ಹೈದರಾಬಾದ್ : ಜಮ್ಮುಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ನಿನ್ನೆ ಮಚ್ಛಿನ್ ಸೆಕ್ಟರ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ಪ್ರತಿ ದಾಳಿಯಲ್ಲಿ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು.
ಹುತಾತ್ಮರಾದ ಮೂವರು ಯೋಧರಲ್ಲಿ ಇಬ್ಬರು ಆಂಧ್ರ ಮತ್ತು ತೆಲಂಗಾಣ ಮೂಲದವರಾಗಿದ್ದಾರೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಯೋಧ ಮಹೇಶ್ ಮತ್ತು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರೆಡ್ಡಿವೆರೆಪಲ್ಲಿ ಗ್ರಾಮದ ಯೋಧ ಪ್ರವೀಣ್ ಕುಮಾರ್ ರೆಡ್ಡಿ ಮೃತಪಟ್ಟಿದ್ದಾರೆ.
![MACHIL SECTOR](https://etvbharatimages.akamaized.net/etvbharat/prod-images/9483943_mahesh.png)
2014-15 ನೇ ಸಾಲಿನಲ್ಲಿ ಮಹೇಶ್ ಸೇನೆ ಸೇರಿದ್ದರು. ಎರಡು ವರ್ಷಗಳ ಹಿಂದೆ ಮದುವೆಯಾಗಿ ಇತ್ತೀಚೆಗಷ್ಟೇ ಕರ್ತವ್ಯಕ್ಕೆ ಮರಳಿದ್ದರು. ಪ್ರವೀಣ್ ಕುಮಾರ್ ಮದ್ರಾಸ್ನಲ್ಲಿ ಕಮಾಂಡೋ ತರಬೇತಿ ಪಡೆದು, ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
![MACHIL SECTOR](https://etvbharatimages.akamaized.net/etvbharat/prod-images/9483943_praveen.png)
ಯೋಧರು ಹುತಾತ್ಮರಾಗಿದ್ದರಿಂದ ಸ್ವಗ್ರಾಮಗಳಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.