ETV Bharat / bharat

ಯುವತಿ ಬದುಕಿರುವಾಗಲೇ ಮೃತಪಟ್ಟಿದ್ದಾಳೆಂದು ಘೋಷಿಸಿದ ವೈದ್ಯರು ! - ಜಹೀರಾಬಾದ್ ಮಂಡಲದ ಚಿನ್ನಾ ಹೈದರಾಬಾದ್ ಮೂಲದ ಅರ್ಚನಾ

ಮಾಹಿತಿ ಪ್ರಕಾರ, ಜಹೀರಾಬಾದ್ ಮಂಡಲದ ಚಿನ್ನಾ ಹೈದರಾಬಾದ್ ಮೂಲದ ಅರ್ಚನಾ, ಮೇ. 7 ರಂದು ಉಪವಾಸ ಮಾಡುತ್ತಿದ್ದರು. ಆ ದಿನ ಆಕೆ ತನ್ನ ಅತ್ತೆಯ ಮನೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದರು. ಬಳಿಕ ಆಕೆಯನ್ನು ಜಹೀರಾಬಾದ್ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಜನರಲ್ ಸರ್ಜನ್ ಮತ್ತು ಡ್ಯೂಟಿ ಡಾಕ್ಟರ್ ಸಂತೋಷ್ ಆಕೆಯನ್ನು ಪರೀಕ್ಷಿಸಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ.

Woman declared dead in Zahirabad, treated by doctors at another hospital
ಯುವತಿ ಬದುಕಿರುವಾಗಲೇ ಮೃತಪಟ್ಟಿದ್ದಾಳೆಂದು ಘೋಷಿಸಿದ ವೈದ್ಯರು
author img

By

Published : Jun 3, 2022, 7:08 PM IST

Updated : Jun 3, 2022, 8:07 PM IST

ಜಹೀರಾಬಾದ್: ಸರ್ಕಾರಿ ಆಸ್ಪತ್ರೆ ವೈದ್ಯರು ಯುವತಿಯೊಬ್ಬರು ಬದುಕಿರುವಾಗಲೇ ಆಕೆ ‘ಸತ್ತಿದ್ದಾಳೆ’ ಎಂದು ಘೋಷಿಸಿರುವ ಆಘಾತಕಾರಿ ಘಟನೆ ಜಹೀರಾಬಾದ್‌ನಲ್ಲಿ ನಡೆದಿದೆ. ಈ ಘಟನೆ ಗುರುವಾರ ತಡರಾತ್ರಿ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಜಹೀರಾಬಾದ್ ಮಂಡಲದ ಚಿನ್ನಾ ಹೈದರಾಬಾದ್ ಮೂಲದ ನರಸಿಂಹುಲು ಮತ್ತು ಶಾರದ ಅವರ ಪುತ್ರಿ ಅರ್ಚನಾ (20)ಗೆ ಇತ್ತೀಚೆಗೆ ವಿವಾಹವಾಗಿತ್ತು.

ಮೇ.7 ರಂದು ಉಪವಾಸ ಮಾಡುತ್ತಿದ್ದ ಅವರು ತನ್ನ ಅತ್ತೆ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಪತಿ ಪೋಷಕರಿಗೆ ಮಾಹಿತಿ ನೀಡಿ ಜಹೀರಾಬಾದ್ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜನರಲ್ ಸರ್ಜನ್ ಮತ್ತು ಡ್ಯೂಟಿ ಡಾಕ್ಟರ್ ಸಂತೋಷ್ ಮಹಿಳೆಯನ್ನು ಪರೀಕ್ಷಿಸಿ, ಬಳಿಕ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೇ ಅವರು ಸತ್ತಿದ್ದಾರೆ ಎಂದು ಪ್ರಮಾಣಪತ್ರವನ್ನು ಸಹ ನೀಡಿ, ರಿಜಿಸ್ಟಾರ್​ನಲ್ಲಿ ಸಹಿ ಸಹ ಮಾಡಿಸಿಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಜಹೀರಾಬಾದ್ ಏರಿಯಾ ಆಸ್ಪತ್ರೆಯ ಅಧೀಕ್ಷಕ ಡಾ. ಶೇಷು ಪದ್ಮನಾಭ ರಾವ್

ನಂತರ, ವೈದ್ಯರ ಮಾತನ್ನು ನಂಬದ ಮಹಿಳೆಯ ಪೋಷಕರು ಅವರನ್ನು ಸಂಗಾರೆಡ್ಡಿ ಜಿಲ್ಲೆಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಹಿಳೆ ಜೀವಂತವಾಗಿದ್ದಾರೆ ಎಂದು ಹೇಳಿದರು. ಅಲ್ಲದೇ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಬಳಿಕ ಮೇ. 22 ರಂದು ಡಿಸ್ಚಾರ್ಜ್ ಮಾಡಲಾಯಿತು.

ಮೇ. 28 ರಂದು ಅರ್ಚನಾ ಅವರನ್ನು ಮತ್ತೆ ತಪಾಸಣೆಗೊಳಪಡಿಸಿದಾಗ, ವೈದ್ಯರು ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಏರಿಯಾ ಆಸ್ಪತ್ರೆಯ ವೈದ್ಯರ ಮಾತನ್ನು ನಂಬಿದ್ದರೆ ಮಗಳನ್ನು ಕಳೆದುಕೊಳ್ಳುತ್ತಿದ್ದೆವು ಎಂದು ಅರ್ಚನಾ ಪೋಷಕರು ಹೇಳಿದ್ದಾರೆ.

ಇದನ್ನೂ ಓದಿ: ಹೇಮಂತ್ ಸೋರನ್ ವಿರುದ್ಧದ ಪಿಐಎಲ್​ ಅರ್ಜಿ ಸ್ವೀಕರಿಸಿದ ಜಾರ್ಖಂಡ್ ಹೈಕೋರ್ಟ್

ಈ ವಿಷಯವಾಗಿ ಜಹೀರಾಬಾದ್ ಏರಿಯಾ ಆಸ್ಪತ್ರೆಯ ಅಧೀಕ್ಷಕ ಡಾ. ಶೇಷು ಪದ್ಮನಾಭ ರಾವ್ ಅವರು ಮಾತನಾಡಿ, ಇಸಿಜಿಯಲ್ಲಿ "ಒಂದೇ ನಾಡಿ ಮಿಡಿತ" ತೋರಿಸಿದ್ದರಿಂದ, ಅದರ ಆಧಾರದ ಮೇಲೆ ಯುವತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

Last Updated : Jun 3, 2022, 8:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.