸಿದ್ಧಾಂತಕ್ಕಾಗಿ ಅಂದಿನ ರಾಜ್ಯ ಸರ್ಕಾರವು ಫೆಬ್ರವರಿ 1986 ರಲ್ಲಿ ಅವರನ್ನು ವಜಾಗೊಳಿಸಿತ್ತು. ಆಗ ಅವರು ಪೂಂಚ್‌ನ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗಾಗಿ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ವಿವಿಧ ಹುರಿಯತ್ ನಾಯಕರಿಗೆ ಗಡಿಯಾಚೆಯಿಂದ ಬಂದ ಹಣದ ಕುರಿತು ಪ್ರೊಫೆಸರ್ ಭಟ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಭಯೋತ್ಪಾದನೆ ನಿಧಿ ಪ್ರಕರಣಗಳಲ್ಲಿ ಇವರ ಪ್ರಮುಖ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಸೌಂದರ್ಯಕ್ಕೆ ಮಾರು ಹೋದ ಚಿತ್ರರಂಗ.. ಪ್ರಕೃತಿಯ ಮೋಡಿಗೆ ಫಿದಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.