ಹೈದರಾಬಾದ್, ತೆಲಂಗಾಣ : ಹೈದರಾಬಾದ್ ಕಂಟೋನ್ಮೆಂಟ್ನಲ್ಲಿರುವ ಮಿಲಿಟರಿ ಅಧಿಕಾರಿಗಳು ತಮಗೆ ಬಯಸಿದಾಗ ರಸ್ತೆಗಳನ್ನು ಮುಚ್ಚುವುದು ನ್ಯಾಯಸಮ್ಮತವಲ್ಲ ಎಂದಿರುವ ತೆಲಂಗಾಣದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಮತ್ತು ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ರಾವ್, ಕಂಟೋನ್ಮೆಂಟ್ಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೆಟಿಆರ್, ತಾವು ಬಯಸಿದಾಗ ರಸ್ತೆಯನ್ನು ಮುಚ್ಚುವ ಕಂಟೋನ್ಮೆಂಟ್ ಅಧಿಕಾರಿಗಳ ಕ್ರಮದಿಂದ ಸಾಕಷ್ಟು ಮಂದಿ ತೊಂದರೆಗೆ ಒಳಗಾಗಿದ್ದಾರೆ. ಈ ರೀತಿಯಾಗಿ ಮುಂದುವರೆದರೆ, ನಾವು ಕಂಟೋನ್ಮೆಂಟ್ಗೆ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದಿದ್ದಾರೆ.
-
Live: Replying to a question on ‘Strategic Nala Development Program (SNDP) in Hyderabad’ city https://t.co/7Fw8Zxdo5E
— KTR (@KTRTRS) March 12, 2022 " class="align-text-top noRightClick twitterSection" data="
">Live: Replying to a question on ‘Strategic Nala Development Program (SNDP) in Hyderabad’ city https://t.co/7Fw8Zxdo5E
— KTR (@KTRTRS) March 12, 2022Live: Replying to a question on ‘Strategic Nala Development Program (SNDP) in Hyderabad’ city https://t.co/7Fw8Zxdo5E
— KTR (@KTRTRS) March 12, 2022
ಹೈದರಾಬಾದ್ನ ನಾಲಾ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಸಿಕಂದರಾಬಾದ್ ಕ್ಲಬ್‌ನ ಪಕ್ಕದ ರಸ್ತೆಯಾದ ಕಂಟೋನ್ಮೆಂಟ್‌ನ ಅಧಿಕಾರಿಗಳು ರಸ್ತೆಗಳನ್ನು ಮುಚ್ಚುವ ಮೂಲಕ ಪಕ್ಕದಲ್ಲಿರುವ ಸಫಿಲ್‌ಗುಡಾ ನಿವಾಸಿಗಳಿಗೆ ಅನಾನುಕೂಲವಾಗುತ್ತಿದೆ ಎಂದು ಕೆಟಿಆರ್ ಹೇಳಿದ್ದಾರೆ.
ಇದನ್ನೂ ಓದಿ: ಕೆಮಿಕಲ್ ಅಂಗಡಿಗಳಿಗೆ ಬೆಂಕಿ ಹಚ್ಚಿ ಮೆಡಿಕಲ್ ವಿದ್ಯಾರ್ಥಿಗಳಿಂದ ಕಲ್ಲು ತೂರಾಟ : 10 ಮಂದಿಗೆ ಗಾಯ
2021ರಲ್ಲೇ ಕೆಟಿಆರ್ ಕಂಟೋನ್ಮೆಂಟ್ ಅಧಿಕಾರಿಗಳು ರಸ್ತೆಯನ್ನು ಮುಚ್ಚುವುದನ್ನು ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಎಂದಿದ್ದರು. ಈ ವೇಳೆ ಪ್ರತಿಪಕ್ಷವಾದ ಬಿಜೆಪಿ ಕೆಟಿಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಜೊತೆಗೆ ಕೆಟಿಆರ್ ಮಿಲ್ಟ್ರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೈದರಾಬಾದ್‌ನಿಂದ ಭಾರತೀಯ ಸೇನೆಯ ನೆಲೆಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿತ್ತು.