ಚೆನ್ನೈ: ತೆಲಂಗಾಣ ಮೂಲದ ಕರ್ಣಂ ಸಾಯಿ ದಿಲೀಪ್ ಎಂಬುವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೀಸಾಕ್ಕಾಗಿ ನಕಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕ ರಾಯಭಾರಿ ಕಚೇರಿಯ ಭದ್ರತಾ ಅಧಿಕಾರಿಗಳು ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲಿಈ ಬಗ್ಗೆ ದೂರು ದಾಖಲಿಸಿದ್ದಾರೆ.
ಯುಎಸ್ ರಾಯಭಾರ ಕಚೇರಿಗೆ ಕರ್ಣಂ ಅವರು ಕಳೆದ ಶುಕ್ರವಾರ (ಮೇ 20) ಸಂದರ್ಶನಕ್ಕೆ ಬಂದಿದ್ದರು. ಆ ವೇಳೆ ಅವರು ಸಲ್ಲಿಸಿದ ದಾಖಲೆಗಳು ನಕಲಿ ಎಂದು ತಿಳಿದು ಬಂದಿದೆ. ಆದ್ದರಿಂದ ಕರ್ಣಂ ಮತ್ತು ಅವರು ಸಲ್ಲಿಸಿದ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.
ಈ ದೂರಿನನ್ವಯ ಕೇಂದ್ರ ಅಪರಾಧ ವಿಭಾಗದ ಫೋರ್ಜರಿ ತನಿಖಾ ವಿಭಾಗವು ಪ್ರಕರಣ ದಾಖಲಿಸಿದೆ. ತನಿಖೆಯಲ್ಲಿ ಕರ್ಣಂ ಸಾಯಿ ದಿಲೀಪ್ ಸಲ್ಲಿಸಿರುವ ಎಲ್ಲಾ ಶೈಕ್ಷಣಿಕ ಪ್ರಮಾಣ ಪತ್ರಗಳು ನಕಲಿ ಎಂಬುದು ದೃಢಪಟ್ಟಿದೆ. ಪರಿಣಾಮ ಪೊಲೀಸರು ಕರ್ಣಂನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್ ರೇಟ್ ಹೀಗಿದೆ..