ETV Bharat / bharat

ತೆಲಂಗಾಣದಲ್ಲಿ ಸಿಬಿಐ ತನಿಖೆಗಿದ್ದ ಸಾಮಾನ್ಯ ಅನುಮತಿ ಹಿಂಪಡೆದ ಸರ್ಕಾರ - ಶಾಸಕರ ಖರೀದಿ ಯತ್ನದ ಆರೋಪ

ತೆಲಂಗಾಣದಲ್ಲಿ ಸಿಬಿಐ ತನಿಖೆಯ ಸಾಮಾನ್ಯ ಅನುಮತಿ ಹಿಂಪಡೆದು ರಾಜ್ಯ ಗೃಹ ಇಲಾಖೆ ಆಗಸ್ಟ್ 30ರಂದೇ ಸರ್ಕಾರಿ ಆದೇಶ ಜಾರಿ ಮಾಡಿದೆ. ಎರಡು ತಿಂಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದ್ದರೂ ಅದನ್ನು ಗೌಪ್ಯವಾಗಿಟ್ಟಿತ್ತು.

telangana-withdraws-general-consent-to-cbi
ತೆಲಂಗಾಣದಲ್ಲಿ ಸಿಬಿಐ ತನಿಖೆಗಿದ್ದ ಸಾಮಾನ್ಯ ಅನುಮತಿ ಹಿಂಪಡೆದ ಸರ್ಕಾರ
author img

By

Published : Oct 30, 2022, 3:32 PM IST

ಹೈದರಾಬಾದ್​ (ತೆಲಂಗಾಣ): ತೆಲಂಗಾಣದಲ್ಲಿ ಸಿಬಿಐ ತನಿಖೆ ಕುರಿತ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದೊಳಗೆ ಯಾವುದೇ ಪ್ರಕರಣವನ್ನು ಯಾವುದೇ ಸಮಯದಲ್ಲಿ ತನಿಖೆ ಮಾಡಲು ಅವಕಾಶವಿದ್ದ, ಈ ಹಿಂದಿನ ಸಾಮಾನ್ಯ ಅನುಮತಿಗಳನ್ನು ಸರ್ಕಾರ ಹಿಂಪಡೆದಿದೆ. ಈಗ ಪೂರ್ವಾನುಮತಿ ಇಲ್ಲದೆ ರಾಜ್ಯದಲ್ಲಿ ಸಿಬಿಐ ತನಿಖೆಗೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿದೆ.

ರಾಜ್ಯ ಗೃಹ ಇಲಾಖೆ ಆಗಸ್ಟ್ 30ರಂದೇ ಈ ಸರ್ಕಾರಿ ಆದೇಶ ಜಾರಿ ಮಾಡಿದೆ. ಎರಡು ತಿಂಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದ್ದರೂ ಅದನ್ನು ಗೌಪ್ಯವಾಗಿಟ್ಟಿತ್ತು. ಇದೀಗ ಶಾಸಕರಿಗೆ ಆಮಿಷವೊಡ್ಡಿರುವ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.

ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಅಗತ್ಯವಿದೆ ಎಂದು ಹೆಚ್ಚುವರಿ ಅಡ್ವೋಕೇಟ್​ ಜನರಲ್​ ರಾಮಚಂದ್ರರಾವ್ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ಹಾಗಾಗಿ, ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ತನಿಖೆಗೆ ಕೋರುವಂತಿಲ್ಲ ಎಂದು ವಾದಿಸಲಾಗಿದೆ.

ಬಿಜೆಪಿ ಮತ್ತು ಟಿಆರ್​ಎಸ್​ ನಡುವಿನ ರಾಜಕೀಯ ಕಿತ್ತಾಟದ ನಡುವೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ಶಾಸಕರ ಖರೀದಿ ಯತ್ನದ ಆರೋಪ ಪ್ರಕರಣ ಸಂಬಂಧ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ದಾಖಲಿಸುತ್ತೇವೆ ಎಂಬ ವದಂತಿ ಕೇಳಿಬಂದ ಹಿನ್ನೆಲೆಯಲ್ಲಿ ಇದು ರಾಜಕೀಯ ಮಹತ್ವವನ್ನೂ ಪಡೆದುಕೊಂಡಿದೆ.

ಇದನ್ನೂ ಓದಿ: ಟಿಆರ್​ಎಸ್​ ಶಾಸಕ ಖರೀದಿ ಯತ್ನ ಆರೋಪ ಪ್ರಕರಣ: ತನಿಖೆಗೆ ಹೈಕೋರ್ಟ್ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.