ETV Bharat / bharat

ಗಾಂಧಿನಗರದಲ್ಲಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು - 10 ಮಂದಿ ಸ್ಥಳದಲ್ಲೇ ಸಾವು

ಗುಜರಾತ್​ನ ಗಾಂಧಿನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

Ten people died in Road Accident in Gandhinagar , gujarat
ಗಾಂಧಿನಗರ: ಖಾಸಗಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು
author img

By

Published : May 10, 2023, 12:33 PM IST

ಗಾಂಧಿನಗರ (ಗುಜರಾತ್​): ಬಸ್​ಗಾಗಿ ಕಾಯುತ್ತಿದ್ದ ಜನರ ಮೇಲೆ ಬಸ್​ ಹರಿದು ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್​ನ ಗಾಂಧಿನಗರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಹಲವರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಕಲೋಲ್‌ ತಾಲೂಕಿನ ಅಂಬಿಕಾ ನಗರ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ಈ ವೇಳೆ ಸಾರಿಗೆ ಬಸ್ಸೊಂದು ನಿಲ್ದಾಣದ ಹೊರಗೆ ನಿಂತಿತ್ತು. ಬಸ್‌ ಮುಂಭಾಗದಲ್ಲಿ ಪ್ರಯಾಣಿಕರು ಎರಡನೇ ಬಸ್‌ಗಾಗಿ ಕಾಯುತ್ತಿದ್ದರು. ಆಗ ಹಿಂದಿನಿಂದ ಬಂದ ಖಾಸಗಿ ಬಸ್ ಸರ್ಕಾರಿ ಸಾರಿಗೆ ಬಸ್‌ಗೆ​ ಡಿಕ್ಕಿ ಹೊಡೆದಿದೆ. ಹೀಗಾಗಿ ನಿಂತಿದ್ದ ಸಾರಿಗೆ ಬಸ್​ ರಭಸದಿಂದ ಮುಂದೆ ಸಾಗಿ ಜನರ ಮೇಲೆ ಹರಿಯಿತು ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯಲಹಂಕ ನಿಲ್ದಾಣದಲ್ಲಿ ಗುದ್ದಿದ ಬಿಎಂಟಿಸಿ ಬಸ್​ : ಕಂಡಕ್ಟರ್​ ಸ್ಥಳದಲ್ಲೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.