ETV Bharat / bharat

ತೆಲಂಗಾಣ ಸಚಿವಾಲಯ​​ ಕಟ್ಟಡ ಆವರಣದಲ್ಲಿ ಗುಡಿ, ಚರ್ಚು, ಮಸೀದಿ ಉದ್ಘಾಟನೆ - Governor Tamilisai Soundararajan

ಹೈದರಾಬಾದ್​ನ ಸೆಕ್ರೆಟರಿಯೇಟ್ (ಸಚಿವಾಲಯ ಕಟ್ಟಡ) ಆವರಣದಲ್ಲಿ ಮಂದಿರ, ಮಸೀದಿ ಹಾಗೂ ಚರ್ಚ್ ​ಕಟ್ಟಡವನ್ನು ಇಂದು ​ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಮುಖ್ಯಮಂತ್ರಿ ಕೆಸಿಆರ್​ ಜಂಟಿಯಾಗಿ ಉದ್ಘಾಟಿಸಿದ್ದಾರೆ.

Temple, mosque, church at Telangana Secretariat best example of communal harmony: KCR
ತೆಲಂಗಾಣ ಸೆಕ್ರೆಟರಿಯೇಟ್​​ ಆವರಣದಲ್ಲಿ ಮಂದಿರ, ಮಸೀದಿ, ಚರ್ಚ್ ಉದ್ಘಾಟಿಸಿದ ರಾಜ್ಯಪಾಲೆ, ಸಿಎಂ
author img

By ETV Bharat Karnataka Team

Published : Aug 25, 2023, 3:58 PM IST

ಹೈದರಾಬಾದ್​ (ತೆಲಂಗಾಣ): ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ನಿರ್ಮಿಸಲಾಗಿರುವ ನೂತನ ಸೆಕ್ರೆಟರಿಯೇಟ್​​ (ಸಚಿವಾಲಯ) ಆವರಣದಲ್ಲಿ ಇಂದು (ಶುಕ್ರವಾರ) ಮಂದಿರ, ಮಸೀದಿ ಹಾಗೂ ಚರ್ಚ್ ಅನ್ನು ​ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಏಕಕಾಲಕ್ಕೆ ಉದ್ಘಾಟಿಸಿದರು.

  • డా. బి. ఆర్. అంబేద్కర్ తెలంగాణ రాష్ట్ర సచివాలయ ప్రాంగణంలో నిర్మించిన నూతన దేవాలయాన్ని ఈరోజు గవర్నర్‌ శ్రీమతి తమిళిసై సౌందరరాజన్ తో కలిసి ముఖ్యమంత్రి శ్రీ కె. చంద్రశేఖర్ రావు ప్రారంభించారు.

    ఈ కార్యక్రమంలో మంత్రులు, ఎంపీలు, ఎమ్మెల్సీలు, ఎమ్మెల్యేలు, ప్రభుత్వ ప్రధాన కార్యదర్శి… pic.twitter.com/XCsmdy6FML

    — Telangana CMO (@TelanganaCMO) August 25, 2023 " class="align-text-top noRightClick twitterSection" data=" ">

ರಾಜ್ಯಾಡಳಿತ ಕೇಂದ್ರವಾದ ಡಾ.ಬಿ.ಆರ್​.ಅಂಬೇಡ್ಕರ್​​ ಸೆಕ್ರೆಟರಿಯೇಟ್‌ ಅನ್ನು ಏಪ್ರಿಲ್​ 30ರಂದು ಕೆಸಿಆರ್​ ಉದ್ಘಾಟಿಸಿದ್ದರು. ಇದೇ ಸೆಕ್ರೆಟರಿಯೇಟ್​​ ಆವರಣದ ನೈಋತ್ಯ ದಿಕ್ಕಿನಲ್ಲಿ ನಲ್ಲಪೋಚಮ್ಮ ಅಮ್ಮಾವರಿ ದೇಗುಲದ ಜೊತೆಗೆ ಶಿವ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಒಂದು ಮಸೀದಿ ಹಾಗೂ ಚರ್ಚ್​ ನಿರ್ಮಾಣ ಮಾಡಲಾಗಿದೆ. ಮೂರು ಧರ್ಮಗಳ ಪೂಜಾ ಸ್ಥಳಗಳ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಸಿಎಂ ಕೆಸಿಆರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು.

  • Hon'ble CM Sri K. Chandrashekar Rao along with Hon'ble Governor @DrTamilisaiGuv inaugurated the newly constructed Church in the premises of Dr. B.R. Ambedkar Telangana State Secretariat today.

    Ministers, MPs, MLCs, MLAs, @TelanganaCS Smt. Santhi Kumari, Secretariat employees and… pic.twitter.com/DtBIPJCkNo

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಹಾಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿಯಲ್ಲಿ ರಾಜ್ಯಪಾಲೆ, ಸಿಎಂ ಭಾಗವಹಿಸಿ ಪೂಜೆ ಸಲ್ಲಿಸಿದರು. ನಂತರ ಪಕ್ಕದಲ್ಲಿರುವ ಚರ್ಚ್​ಗೆ ತೆರಳಿದ ತಮಿಳಿಸೈ ಮತ್ತು ಕೆಸಿಆರ್ ಕೇಕ್ ಕತ್ತರಿಸುವ ಮೂಲಕ ಚರ್ಚ್​ ಉದ್ಘಾಟಿಸಿದರು. ಬಳಿಕ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಸೀದಿಯಲ್ಲಿ ಮಾತನಾಡಿದ ಕೆಸಿಆರ್, ''ತೆಲಂಗಾಣದಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡಲು ತಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಮೂರು ಪ್ರಾರ್ಥನಾ ಸ್ಥಳಗಳ ನಿರ್ಮಾಣವು ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆ. ಮೂವರು ಸಹೋದರರು ಹೇಗೆ ಒಟ್ಟಿಗೆ ಕೆಲಸ ಮಾಡಬಹುದು, ಪ್ರಾರ್ಥನೆ ಮತ್ತು ಶಾಂತಿ ಮತ್ತು ಸಾಮರಸ್ಯದಿಂದ ಹೇಗೆ ಬದುಕಬಹುದು ಎಂಬುದಕ್ಕೆ ನಾವು ಸಾಕ್ಷಿ. ಇದರಿಂದ ಇಡೀ ಭಾರತ ಪಾಠ ಕಲಿಯಬಹುದು'' ಎಂದು ಅಭಿಪ್ರಾಯಪಟ್ಟರು. ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಎಐಎಂಐಎಂ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ವಿಧಾನಸಭೆಯಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಉಪಸ್ಥಿತರಿದ್ದರು.

  • Hon'ble CM Sri K. Chandrashekar Rao along with Hon'ble Governor @DrTamilisaiGuv inaugurated the newly constructed Mosque in the premises of Dr. B.R. Ambedkar Telangana State Secretariat today.

    Ministers, MPs, MLCs, MLAs, @TelanganaCS Smt. Santhi Kumari, Secretariat employees and… pic.twitter.com/Ltgeqo7NVq

2021ರಲ್ಲಿ ಹಳೆಯ ಸೆಕ್ರೆಟರಿಯೇಟ್​ ಕಟ್ಟಡಗಳ ನೆಲಸಮ ಸಂದರ್ಭದಲ್ಲಿ ಮಸೀದಿ ಮತ್ತು ದೇವಾಲಯಕ್ಕೆ ಹಾನಿಯಾಗಿತ್ತು. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಕೆಸಿಆರ್, ಆರಾಧನಾ ಸ್ಥಳಗಳ ಮೇಲೆ ಅವಶೇಷಗಳು ಬಿದ್ದಿದ್ದರಿಂದ ಹಾನಿಗೊಳಗಾಗಿವೆ ಎಂದು ಹೇಳಿದ್ದರು. ಇದೇ ವೇಳೆ, ಹಳೆ ಸೆಕ್ರೆಟರಿಯೇಟ್‌ನಲ್ಲಿ ಚರ್ಚ್ ಸೇವೆಗಳು ನಡೆಯುತ್ತಿದ್ದವು ಎಂದು ಕ್ರೈಸ್ತ ಮುಖಂಡರು ತಿಳಿಸಿದ್ದರು. ಇದರ ನಂತರ ಹೊಸ ಸೆಕ್ರೆಟರಿಯೇಟ್​ ಆವರಣದಲ್ಲಿ ಮಸೀದಿ, ದೇವಾಲಯ, ಚರ್ಚ್​ ನಿರ್ಮಿಸಲಾಗುತ್ತದೆ ಎಂದು ಕೆಸಿಆರ್ ಭರವಸೆ ನೀಡಿದ್ದರು.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಸಿಎಂ ಕೆಸಿಆರ್​ ಕನಸಿನ ಭವ್ಯಸೌಧ ಸೆಕ್ರೆಟರಿಯೇಟ್‌ ಲೋಕಾರ್ಪಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.