ವಿಜಯವಾಡ (ಆಂಧ್ರಪ್ರದೇಶ): ಪ್ರತಿ ವರ್ಷ ಮಳೆಗಾಲದಲ್ಲಿ ಈ ದೇವಸ್ಥಾನದ ಮುಂಭಾಗ ನೀರು ಬಂದು ನಿಲ್ಲುತ್ತಿತ್ತು. ಭಕ್ತರಿಗೆ ಪೂಜೆ ಸಲ್ಲಿಸಲು ಅಡ್ಡಿಯಾಗುತ್ತಿತ್ತು. ದೇವಾಲಯದ ಎತ್ತರವನ್ನು ಹೆಚ್ಚಿಸಬೇಕಾದರೆ ಅದನ್ನು ಕೆಡವಬೇಕಿತ್ತು. ಆದರೆ ಯಾವುದೇ ಕಾರಣಕ್ಕೂ ದೇಗುಲವನ್ನು ಕೆಡವಲು ಗ್ರಾಮಸ್ಥರು ಸಿದ್ಧರಿರಲಿಲ್ಲ. ಆದರೂ ದೇವಾಲಯದ ಎತ್ತರವನ್ನು ಹೆಚ್ಚಿಸಲಾಗಿದೆ.
38 ವರ್ಷಗಳ ಹಿಂದೆ ಆಂಧ್ರಪ್ರದೇಶದ ವಿಜಯವಾಡದ ಭವಾನಿಪುರಂನಲ್ಲಿ ಹೆಚ್‌ಬಿ ಕಾಲೋನಿ ಜನರು ಹಣವನ್ನು ಸಂಗ್ರಹಿಸಿ ಕೋದಂಡ ರಾಮಾಲಯ ದೇಗುಲವನ್ನು ನಿರ್ಮಿಸಿದ್ದರು. ನಗರ ಬೆಳೆದಂತೆ ಒಳಚರಂಡಿ ವ್ಯವಸ್ಥೆ ಹಾಳಾಗಿದೆ. ಈ ದೇವಾಲಯವು ತಗ್ಗು ಪ್ರದೇಶದಲ್ಲಿದ್ದು, ಚರಂಡಿಯ ನೀರು ದೇವಾಸ್ಥಾನದ ಮುಂಭಾಗವನ್ನು ಆವರಿಸುತ್ತಿತ್ತು.
ದೇವಾಲಯದ ವ್ಯವಸ್ಥಾಪಕರು ನೂತನ ತಂತ್ರಜ್ಞಾನಗಳ ಬಗ್ಗೆ ಕೇಳಿದ್ದರು. ಅದರಂತೆ ಮಧ್ಯದಲ್ಲಿರುವ ಗರ್ಭಗೃಹಕ್ಕೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಕಂಬಗಳನ್ನು ಒಂದೊಂದಾಗಿ ಕತ್ತರಿಸಲಾಯಿತು. ನೂರಾರು ಜಾಕ್ಗಳನ್ನು ಬಳಸಿ ಒಂದು ತಿಂಗಳಲ್ಲಿ ಮೂರೂವರೆ ಅಡಿಯಷ್ಟು ದೇಗುಲದ ಎತ್ತರವನ್ನು ಹೆಚ್ಚಿಸಲಾಯಿತು. 18 ಲಕ್ಷ ಬಜೆಟ್‌ನಲ್ಲಿ ಈ ಕಾರ್ಯ ಮುಗಿದಿತ್ತು.
ಓದಿ: ಶಬರಿಮಲೆಯಲ್ಲಿ ಮಂಡಲ ಪೂಜೆ : ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಕಲ ಸಿದ್ಧತೆ
ದೇವಾಲಯದ ಮುಂಭಾಗದ ನಿರ್ಮಾಣಕ್ಕಾಗಿ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ ರಾವ್ ಅವರು ಸರ್ಕಾರದ ಬಳಿ 44 ಲಕ್ಷ ರೂ. ಬಿಡುಗಡೆ ಮಾಡುವಂತೆ ಕೋರಿದ್ದು, ವಿಗ್ರಹಗಳನ್ನು ಪುನಃ ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.