ETV Bharat / bharat

ಬಾಕಿ ಇರುವ ಟ್ರಾಫಿಕ್​​ ಚಲನ್‌ಗಳ ಮೇಲಿನ ರಿಯಾಯಿತಿಗೆ ಭಾರಿ ಪ್ರತಿಕ್ರಿಯೆ.. ಮೊದಲ 3 ದಿನಗಳಲ್ಲಿ ರೂ.39 ಕೋಟಿ ಸಂಗ್ರಹ - ತೆಲಂಗಾಣ ಸಂಚಾರಿ ನಿಯಮ ಉಲ್ಲಂಘನೆ

ಪಾವತಿಸದ ಸಂಚಾರ ನಿಯಮ ಉಲ್ಲಂಘನೆಯ ಚಲನ್‌ಗಳನ್ನು ಹೊಂದಿರುವ ವಾಹನ ಮಾಲೀಕರು ಮತ್ತು ಆರ್​ಟಿಸಿ ಚಾಲಕರಿಗೆ ದೊಡ್ಡ ರಿಲೀಫ್ ಆಗಿ ತೆಲಂಗಾಣ ಪೊಲೀಸರು ಬಾಕಿ ಉಳಿದಿರುವ ಬಿಲ್‌ಗಳನ್ನು ತೆರವುಗೊಳಿಸಲು ಒಂದು ಅವಕಾಶವನ್ನು ನೀಡಿದ್ದಾರೆ.

Discount on Pending traffic Challans
Discount on Pending traffic Challans
author img

By

Published : Mar 4, 2022, 12:43 PM IST

ಹೈದರಾಬಾದ್​ (ತೆಲಂಗಾಣ): ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ವಿಧಿಸಿರುವ ದಂಡದ ರಿಯಾಯಿತಿಗೆ ತೆಲಂಗಾಣ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ 3 ದಿನಗಳಲ್ಲಿ 39 ಕೋಟಿ ರೂ.ಗಳ ದಂಡ ಸಂಗ್ರಹವಾಗಿದೆ.

ಪಾವತಿಸದ ಸಂಚಾರ ನಿಯಮ ಉಲ್ಲಂಘನೆಯ ಚಲನ್‌ಗಳನ್ನು ಹೊಂದಿರುವ ವಾಹನ ಮಾಲೀಕರು ಮತ್ತು ಆರ್​ಟಿಸಿ ಚಾಲಕರಿಗೆ ದೊಡ್ಡ ರಿಲೀಫ್ ಆಗಿ ತೆಲಂಗಾಣ ಪೊಲೀಸರು ಬಾಕಿ ಉಳಿದಿರುವ ಬಿಲ್‌ಗಳನ್ನು ತೆರವುಗೊಳಿಸಲು ಒಂದು ಅವಕಾಶ ನೀಡಿದ್ದಾರೆ. ಬಾಕಿ ಇರುವ ದಂಡ ಪಾವತಿಗೆ ಮಾರ್ಚ್ 1ರಿಂದ ಮಾರ್ಚ್​ 31ರವರೆಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ರಿಯಾಯಿತಿ ನೀಡಿದ್ದಾರೆ.

ಇದನ್ನೂ ಓದಿ: 'ಟ್ರಾಫಿಕ್ ಜಾಮ್‌ ಆಗಿದ್ದಕ್ಕೆ ಕ್ಷಮೆಯಿರಲಿ': ಕಾಂಗ್ರೆಸ್ ಕಾರ್ಯಕರ್ತರ ಮನವಿ

ಈ ಬಾಕಿ ದಂಡವನ್ನು ಆನ್​ಲೈನ್​ ಮೂಲಕ (ಇ-ಚಲನ್ ವೆಬ್​​ಸೈಟ್) ಪಾವತಿಸಬೇಕಾಗಿದ್ದು, ಚಲನ್​ ಮೇಲೆ ರಿಯಾಯಿತಿ ಸಿಗುತ್ತದೆ ಎಂದು ವಾಹನ ಸವಾರರು ಮುಗಿಬಿದ್ದು ತಮ್ಮ ದಂಡವನ್ನು ಪಾವತಿಸುತ್ತಿದ್ದಾರೆ. ಮಾರ್ಚ್​ 1 ರಂದು 8 ಕೋಟಿ ರೂ, ಮಾರ್ಚ್​ 2ರಂದು 15 ಕೋಟಿ ರೂ ಹಾಗೂ ಮಾರ್ಚ್​ 3ರಂದು 16 ಕೋಟಿ ರೂ. ಸೇರಿ ಮೂರು ದಿನಗಳಲ್ಲಿ ಒಟ್ಟು 39 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.