ETV Bharat / bharat

ಮಾರ್ಗದರ್ಶಿ ಚಿಟ್ ಫಂಡ್ : ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ತೆಲಂಗಾಣ ಹೈಕೋರ್ಟ್ ತಡೆ - ಈಟಿವಿ ಭಾರತ ಕನ್ನಡ

ಮಾರ್ಗದರ್ಶಿ ಚಿಟ್​ ಫಂಡ್​​ನ ಲೆಕ್ಕಪರಿಶೋಧನೆಗೆ ಖಾಸಗಿ ಚಿಟ್​ ಆಡಿಟರ್​​ ನೇಮಿಸಿರುವುದಕ್ಕೆ ಆಂಧ್ರ ಸರ್ಕಾರವನ್ನು ತೆಲಂಗಾಣ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಲೆಕ್ಕ ಪರಿಶೋಧನೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.

telangana-hc-stays-andhra-govt-private-auditor-action-against-margadarsi-chit-fund
ಮಾರ್ಗದರ್ಶಿ ಚಿಟ್ ಫಂಡ್ : ಖಾಸಗಿ ಲೆಕ್ಕಪರಿಶೋಧಕ ನೇಮಕಕ್ಕೆ ತೆಲಂಗಾಣ ಹೈಕೋರ್ಟ್ ತಡೆ
author img

By

Published : Apr 24, 2023, 11:05 PM IST

ಹೈದರಾಬಾದ್: ಮಾರ್ಗದರ್ಶಿ ಚಿಟ್​ ಫಂಡ್​​ನ ಲೆಕ್ಕಪರಿಶೋಧನೆಗೆ ಖಾಸಗಿ ಚಿಟ್​ ಆಡಿಟರ್​​ ನೇಮಿಸಿರುವುದಕ್ಕೆ ಆಂಧ್ರ ಸರ್ಕಾರವನ್ನು ತೆಲಂಗಾಣ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ಮಾರ್ಗದರ್ಶಿ ಚಿಟ್​ ಫಂಡ್​ ನ ಲೆಕ್ಕ ಪರಿಶೋಧನೆ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದು, ಈ ರೀತಿ ಲೆಕ್ಕ ಪರಿಶೋಧಕರ ನೇಮಕಾತಿಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿ ಮುಮ್ಮಿನೇನಿ ಸುಧೀರ್ ಕುಮಾರ್ ಅವರ ಪೀಠವು ಏಪ್ರಿಲ್ 20 ರಂದು ತಡೆಯಾಜ್ಞೆ ನೀಡಿದೆ. ಜೊತೆಗೆ ಆಂಧ್ರಪ್ರದೇಶದ ಕಮಿಷನರ್ ಮತ್ತು ಮುದ್ರಾಂಕ ಮತ್ತು ನೋಂದಣಿ ಮಹಾನಿರೀಕ್ಷಕರಿಗೆ ಸಂಸ್ಥೆಯ ಆಡಿಟ್‌ಗೆ ಆದೇಶಿಸುವ ಅಧಿಕಾರವಿಲ್ಲ ಎಂದು ತಿಳಿಸಿದೆ.

ಆಂಧ್ರಪ್ರದೇಶದ ಕಮಿಷನರ್ ಮತ್ತು ಮುದ್ರಾಂಕ ಮತ್ತು ನೋಂದಣಿಯ ಇನ್ಸ್‌ಪೆಕ್ಟರ್ ಜನರಲ್ ಅವರು ಖಾಸಗಿ ಆಡಿಟರ್​ ಆಗಿ ವೇಮುಲಪತಿ ಶ್ರೀಧರ್ ಅವರನ್ನು 15.03.2023 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ನೇಮಿಸಿದ್ದರು. ಇದೇ ವೇಳೆ ಆಂಧ್ರಪ್ರದೇಶದ ಮಾರ್ಗದರ್ಶಿ ಚಿಟ್ ಫಂಡ್‌ನ 37 ಶಾಖೆಗಳಿಗೆ ಸಂಬಂಧಿಸಿದಂತೆ ವಿವರವಾದ ಆಡಿಟ್ ನಡೆಸಲು ಶ್ರೀಧರ್ ಅವರಿಗೆ ಸೂಚಿಸಲಾಗಿತ್ತು.

ಇದಕ್ಕೆ ಪ್ರತಿಯಾಗಿ ಆಡಿಟ್​ ನಡೆಸಲು ನೀಡಿದ ಆಂಧ್ರ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕೆಂದು ಮಾರ್ಗದರ್ಶಿ ಚಿಟ್​ ಫಂಡ್ ತೆಲಂಗಾಣ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ನ್ಯಾಯಾಲಯವು ಮಾರ್ಗದರ್ಶಿ ಚಿಟ್ ಫಂಡ್ ವ್ಯವಹಾರಗಳ ಬಗ್ಗೆ ಒಬ್ಬ ಖಾಸಗಿ ಆಡಿಟರ್ ಹೇಗೆ​ ಲೆಕ್ಕ ಪರಿಶೋಧನೆ ನಡೆಸಿದರು ಎಂದು ನ್ಯಾಯಾಲಯವು ಪ್ರಶ್ನಿಸಿತು.

ಜೊತೆಗೆ ಸಾಮಾನ್ಯ ವ್ಯವಹಾರಗಳ ಲೆಕ್ಕಪರಿಶೋಧನೆಗೆ ಆದೇಶ ನೀಡುವಲ್ಲಿ ಚಿಟ್ ಫಂಡ್​ ಅಥವಾ ಚಿಟ್‌ಗಳ ಗುಂಪಿನ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖವಿಲ್ಲದೆ ಲೆಕ್ಕ ಪರಿಶೋಧನೆ ನಡೆಸಲು ಪ್ರಾಥಮಿಕವಾಗಿ ಕಾನೂನಿನಡಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ನ್ಯಾಯಾಲಯವು ತಿಳಿಸಿದೆ.

"ಚಿಟ್ ಫಂಡ್ ಕಂಪನಿಗಳ ಲೆಕ್ಕಪರಿಶೋಧನೆ ನಡೆಸಲು ತಪಾಸಣಾ ಅಧಿಕಾರಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಖಾಸಗಿ ಆಡಿಟರ​ನ್ನು 09.01.2023 ರಂದು ನೇಮಿಸಲಾಗಿದೆ. ಆದರೆ ನ್ಯಾಯಾಲಯದ ಮುಂದೆ ಸಲ್ಲಿಸಿದ ಪ್ರಾಥಮಿಕ ವರದಿ ಪ್ರಕಾರ, ಖಾಸಗಿ ಆಡಿಟರ್​ ಸ್ವತಃ ವಿಚಾರಣೆ ನಡೆಸಿ ತಪಾಸಣಾ ಅಧಿಕಾರಿಗಳನ್ನು ಒಳಗೊಳ್ಳದೆ ವರದಿ ಸಲ್ಲಿಸಿದ್ದಾರೆ ಎಂದು ಹೇಳಿದೆ. ಖಾಸಗಿ ಆಡಿಟರ್​ ಸ್ವತಃ ಹೇಗೆ ಅರ್ಜಿದಾರರ ಕಂಪೆನಿಯ ವ್ಯವಹಾರಗಳ ಬಗ್ಗೆ ತಪಾಸಣೆ ನಡೆಸಿದರು ಎಂಬ ಬಗ್ಗೆ ಅಫಿಡವಿಟ್​ ಸಲ್ಲಿಸಿದ ಬಳಿಕ ಪರಿಶೀಲಿಸಬೇಕಾದ ಅಂಶ'' ಎಂದು ಹೇಳಿದೆ.

ಇದಕ್ಕೂ ಮುನ್ನ, ಮಾರ್ಗದರ್ಶಿ ಚಿಟ್ ಫಂಡ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಚಿಟ್ ಆಡಿಟರ್ ನಿರ್ದಿಷ್ಟ ಚಿಟ್ ಅಥವಾ ಚಿಟ್‌ಗಳ ಗುಂಪಿನಲ್ಲಿ ಆಡಿಟ್ ನಡೆಸಲು ಮಾತ್ರ ಅರ್ಹರಾಗಿರುತ್ತಾರೆ. ಕಂಪನಿಯ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಅವರು ಒಳಪಡಲ್ಲ ಎಂದು ವಾದಿಸಿದರು. ಅರ್ಜಿದಾರರಿಗೆ ಪೂರ್ವಾಗ್ರಹವನ್ನು ಉಂಟುಮಾಡುವ ಉದ್ದೇಶದಿಂದ ಪ್ರತಿವಾದಿಗಳು ಯಾವುದೇ ನಿರ್ದಿಷ್ಟ ಆರೋಪಗಳಿಲ್ಲದೆ ತಪಾಸಣೆ ನಡೆಸುತ್ತಿದ್ದಾರೆ. ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಮತ್ತು ಅರ್ಜಿದಾರರ ವ್ಯವಹಾರದ ಮೇಲೆ ಪರಿಣಾಮ ಬೀರಲು ಮಾತ್ರ ದೋಷಾರೋಪಣೆ ಮಾಡಲಾಗಿದೆ ಎಂದು ರೋಹಟಗಿ ವಾದಿಸಿದರು.

ಅರ್ಜಿದಾರರಂತಹ ಹಣಕಾಸು ಸಂಸ್ಥೆಯ ವಿರುದ್ಧ ಮಾಡಲಾದ ಯಾವುದೇ ಹಣಕಾಸಿನ ಅಕ್ರಮದ ಆರೋಪವು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಅರ್ಜಿದಾರರ ಕಂಪೆನಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ1962 ಸಂಸ್ಥೆಯ ಕಾರ್ಯನಿರ್ವಹಿಸುತ್ತಿದ್ದು, ವ್ಯವಹಾರದಲ್ಲಿ ಸಾರ್ವಜನಿಕರು ವಿಶ್ವಾಸವನ್ನು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಇದೇ ವೇಳೆ ದೋಷಾರೋಪಣೆಗೆ ಒಳಪಡುವ ಎಲ್ಲಾ ಮುಂದಿನ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿ, ಪ್ರಕರಣ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದೆ.

ಇದನ್ನೂ ಓದಿ : TSPSC ಪೇಪರ್ ಸೋರಿಕೆ ಪ್ರಕರಣ; ಮಹಿಳಾ ಕಾನ್ಸ್​​ಟೇಬಲ್​ಗೆ ಕಪಾಳಮೋಕ್ಷ, ವೈಎಸ್ ಶರ್ಮಿಳಾ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.