ETV Bharat / bharat

ಹಿಮಾಚಲದ ಕಂದಕಕ್ಕೆ ಉರುಳಿದ ವಾಹನ: 10 ಮಂದಿ ಸ್ಥಳದಲ್ಲೇ ಸಾವು - ವಾಹನ ಅಪಘಾತ

ಹಿಮಾಚಲ ಪ್ರದೇಶದ ಸಿರ್​ಮುರ್ ಜಿಲ್ಲೆಯಲ್ಲಿ ವಾಹನ ಕಂದಕಕ್ಕೆ ಉರುಳಿ ಅಪಘಾತ ಸಂಭವಿಸಿದೆ. ಪ್ರಧಾನಿ ಮೋದಿ, ಹಿಮಾಚಲ ಸಿಎಂ ಜೈರಾಮ್ ಠಾಕೂರ್ ಸೇರಿದಂತೆ ಹಲವರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Ten killed after vehicle falls in gorge in Himachal

author img

By

Published : Jun 29, 2021, 10:57 AM IST

ಶಿಮ್ಲಾ (ಹಿಮಾಚಲ ಪ್ರದೇಶ): ವಾಹನ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 10 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಸಿರ್​ಮುರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಮದುವೆ ಕಾರ್ಯಕ್ರಮದಿಂದ ಜನರನ್ನು ಹೊತ್ತು ತರುತ್ತಿದ್ದ ವಾಹನ ಶಿಲ್ಲೈ ಉಪವಿಭಾಗದ ಪಶೋಗ್ ಬಳಿ ಕಂದಕಕ್ಕೆ ಉರುಳಿ ಅವಘಡ ಸಂಭವಿಸಿದೆ. ​

ವಾಹನದಲ್ಲಿ ಒಟ್ಟು 12 ಜನರಿದ್ದರು. ಈ ಪೈಕಿ ಅಪಘಾತ ನಡೆದ ತಕ್ಷಣ 9 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಇಬ್ಬರು ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

"ನಾನು ಆ ದಾರಿಯಾಗಿ ಹೋಗುತ್ತಿದ್ದಾಗ ಆ್ಯಂಬುಲೆನ್ಸ್ ನೋಡಿ ಅಪಘಾತ ನಡೆದ ವಿಷಯ ಗೊತ್ತಾಯಿತು. ನಾನು ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಲು ಗಾಯಾಳುಗಳನ್ನು ದಾಖಲಿಸಿದ್ದ ಆಸ್ಪತ್ರೆಗೆ ತೆರಳಿದ್ದೆ. ಹಿರಿಯ ವೈದ್ಯರೊಂದಿಗೆ ವಿಶೇಷ ಕಾಳಜಿ ವಹಿಸುವಂತೆ ಹೇಳಿದ್ದೇನೆ. ಆದರೂ, ಗಾಯಗೊಂಡವರಲ್ಲಿ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು" ಎಂದು ಪಾವೊಂಟಾ ಸಾಹಿಬ್ ಎಸ್‌ಡಿಎಂ ವಿವೇಕ್ ಮಹಾಜನ್ ಹೇಳಿದ್ದಾರೆ.

ಇದನ್ನೂ ಓದಿ: ಎಲ್‌ಜೆಪಿ ಬಿಕ್ಕಟ್ಟು ಶಮನಕ್ಕಾಗಿ ಬಿಜೆಪಿ ನಾಯಕರ ಬಾಗಿಲು ಬಡಿದ ಚಿರಾಗ್ ಪಾಸ್ವಾನ್‌

ಘಟನೆಯಲ್ಲಿ ಮೃತಪಟ್ಟವರಿಗೆ ಹಿಮಾಚಲ ಪ್ರದೇಶದ ಸಿಎಂ ಜೈ ರಾಮ್ ಠಾಕೂರ್ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮೃತಪಟ್ಟವರು ಕುಟುಂಬಗಳಿಗೆ ಸಿಗಬೇಕಾದ ಪರಿಹಾರವನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಅವರು ಸೂಚಿಸಿದ್ದಾರೆ.

  • Pained by the loss of lives due to an accident in Sirmaur, HP. Condolences to the bereaved families and prayers with the injured. An ex-gratia of Rs. 2 lakh each from PMNRF would be provided to the next of kin of the deceased. Rs. 50,000 would be given to the injured: PM Modi

    — PMO India (@PMOIndia) June 28, 2021 " class="align-text-top noRightClick twitterSection" data=" ">

ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಬೇಸರ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೊಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.