ETV Bharat / bharat

Telangana Rain: ತೆಲಂಗಾಣದಲ್ಲಿ ವರುಣನ ಅಬ್ಬರ: ಇಂದು, ನಾಳೆ ಶಿಕ್ಷಣ ಸಂಸ್ಥೆಗಳಿಗೆ ರಜೆ - ಇಂದು ಮತ್ತು ನಾಳೆ ಶಿಕ್ಷಣ ಸಂಸ್ಥೆಗಳಿಗೆ ರಜೆ

Telangana Rain: ಭಾರಿ ಮಳೆ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಬುಧವಾರ ಮತ್ತು ಗುರುವಾರ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.

rain
ಮಳೆ
author img

By

Published : Jul 26, 2023, 11:11 AM IST

ಹೈದರಾಬಾದ್ (ತೆಲಂಗಾಣ): ಭಾರಿ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಸಿಎಂ ಕೆ.ಸಿ.ಚಂದ್ರಶೇಖರ ರಾವ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವೆ ಸಬಿತಾ ಇಂದ್ರಾರೆಡ್ಡಿ ರಜೆ ಘೋಷಿಸಿದ್ದಾರೆ. ಇದು ಎಲ್ಲ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ.

ರಾಜ್ಯಾದ್ಯಂತ ವರುಣ ಆರ್ಭಟ ಮುಂದುವರೆದಿದ್ದು ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿ ಕುರಿತು ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕೇಳಿತ್ತು. ಎಲ್ಲ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿದಾಗ ಹಲವೆಡೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿದ್ದು, ಶಾಲೆಗಳಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕೆಸಿಆರ್, ಸಚಿವೆ ಸಬಿತಾ ಅವರಿಗೆ ರಜೆ ನೀಡುವಂತೆ ಆದೇಶಿಸಿದ್ದಾರೆ.

ಹೈದರಾಬಾದ್​ನಲ್ಲಿ ಬುಧವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ನಗರಕ್ಕೆ ವಲಯವಾರು ಎಚ್ಚರಿಕೆ ನೀಡಲಾಗಿದೆ. ಚಾರ್ಮಿನಾರ್ ವಲಯ, ಖೈರತಾಬಾದ್, ಎಲ್‌ಬಿ ನಗರ ಮತ್ತು ಶೇರಿಂಗಂಪಲ್ಲಿ ವಲಯಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುಕಟ್ಪಲ್ಲಿ ವಲಯಕ್ಕೆ ಅರೆಂಡ್ ಅಲರ್ಟ್ ಘೋಷಿಸಲಾಗಿದೆ.

ಖಮ್ಮಂ, ನಲ್ಗೊಂಡ, ಸೂರ್ಯಪೇಟ್, ಯಾದಾದ್ರಿ ಭವನಗಿರಿ, ಜನಗಾಮ ಹಾಗೂ ಸಿದ್ದಿಪೇಟೆ ಜಿಲ್ಲೆಯ ಕೆಲವೆಡೆ ಸಹ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಸಿರಿಸಿಲ್ಲ, ಕರೀಂನಗರ, ಪೆದ್ದಪಲ್ಲಿ, ಮಹಬೂಬಾಬಾದ್, ವಾರಂಗಲ್, ಹನುಮಕೊಂಡ, ಮಹಬೂಬನಗರ, ನಾಗರಕರ್ನೂಲ್, ಮೇದಕ್, ಕಾಮರೆಡ್ಡಿ, ಸಂಗಾರೆಡ್ಡಿ, ಮೇಡ್ಚಲ್, ರಂಗಾರೆಡ್ಡಿ, ವಿಕಾರಾಬಾದ್ ಜಿಲ್ಲೆಗಳಲ್ಲಿ ಸಹ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಳ್ಳಲಿವೆ. ರಭಸವಾಗಿ ಬೀಸುತ್ತಿರುವ ಗಾಳಿಗೆ ಮರಗಳು ಬೀಳುವ ಅಪಾಯವಿದ್ದು, ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ವಿದ್ಯುತ್ ಕಂಬಗಳು ಧರೆಗುರುಳುವ ಸಾಧ್ಯತೆ ಇದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಸಹ ಉಂಟಾಗಬಹುದು.

ಇದನ್ನೂ ಓದಿ : ಧಾರವಾಡದಲ್ಲಿ ವರುಣಾರ್ಭಟ: ಹೊಲ - ಗದ್ದೆಗಳು ಜಲಾವೃತ, ಟ್ರ್ಯಾಕ್ಟರ್​​ ಮೂಲಕ ಸೇತುವೆ ದಾಟಿದ ಅಜ್ಜಿ

ಹೈದರಾಬಾದ್‌ನ ಬಹುತೇಕ ಭಾಗಗಳಲ್ಲಿ ಮಂಗಳವಾರ ಲಘು ಮಳೆಯಾಗಿದೆ. ಒಂದೆಡೆ ತುಂತುರು ಮಳೆಯಾದರೆ ಇನ್ನೊಂದೆಡೆ, ಜೋರು ಮಳೆಯಾಗಿದೆ. ಆಸಿಫ್​ನಗರದಲ್ಲಿ 43.5 ಮಿ.ಮೀ., ಟೋಲಿಚೌಕಿಯಲ್ಲಿ 19.8 ಮಿ.ಮೀ. ಮಳೆಯಾಗಿದೆ ಎಂದು ತೆಲಂಗಾಣ ರಾಜ್ಯ ಯೋಜನಾ ಅಭಿವೃದ್ಧಿ ಸೊಸೈಟಿ (ಟಿಎಸ್‌ಡಿಪಿಎಸ್) ತಿಳಿಸಿದೆ. ಇನ್ನುಳಿದಂತೆ 10 ಮಿ.ಮೀ.ಗಿಂತ ಕಡಿಮೆ ಮಳೆ ಬಿದ್ದಿರುವುದು ವರದಿಯಾಗಿದೆ.

ಮಳೆ ಹಿನ್ನೆಲೆ ಪೌರಾಡಳಿತ ನಿರ್ದೇಶನಾಲಯದ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಜುಲೈ 28ರವರೆಗೆ 24 ಗಂಟೆಯೂ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ರಾಜ್ಯದ ಎಲ್ಲಾ ಪುರಸಭೆ ಸೊಸೈಟಿಗಳಲ್ಲಿ ವಿಶೇಷ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ : Karnataka Rain update: ಕಲಬುರಗಿಗೆ ಭಾರಿ ಮಳೆ ಮುನ್ಸೂಚನೆ, ರೆಡ್‌ ಅಲರ್ಟ್: ಇಂದು ಎಲ್ಲೆಲ್ಲಿ ಶಾಲೆಗೆ ರಜೆ ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.