ETV Bharat / bharat

ಅಬ್ಬಬ್ಬಾ.... ಈ ಮೀನುಗಳಿಗೆ ಬರೋಬ್ಬರಿ 1 ಕೋಟಿ.. ಏನಿರಬೇಕು ಈ ಫಿಶ್​​​ಗಳ ವಿಶೇಷತೆ ಅಂತೀರಾ? - KOLKATA

ಮಾ ಬಸ್ತಿ ಎಂಬ ಮೀನುಗಾರಿಕಾ ಟ್ರಾಲರ್‌ನೊಂದಿಗೆ ಮೀನುಗಾರರು ದೋಣಿಯಲ್ಲಿ ಸಾಗುತ್ತಿದ್ದಾಗ ಈ ಮೀನುಗಳು ಅವರ ಬಲೆಗೆ ಬಿದ್ದಿವೆ. ಇವು ಬರೋಬ್ಬರಿ 98,78,400 ರೂ.ಗೆ ಬಿಕರಿಯಾಗಿವೆ.

Telia Bhola catch at Digha fetches price of  around Rs 1 crore
ಮೀನುಗಾರರ ಬಲೆಗೆ ಬಿದ್ದ 1 ಕೋಟಿ ಮೌಲ್ಯದ ತೇಲಿಯಾ ಭೋಲಾ ಮೀನು
author img

By

Published : Oct 26, 2021, 7:52 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ದಿಘಾ ನದಿಯಲ್ಲಿ ಮೀನುಗಾರ ಬಲೆಗೆ 1 ಕೋಟಿ ಬೆಲೆಯ ತೇಲಿಯಾ ಭೋಲಾ ಮೀನುಗಳು ಬಿದ್ದಿವೆ. ಮೀನುಗಾರರು 33 ತೇಲಿಯಾ ಭೋಲಾ ಮೀನುಗಳನ್ನು ಹಿಡಿದಿದ್ದು, ಪ್ರತಿ ಮೀನು 33 ರಿಂದ 35 ಕಿಲೋಗ್ರಾಂಗಳಷ್ಟು ತೂಕ ಇವೆ.

ಮಾ ಬಸ್ತಿ ಎಂಬ ಮೀನುಗಾರಿಕಾ ಟ್ರಾಲರ್‌ನೊಂದಿಗೆ ಮೀನುಗಾರರು ದೋಣಿಯಲ್ಲಿ ಸಾಗುತ್ತಿದ್ದಾಗ ಈ ಮೀನುಗಳ ಅವರ ಬಲೆಗೆ ಬಿದ್ದಿವೆ. ನಂತರ ಇಂದು ಬೆಳಗ್ಗೆ ಶ್ಯಾಮಸುಂದರ್ ದಾಸ್ ಅವರ ಹರಾಜು ಕೇಂದ್ರಕ್ಕೆ ಅವನ್ನು ಅನ್ನು ತರಲಾಯಿತು. ಮಧ್ಯಾಹ್ನದವರೆಗೂ ಹರಾಜು ಪ್ರಕ್ರಿಯೆ ಮುಂದುವರಿದು ಕೊನೆಗೆ 98,78,400 ರೂ.ಗೆ ಬಿಕರಿಯಾದವು.

ಸಾಮಾನ್ಯವಾಗಿ ಈ ನಿರ್ದಿಷ್ಟ ತಳಿಯ ಮೀನುಗಳನ್ನು ಒಂದು ಕೆ ಜಿಗೆ ಸುಮಾರು 13,000 ರೂ. ಗೆ ಮಾರಲಾಗುತ್ತದೆ. ತೇಲಿಯಾ ಭೋಲಾ ಮೀನುಗಳು ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಗುಂಪಾಗಿ ಸಂಚರಿಸುತ್ತವೆ ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ.

ಈ ಮೀನುಗಳ ದೇಹದ ಭಾಗಗಳನ್ನು ಜೀವ ಉಳಿಸುವ ಕ್ಯಾಪ್ಸುಲ್ ಕವರ್‌ಗಳ ತಯಾರಿಕೆಯಲ್ಲಿ ಬಳಸುವುದರಿಂದ ಇಷ್ಟು ದುಬಾರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.