ಹೈದರಾಬಾದ್: ತೆಲಂಗಾಣದಲ್ಲಿ ಇಬ್ಬರು ಖಾಸಗಿ ವೈದ್ಯರ ಮಾನ್ಯತೆಯನ್ನು ರಾಜ್ಯ ವೈದ್ಯಕೀಯ ಮಂಡಳಿ ರದ್ದುಗೊಳಿಸಿದೆ. ತೆಲಂಗಾಣ ರಾಜ್ಯ ವೈದ್ಯಕೀಯ ಮಂಡಳಿ ಅಧ್ಯಕ್ಷ ವಿ ರಾಜಲಿಂಗಂ ಗುರುವಾರ ಆದೇಶ ಹೊರಡಿಸಿದ್ದು, ಕರಣ್ ಎಂ ಪಾಟೀಲ್ ಎಂಬ ವೈದ್ಯರಿಗೆ 6 ತಿಂಗಳಿಗೆ ಹಾಗೂ ಸಿಎಚ್ ಶ್ರೀಕಾಂತ್ ಎಂಬ ಮತ್ತೊಬ್ಬ ವೈದ್ಯರಿಗೆ 3 ತಿಂಗಳಿಗೆ ಮಾನ್ಯತೆ ರದ್ದುಪಡಿಸಿದ್ದಾರೆ. ಇಬ್ಬರು ಪ್ರಮಾಣೀಕರಿಸಿದ ವೈದ್ಯರು ತಮ್ಮ ಪ್ರಮಾಣ ಪತ್ರಗಳನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ಹಸ್ತಾಂತರಿಸುವಂತೆ ಆದೇಶಿಸಿದರು.
ಎಡಗಾಲು ಬದಲು ಬಲಗಾಲಿಗೆ ಆಪರೇಷನ್: ಹೈದರಾಬಾದ್‌ನ ಇಸಿಐಎಲ್ ಪ್ರದೇಶದ ಮೂಳೆ ತಜ್ಞ ಕರಣ್ ಎಂ ಪಾಟೀಲ್ ಬಲಗಾಲಿಗೆ ಆಪರೇಷನ್ ಮಾಡುವ ಬದಲು ರೋಗಿಯ ಎಡಗಾಲಿಗೆ ಆಪರೇಷನ್ ಮಾಡಿದ್ದಾರೆ. ಅಷ್ಟೇ ಅಲ್ಲ ಆಪರೇಷನ್ ಆಗಿ ಎರಡು ದಿನಗಳ ನಂತರ ಈ ತಪ್ಪು ಅರಿತ ವೈದ್ಯರು ಮತ್ತೆ ಎಡಗಾಲಿಗೆ ಆಪರೇಷನ್ ಮಾಡಿದ್ದಾರೆ. ಸಂತ್ರಸ್ತರು DMHOಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆ ನಡೆಸಿದ ವೈದ್ಯರ ಈ ತಪ್ಪನ್ನು ದೃಢಪಡಿಸಿದರು.
ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿ: ಮಂಚಿರ್ಯಾಲ ಜಿಲ್ಲೆಯ ವ್ಯಕ್ತಿಯೊಬ್ಬರು ಡೆಂಗೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸಕಾಲದಲ್ಲಿ ಉತ್ತಮ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯಾಧಿಕಾರಿ ಸಿಎಚ್ ಶ್ರೀಕಾಂತ್ ಶಿಫಾರಸು ಮಾಡಲಿಲ್ಲ. ಪರಿಣಾಮವಾಗಿ, ರೋಗಿಯು ಸಾವನ್ನಪ್ಪಿದ್ದಾನೆ.
ಸಂತ್ರಸ್ತರು ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ವಿಚಾರಣೆ ನಡೆಸಿದಾಗ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿದೆ. ಜಿಲ್ಲಾಧಿಕಾರಿ ವರದಿ ಹಿನ್ನೆಲೆ ರಾಜ್ಯ ವೈದ್ಯಕೀಯ ಮಂಡಳಿ ವಿಚಾರಣೆ ನಡೆಸಿ ಶ್ರೀಕಾಂತ್ ಮಾನ್ಯತೆ ರದ್ದುಪಡಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಬ್ಬರು ವೈದ್ಯರಿಗೆ 60 ದಿನಗಳೊಳಗೆ ಮಾನ್ಯತೆ ರದ್ದತಿ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಓದಿ: ಕಲಘಟಗಿಯ ಮುಕ್ಕಲ್ ಆಸ್ಪತ್ರೆಯಲ್ಲಿಯೇ ರೀಲ್ ಮಾಡಿದ ವೈದ್ಯ..!?: ವಿಡಿಯೋ ವೈರಲ್
ಆಂಧ್ರಪ್ರದೇಶದಲ್ಲೊಂದು ವೈದ್ಯರ ಗ್ರಾಮ: ಆ ಹಳ್ಳಿಯಲ್ಲಿ ಪ್ರತಿ ಮನೆಗೆ ಒಬ್ಬ ವೈದ್ಯರಿದ್ದಾರೆ. ಜನಸಂಖ್ಯೆಯಲ್ಲಿ ಗ್ರಾಮ ಚಿಕ್ಕದಾದರೂ ವೃತ್ತಿಯ ಮೇಲಿನ ಒಲವಿನಿಂದ ಹಳ್ಳಿಗರು ತಮ್ಮ ಮಕ್ಕಳನ್ನು ವೈದ್ಯ ವೃತ್ತಿ ಸೇರಿದಂತೆ ಸರ್ಕಾರದ ಸೇವೆ ಸಲ್ಲಿಸಲು ಅನೇಕ ನೌಕರಿಗಳಿಗೆ ಸೇರಿಸಿದ್ದಾರೆ. ಅಷ್ಟೇ ಅಲ್ಲ ತಂದೆ - ತಾಯಿಯ ಆಸೆಯಂತೆ ಮಕ್ಕಳು ನಡೆದುಕೊಂಡಿದ್ದು, ಕೆಲ ಕಾಲದಲ್ಲೇ ಇಡೀ ಗ್ರಾಮವೇ ವೈದ್ಯರ ಗ್ರಾಮವಾಗಿ ಮಾರ್ಪಟ್ಟಿದೆ. ವೈದ್ಯರಷ್ಟೇ ಅಲ್ಲ.. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇಲ್ಲಿನ ಜನ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಕಾಕುಳಂ ಜಿಲ್ಲೆ ಅಮುದಾಲವಲಸ ತಾಲೂಕಿನ ಕಣುಗುಳವಲಸ ಗ್ರಾಮವೂ ವೈದ್ಯರ ಗ್ರಾಮವೆಂದೇ ಪ್ರಸಿದ್ಧ. ಗ್ರಾಮದಲ್ಲಿ ಪ್ರಸ್ತುತ 2,800 ಜನಸಂಖ್ಯೆ ಇದ್ದರೆ, 900ಕ್ಕೂ ಹೆಚ್ಚು ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಾಗಿ ನೆಲೆಸಿದ್ದಾರೆ. ಪ್ರತಿಯೊಂದು ಕುಟುಂಬಕ್ಕೂ ಒಬ್ಬ ಡಾಕ್ಟರ್, ಇಂಜಿನಿಯರ್, ಪೊಲೀಸ್ ಅಥವಾ ರೈಲ್ವೆ ಉದ್ಯೋಗಿ ಇರುವುದು ಗಮನಾರ್ಹ..