ETV Bharat / bharat

ದೂರಸಂಪರ್ಕ ಮಸೂದೆ-2023: ಸಿಮ್​ಕಾರ್ಡ್ ಖರೀದಿಗೆ ಬಯೋಮೆಟ್ರಿಕ್ ಕಡ್ಡಾಯ

ದೂರಸಂಪರ್ಕ ಮಸೂದೆ - 2023ಯ ಪ್ರಕಾರ ಸಿಮ್ ಕಾರ್ಡ್ ನೀಡುವ ಮುನ್ನ ಗ್ರಾಹಕರ ಬಯೋಮೆಟ್ರಿಕ್ ವೆರಿಫಿಕೇಶನ್ ಕಡ್ಡಾಯವಾಗಲಿದೆ.

author img

By ETV Bharat Karnataka Team

Published : Dec 18, 2023, 6:39 PM IST

Telecom Bill mandates biometric identification for getting new SIM cards

ನವದೆಹಲಿ : ದೂರಸಂಪರ್ಕ ಮಸೂದೆ-2023 ನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಆನ್ಲೈನ್ ಮೆಸೇಜಿಂಗ್ ಮತ್ತು ಸ್ಟ್ರೀಮಿಂಗ್ ಸೇವೆಗಳಂತಹ ಓವರ್-ದಿ-ಟಾಪ್ ಸೇವೆಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಡಿಸೆಂಬರ್ 18 ರಂದು ಲೋಕಸಭೆಯಲ್ಲಿ ಮಂಡಿಸಲಾದ ದೂರಸಂಪರ್ಕ ಮಸೂದೆ 2023 ರ ಹೊಸ ಆವೃತ್ತಿಯಲ್ಲಿ ಸಿಮ್ ಕಾರ್ಡ್ ನೀಡುವಾಗ ಟೆಲಿಕಾಂ ಕಂಪನಿಗಳು ಗ್ರಾಹಕರ ಬಯೋಮೆಟ್ರಿಕ್ ಪರಿಶೀಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

"ಟೆಲಿಕಾಂ ಸೇವೆಗಳನ್ನು ನೀಡುವ ಯಾವುದೇ ಅಧಿಕೃತ ಕಂಪನಿಯು ಯಾವುದೇ ವ್ಯಕ್ತಿಗೆ ಟೆಲಿಕಾಂ ಸೇವೆಗಳನ್ನು ನೀಡುವ ಮುನ್ನ ಆತನ ಬಯೋಮೆಟ್ರಿಕ್ ಗುರುತನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯ" ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಡಿಸೆಂಬರ್ 18 ರಂದು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯ ಆವೃತ್ತಿಯಲ್ಲಿ ಇ - ಕಾಮರ್ಸ್, ಆನ್ಲೈನ್ ಮೆಸೇಜಿಂಗ್, ಪೇಮೆಂಟ್ಸ್​ ಮುಂತಾದ ಓವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ದೂರಸಂಪರ್ಕ ಸೇವೆಗಳ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಕಳೆದ ವರ್ಷ ಮಸೂದೆಯ ಹಿಂದಿನ ಕರಡು ಆವೃತ್ತಿಯಲ್ಲಿ ಒಟಿಟಿ ಸೇವೆಗಳನ್ನು ಅದರ ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ, ಇಂಟರ್ನೆಟ್ ಕಂಪನಿಗಳಿಂದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರ ಹೊಸ ಮಸೂದೆಯಲ್ಲಿ ಒಟಿಟಿಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಟ್ಟಿದೆ.

ಈ ಮಸೂದೆಯು ಟೆಲಿಕಾಂ ಪರವಾನಗಿ ಮತ್ತು ಸ್ಪೆಕ್ಟ್ರಮ್ ಹಂಚಿಕೆ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ. ಮುಖ್ಯವಾಗಿ ಬೆಳೆಯುತ್ತಿರುವ ಟೆಲಿಕಾಂ ವಲಯದ ಕಾರ್ಯಾಚರಣೆಗಳನ್ನು ಸರಳಗೊಳಿಸಲು ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಸರಕು, ಸೇವೆಗಳು ಮತ್ತು ಹಣಕಾಸು ಹೂಡಿಕೆಗಳ ವಿಷಯದಲ್ಲಿ ಜಾಹೀರಾತು ಮತ್ತು ಪ್ರಚಾರ ಸಂದೇಶಗಳನ್ನು ಕಳುಹಿಸುವ ಮುನ್ನ ಗ್ರಾಹಕರ ಪೂರ್ವಾನುಮತಿ ತೆಗೆದುಕೊಳ್ಳುವುದನ್ನು ಕೂಡ ಕಡ್ಡಾಯಗೊಳಿಸಲಾಗಿದೆ.

ದೂರಸಂಪರ್ಕ ಸೇವೆಗಳನ್ನು ಒದಗಿಸುವ ಅಧಿಕೃತ ಕಂಪನಿಯು ದೂರಸಂಪರ್ಕ ಸೇವೆಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳನ್ನು ನೋಂದಾಯಿಸಲು ಮತ್ತು ಅಂತಹ ಕುಂದುಕೊರತೆಗಳನ್ನು ಪರಿಹರಿಸಲು ಬಳಕೆದಾರರಿಗೆ ಅನುವು ಮಾಡಿಕೊಡಲು ಆನ್ ಲೈನ್ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಬಯೋಮೆಟ್ರಿಕ್ ದೃಢೀಕರಣ ಎಂಬುದು ಸೈಬರ್ ಸೆಕ್ಯುರಿಟಿ ಪ್ರಕ್ರಿಯೆಯಾಗಿದೆ. ಇದು ಬಳಕೆದಾರರ ವಿಶಿಷ್ಟ ಜೈವಿಕ ಗುಣಲಕ್ಷಣಗಳಾದ ಬೆರಳಚ್ಚುಗಳು, ಧ್ವನಿ, ರೆಟಿನಾ ಮತ್ತು ಮುಖದ ವೈಶಿಷ್ಟ್ಯಗಳನ್ನು ಬಳಸಿಕೊಂಡು ದೃಢೀಕರಣ ಮಾಡುತ್ತದೆ. ಬಳಕೆದಾರರು ತಮ್ಮ ಖಾತೆಗೆ ಲಾಗಿನ್ ಮಾಡಿದಾಗ ಅವರ ಗುರುತನ್ನು ಪರಿಶೀಲಿಸಲು ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಗಳು ಈ ಮಾಹಿತಿಯನ್ನು ಸಂಗ್ರಹಿಸುತ್ತವೆ.

ಇದನ್ನೂ ಓದಿ : 2 ವಾರಗಳಲ್ಲಿ 20 ಸಾವಿರ ಕೋಟಿ ರೂ. ಹೂಡಿಕೆ ಮಾಡಿದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.