ಪೂರ್ವ ಗೋದಾವರಿ (ಆಂಧ್ರಪ್ರದೇಶ): ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ವಿಶ್ವಸಂಸ್ಥೆ ಆಯೋಜಿಸಿರುವ ಆನ್ಲೈನ್ ಸಮ್ಮೇಳನದಲ್ಲಿ ಆಂಧ್ರದ ಮಹಿಳೆಯೊಬ್ಬರಿಗೆ ಭಾಗಿಯಾಗುವಂತೆ ಆಹ್ವಾನ ಬಂದಿದೆ. ಪೂರ್ವ ಗೋಧಾವರಿಯ ಸಖಿನೇಟ್ಪಲ್ಲಿಯ ಪರಿಸರ ಹೋರಾಟಗಾರ್ತಿ ದೀಪಿಕಾ ತಾಡಿ ಅವರಿಗೆ ಈ ವಿಶೇಷ ಗೌರವ ದೊರಕಿದೆ.
‘ತ್ಯಾಜ್ಯ ಮುಕ್ತ ಅಂತರ್ವೇದಿ’ ಎಂಬ ಅಭಿಯಾನ ಆರಂಭಿಸಿದ್ದ ದೀಪಿಕಾ ತಾಡಿ ಇಡೀ ಅಂತರ್ವೇದಿ ಗ್ರಾಮದಲ್ಲಿ ಮಾಲಿನ್ಯ ತಡೆಗಟ್ಟಲು ಹಸಿರು ತಂತ್ರಜ್ಞಾನಗಳ ಜೊತೆ ‘ಸ್ಮಾರ್ಟ್ ವಿಲೇಜ್ ಮೂವ್ಮೆಂಟ್’ ಸಹಯೋಗದಲ್ಲಿ ಗ್ರಾಮೀಣ ಸಬಲೀಕರಣಕ್ಕೆ ಕಾರಣರಾಗಿದ್ದರು. ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ಕರಾವಳಿ ಪ್ರದೇಶಗಳು ಮತ್ತು ದೇವಾಲಯಗಳ ಆವರಣ ಹಾಗೂ ಇತರ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ದೀಪಿಕಾ ಮತ್ತು ಇತರ ನಾಲ್ವರು ಮಹಿಳೆಯರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.
ವಿಶ್ವಸಂಸ್ಥೆಯ ಜೂನ್ 8ರ ‘ವಿಶ್ವ ಸಾಗರ ದಿನಾಚರಣೆ' ಯೋಜನೆಯ ಭಾಗವಾಗಿ, ‘ಗ್ರೀನ್ ವರ್ಮ್ಸ್’ ತಂಡದ ಸದಸ್ಯರು ಕರಾವಳಿ ಮಾಲಿನ್ಯ ತಡೆಗಟ್ಟುವಿಕೆ, ಜೀವವೈವಿಧ್ಯತೆಯ ಉಳಿವು ಮತ್ತು ಮೀನುಗಾರರ ಜೀವನೋಪಾಯದ ಕುರಿತು ದೀಪಿಕಾ ಮಾಡಿದ ಭಾಷಣದ ವಿಡಿಯೋವನ್ನು ಯುಎನ್ಗೆ ಕಳುಹಿಸಿದ್ದಾರೆ. ವಿವಿಧ ದೇಶಗಳ ಪ್ರತಿನಿಧಿಗಳ ಪೈಕಿ ಕೊನೆಯದಾಗಿ 30 ಸದಸ್ಯರ ಜೊತೆ ಭಾರತದ ದೀಪಿಕಾ ಅವರನ್ನು ಜಾಗತಿಕ ವೇದಿಕೆಗಾಗಿ ವಿಶ್ವಸಂಸ್ಥೆ ಆಹ್ವಾನಿಸಿದೆ.
ಇದನ್ನೂ ಓದಿ: ಇ- ವಾಹನಗಳಿಗೆ ಪ್ರತ್ಯೇಕ ಗ್ರೀನ್ ಕಾರಿಡಾರ್ ನಿರ್ಮಿಸಲು ಮುಂದಾದ ಪ.ಬಂಗಾಳ ಸರ್ಕಾರ