ETV Bharat / bharat

ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದ ಟೆಂಪೋ: ಕಂದಮ್ಮ ಸ್ಥಳದಲ್ಲೇ ಸಾವು, ವಿಡಿಯೋ ನೋಡಿ - ಥಾಣೆಯಲ್ಲಿ ಮಗುವಿನ ಮೇಲೆ ಹರಿದ ಟೆಂಪೋ

ಮೈದಾನದಲ್ಲಿ ಆಟವಾಡುತ್ತಿದ್ದಾಗ ಟೆಂಪೋ ಹರಿದ ಪರಿಣಾಮ ಪುಟ್ಟ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಥಾಣೆಯಲ್ಲಿ ನಡೆದಿದೆ.

Tempo driver crushes 14-month-old boy
Tempo driver crushes 14-Tempo driver crushes 14-month-old boymonth-old boy
author img

By

Published : Mar 29, 2022, 7:50 PM IST

ಥಾಣೆ(ಮಹಾರಾಷ್ಟ್ರ): ಮಹಾರಾಷ್ಟ್ರದ ಥಾಣೆಯ ಟಿಟ್ವಾಲಾ ಸಮೀಪದ ಬಲ್ಯಾನಿ ಪ್ರದೇಶದಲ್ಲಿನ ಮೈದಾನದಲ್ಲಿ ಆಟವಾಡ್ತಿದ್ದ ಮಕ್ಕಳ ಮೇಲೆ ಟೆಂಪೋ ಹರಿದು ಹೋಗಿದೆ. ಪರಿಣಾಮ ಮಗು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರು ಚಾಲಕನನ್ನು ಬಂಧನ ಮಾಡಿದ್ದಾರೆ. ಬಲ್ಯಾನಿ ಪ್ರದೇಶದ ರಹೀಸಾ ಚಾಲ್ ಬಳಿಯ ಮಾರ್ಬಲ್ ಅಂಗಡಿಗೆ ಟೆಂಪೋದಲ್ಲಿ ಮಾರ್ಬಲ್ ತರಲಾಗಿತ್ತು. ಈ ಮೈದಾನದಲ್ಲಿ ಮಕ್ಕಳು ಸಹ ಆಟವಾಡುತ್ತಿದ್ದರು.

ಆಟವಾಡ್ತಿದ್ದ 14 ತಿಂಗಳ ಮಗುವಿನ ಮೇಲೆ ಹರಿದ ಟೆಂಪೋ

ಇದನ್ನೂ ಓದಿ: ಬಿಹಾರದ ಈ ಖಾದ್ಯಕ್ಕೆ ಪಂಜಾಬ್​ನಲ್ಲಿ ಬಹು ಬೇಡಿಕೆ: ವ್ಯಾಪಾರಿಗೆ ಪ್ರತಿದಿನ ₹70 ಸಾವಿರ ಗಳಿಕೆ!

ಟೆಂಪೋ ಸ್ಟಾರ್ಟ್ ಮಾಡಿರುವ ಡ್ರೈವರ್​ ತನ್ನ ವಾಹನದೆದುರೇ ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿಸಿದ್ದಾನೆ. ಪರಿಣಾಮ 14 ತಿಂಗಳ ಕಂದಮ್ಮ ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಪಡೆದುಕೊಂಡು ಸ್ಥಳಕ್ಕಾಗಮಿಸಿ, ಚಾಲಕನ ಸೈಫ್​ ಫಾರೂಕಿಯನ್ನು ಬಂಧನ ಮಾಡಿದ್ದಾರೆ. ಕೋರ್ಟ್​ಗೆ ಹಾಜರಾದ ಫಾರೂಕಿ ಜಾಮೀನು ಪಡೆದು ಹೊರಬಂದಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಪ್ರಕಾರ ಈತ ಉದ್ದೇಶಪೂರ್ವಕವಾಗಿ ಮಗುವಿನ ಮೇಲೆ ಟೆಂಪೋ ಹರಿಸಿದ್ದಾನೆಂದು ಹೇಳಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.