ETV Bharat / bharat

ಹೈದರಾಬಾದ್‌ನಲ್ಲಿ ಸಿಎಂ ಕೆಸಿಆರ್​ ಕನಸಿನ ಭವ್ಯಸೌಧ ಸೆಕ್ರೆಟರಿಯೇಟ್‌ ಲೋಕಾರ್ಪಣೆ

author img

By

Published : Apr 30, 2023, 4:22 PM IST

ನೂತನವಾಗಿ ನಿರ್ಮಾಣಗೊಂಡಿರುವ ತೆಲಂಗಾಣದ ಸೆಕ್ರೆಟರಿಯೇಟ್ ಕಟ್ಟಡವನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಲೋಕಾರ್ಪಣೆಗೊಳಿಸಿದರು.

telanganas-grand-secretariat-a-brainchild-of-kcr-thrown-open
ಸಿಎಂ ಕೆಸಿಆರ್​ ಕನಸಿನ ಗ್ರ್ಯಾಂಡ್ ಸೆಕ್ರೆಟರಿಯೇಟ್ ಕಟ್ಟಡ ಲೋಕಾರ್ಪಣೆ

ಹೈದರಾಬಾದ್​ (ತೆಲಂಗಾಣ): ನೂತನವಾಗಿ ನಿರ್ಮಾಣಗೊಂಡಿರುವ ತೆಲಂಗಾಣದ ಸೆಕ್ರೇಟರಿಯೇಟ್​​ (ಸಚಿವಾಲಯ) ಕಟ್ಟಡ ಇಂದು (ಭಾನುವಾರ) ಲೋಕಾರ್ಪಣೆಗೊಂಡಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೊಸ ಕಟ್ಟಡದ ಆರನೇ ಮಹಡಿಯಲ್ಲಿರುವ ತಮ್ಮ ಸ್ಥಾನದಲ್ಲಿ ಕೆಲವು ಕಡತಗಳಿಗೆ ಸಹಿ ಮಾಡುವ ಮೂಲಕ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಕಟ್ಟಡವನ್ನು ಅತ್ಯಾಧುನಿಕ, ಸುಸಜ್ಜಿತವಾಗಿ ನಿರ್ಮಿಸಲಾಗಿದೆ.

ಭವ್ಯ ಸೌಧದ ಉದ್ಘಾಟನೆಯನ್ನು ಮಂತ್ರ ಪಠಣ ಮತ್ತು ಧಾರ್ಮಿಕ ವಿಧಿವಿಧಾನಗಳಿಂದ ನೆರವೇರಿಸಲಾಗಿದೆ. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡರು ಮತ್ತು ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಸಚಿವರು, ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ, ಕಾರ್ಯದರ್ಶಿಗಳು ಮತ್ತು ಇತರ ಉನ್ನತ ಅಧಿಕಾರಿಗಳು ಹೊಚ್ಚ ಹೊಸ ಕಟ್ಟಡದಲ್ಲಿನ ತಮ್ಮ ತಮ್ಮ ಸ್ಥಾನಗಳಲ್ಲಿ ಆಸೀನರಾದರು.

  • తెలంగాణ రాష్ట్ర ప్రతిష్ట మహోన్నతంగా వెలుగులీనేలా, ప్రజల ఆత్మగౌరవం మరింత ఇనుమడించేలా, ప్రజా ఆకాంక్షలకు అనుగుణంగా, వినూత్న రీతిలో అత్యద్భుతంగా తెలంగాణ సచివాలయాన్ని నిర్మించుకున్నామని ముఖ్యమంత్రి శ్రీ కె. చంద్రశేఖర్ రావు అన్నారు. #TelanganaSecretariat #TriumphantTelangana pic.twitter.com/0FVivX0VQE

    — Telangana CMO (@TelanganaCMO) April 29, 2023 " class="align-text-top noRightClick twitterSection" data=" ">

ಸೆಕ್ರೆಟರಿಯೇಟ್ ಸಂಕೀರ್ಣವು ನಗರದ ಹೃದಯಭಾಗದಲ್ಲಿರುವ ಹುಸೇನ್ ಸಾಗರ್ ಕೆರೆಯ ದಡದ ಸಮೀಪ ತಲೆ ಎತ್ತಿ ನಿಂತಿದೆ. ತೆಲಂಗಾಣ ಸಚಿವಾಲಯ ಮತ್ತು ಹಿಂದಿನ ಅವಿಭಜಿತ ಆಂಧ್ರ ಪ್ರದೇಶದ ಹಳೆಯ ಕಟ್ಟಡಗಳು ಇದ್ದ ಭೂಮಿಯಲ್ಲಿಯೇ ಕಟ್ಟಡವನ್ನು ನಿರ್ಮಿಸಲಾಗಿದೆ.

ಧಾರ್ಮಿಕ ವಿಧಿವಿಧಾನಗಳಂತೆ ಕಟ್ಟಡ ಉದ್ಘಾಟನೆ: ಧಾರ್ಮಿಕ ವಿಧಿವಿಧಾನಗಳಿಂದ ಕಟ್ಟಡ ಉದ್ಘಾಟನೆ ನೆರವೇರಿತು. ವೇದ ಪಂಡಿತರಿಂದ ಸುದರ್ಶನ ಹೋಮ, ರಸ್ತೆ ಮತ್ತು ಕಟ್ಟಡ ಸಚಿವ ವೇಮುಲ ಪ್ರಶಾಂತ್ ರೆಡ್ಡಿ ದಂಪತಿ ದ್ವಾರಲಕ್ಷ್ಮಿ ಪೂಜೆ ನೆರವೇರಿಸಿದರು. ಸುದರ್ಶನ ಹೋಮದ ನಂತರ ಚಂಡಿಕಾ ಹೋಮ ಮತ್ತು ವಾಸ್ತು ಹೋಮ ನಡೆಯಿತು.

ಕೆಸಿಆರ್ ಅವರು ಮಧ್ಯಾಹ್ನ 1.15ರ ಸುಮಾರಿಗೆ ಸಚಿವಾಲಯಕ್ಕೆ ಆಗಮಿಸಿದರು. ಬಳಿಕ ಕೆಲವು ಸಚಿವರು ಮತ್ತು ಉನ್ನತ ಅಧಿಕಾರಿಗಳ ಜೊತೆ ಪೂಜೆಯಲ್ಲಿ ಪಾಲ್ಗೊಂಡರು. ಇದಾದ ನಂತರ ಪ್ರವೇಶ ದ್ವಾರದಲ್ಲಿನ ಫಲಕವನ್ನು ಅನಾವರಣಗೊಳಿಸಿದರು. ಇದಕ್ಕೂ ಮೊದಲು ಪೊಲೀಸ್​ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ನೂತನ ಸೆಕ್ರೆಟರಿಯೇಟ್​ನ ವೈಶಿಷ್ಠ್ಯತೆ: ಆಕರ್ಷಕ ಕಟ್ಟಡವನ್ನು ತೆಲಂಗಾಣದ ಪ್ರಗತಿಯ ಸಂಕೇತ ಎಂದು ಕರೆಯಲಾಗಿದೆ. ಸುಮಾರು 600 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಒಟ್ಟು ಆರು ಅಂತಸ್ತುಗಳನ್ನು ಹೊಂದಿದೆ. ಕಟ್ಟಡವು ಎರಡು ಬೃಹತ್ ಗುಮ್ಮಟಗಳನ್ನು ಹೊಂದಿದೆ. ಬೃಹತ್ ಗುಮ್ಮಟಗಳ ಮೇಲೆ ರಾಷ್ಟ್ರೀಯ ಲಾಂಛನವನ್ನು ಇರಿಸಲಾಗಿದೆ. ಕಟ್ಟಡವು ಒಟ್ಟು 265 ಅಡಿ ಎತ್ತರ ಹೊಂದಿದ್ದು, ದೇಶದ ಅತಿ ಎತ್ತರದ ರಾಜ್ಯ ಸಚಿವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಟ್ಟಡಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್​ ಹೆಸರನ್ನಿಡಲಾಗಿದೆ.

ಸೆಕ್ರೆಟರಿಯೇಟ್​ ಕಟ್ಟಡವನ್ನು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಮತ್ತು ಸಿಂಕ್ರೆಟಿಕ್ ಮತ್ತು ಲಿಬರಲ್ ಡೆಕ್ಕನಿ ಶೈಲಿಯನ್ನು ಅಳವಡಿಸಲಾಗಿದೆ. ಚೆನ್ನೈ ಮೂಲದ ಆರ್ಕಿಟೆಕ್ಟ್‌ಗಳಾದ ಪೊನ್ನಿ ಕನ್ಸೆಸ್ಸಾವೊ ಮತ್ತು ಆಸ್ಕರ್ ಕನ್ಸೆಸ್ಸಾವೊ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ. ಶಪೂಂಜಿ ಪಲ್ಲೋಂಜಿ ಆ್ಯಂಡ್​​ ಕಂಪನಿ ಪ್ರೈವೇಟ್ ಲಿಮಿಟೆಡ್‌ ನಿರ್ಮಾಣ ಮಾಡಿದೆ.

26 ತಿಂಗಳ ದಾಖಲೆ ಸಮಯದಲ್ಲಿ ನಿರ್ಮಾಣ : 2021ರ ಜನವರಿಯ ಕೋವಿಡ್​ ಸಂದರ್ಭದಲ್ಲಿ ಈ ಕಟ್ಟಡ ನಿರ್ಮಾಣ ಪ್ರಾರಂಭವಾಗಿತ್ತು. ಈ ಮೂಲಕ ಕೇವಲ 26 ತಿಂಗಳ ದಾಖಲೆಯ ಸಮಯದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಸಾಮಾನ್ಯವಾಗಿ ಇಂತಹ ಕಟ್ಟಡಗಳ ನಿರ್ಮಾಣ ಐದು ವರ್ಷಗಳ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಕಟ್ಟಡವನ್ನು 28 ಎಕರೆಯಲ್ಲಿ ನಿರ್ಮಾಣ ಮಾಡಲಾಗಿದ್ದು, 10,51,676 ಚದರ ಅಡಿ ವಿಸ್ತೀರ್ಣ ಮತ್ತು 265 ಅಡಿ ಎತ್ತರ ಹೊಂದಿದೆ. ಇದು ಎರಡು ಬೃಹತ್ ಗುಮ್ಮಟಗಳನ್ನು ಒಳಗೊಂಡಿದ್ದು, 34 ಸಣ್ಣ ಗುಮ್ಮಟಗಳನ್ನು ಹೊಂದಿದೆ.

ಆರು ಅಂತಸ್ತಿನ ಸೆಕ್ರೆಟರಿಯೇಟ್ ಕಟ್ಟಡದಲ್ಲಿ, 635 ಕೊಠಡಿಗಳು, 30 ಕಾನ್ಫರೆನ್ಸ್ ಹಾಲ್‌ಗಳು ಮತ್ತು 24 ಲಿಫ್ಟ್‌ ಇದ್ದು, 2,000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆರನೇ ಮಹಡಿಯ ಗುಮ್ಮಟದ ಕೆಳಗೆ 4,500 ಚದರ ಅಡಿಗಳ ಎರಡು ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇದು ರಾಜ್ಯ ಪ್ರವಾಸ ಮಾಡುವ ರಾಷ್ಟ್ರಪತಿ, ಪ್ರಧಾನಿ ಮತ್ತು ವಿದೇಶಿ ಅತಿಥಿಗಳಿಗಾಗಿ ನಿರ್ಮಿಸಲಾಗಿದೆ. ಪರ್ಷಿಯನ್ ಮಾದರಿಯಲ್ಲಿ ರಾಯಲ್ ಡೈನಿಂಗ್ ಹಾಲ್ ಗಳನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.

ಹಳೆ ಸಂಸತ್ ಕಟ್ಟಡಕ್ಕೆ ಬಳಸಲಾಗಿದ್ದ ಧೋಲ್‌ಪುರ ಕೆಂಪು ಕಲ್ಲನ್ನು ಹೊಸ ಸೆಕ್ರೆಟರಿಯೇಟ್‌ಗೂ ಬಳಸಲಾಗಿದೆ. ರಾಜಸ್ಥಾನದ ಧೋಲ್ಪುರ್​ನಿಂದ 1,000 ಟ್ರಕ್‌ಗಳಲ್ಲಿ ಕೆಂಪು ಕಲ್ಲನ್ನು ಹೈದರಾಬಾದ್‌ಗೆ ತರಲಾಗಿದೆ. ನೆಲಮಾಳಿಗೆಗೆ ಕೆಂಪು ಕಲ್ಲನ್ನು ಬಳಸಿದ್ದು, ಉಳಿದಂತೆ ಕಂದು ಕಲ್ಲನ್ನು ಬಳಸಲಾಗಿದೆ. ಕಟ್ಟಡದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಗಳಿಗೆ ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲಾಗಿದೆ.

ಇದು ಮುಖ್ಯಮಂತ್ರಿ, ಸಚಿವರು, ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಎಲ್ಲಾ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರ ಕಚೇರಿಗಳನ್ನು ಹೊಂದಿರುವ ಸಮಗ್ರ ಸಂಕೀರ್ಣವಾಗಿದ್ದು, ತೆಲಂಗಾಣದ ಹೆಮ್ಮೆ. ಜೊತೆಗೆ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ಮನ್​ ಕಿ ಬಾತ್​ ದೇಶದ ಕೋಟ್ಯಂತರ ಜನರ ಧ್ವನಿ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.