ETV Bharat / bharat

'ಮಹಿಳಾ ದರ್ಬಾರ್​​'... ವಿನೂತನ ಕಾರ್ಯಕ್ಕೆ ಕೈ ಹಾಕಿದ ತೆಲಂಗಾಣ ರಾಜ್ಯಪಾಲೆ - ತೆಲಂಗಾಣ ರಾಜ್ಯಪಾಲೆ ಮಹಿಳಾ ದರ್ಬಾರ್​

ರಾಜಭವನದಲ್ಲಿ ಮಹಿಳಾ ದರ್ಬಾರ್ ನಡೆಸಲು ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್​​ ಮುಂದಾಗಿದ್ದು, ಇದರ ಮೂಲಕ ಅವರ ಸಮಸ್ಯೆ ಕೇಳಲು ನಿರ್ಧರಿಸಿದ್ದಾರೆ.

Telangana Governor Tamilisai Soundararajan

author img

By

Published : Jun 9, 2022, 10:12 AM IST

ಹೈದರಾಬಾದ್​(ತೆಲಂಗಾಣ): ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅತ್ಯಾಚಾರ ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿವೆ. ಇದರ ಬೆನ್ನಲ್ಲೇ ತೆಲಂಗಾಣ ರಾಜ್ಯಪಾಲೆ ಡಾ. ತಮಿಳಿಸೈ ಸೌಂದರರಾಜನ್​​ 'ಮಹಿಳಾ ದರ್ಬಾರ್'​ ನಡೆಸಲು ಮುಂದಾಗಿದ್ದಾರೆ. ಇದು ಕೆಸಿಆರ್​​​ ಸರ್ಕಾರಕ್ಕೆ ಮತ್ತಷ್ಟು ಇರಿಸು - ಮುರಿಸು ಉಂಟು ಮಾಡುವ ಸಾಧ್ಯತೆ ದಟ್ಟವಾಗಿದೆ. ಮಹಿಳೆಯರ ಧ್ವನಿ ಕೇಳಲು ಈ ವಿನೂತನ ಕಾರ್ಯಕ್ಕೆ ಮಹಿಳಾ ಗವರ್ನರ್ ಮುಂದಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಜುಬಿಲಿ ಹಿಲ್ಸ್​​ನಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಂದ ರಾಜ್ಯಪಾಲೆ ವಿಸ್ತೃತ ವರದಿ ಕೇಳಿದ್ದಾರೆ. ಇದೀಗ ಜೂನ್​ 10ರಂದು(ನಾಳೆ) ರಾಜಭವನದಲ್ಲಿ ಮಹಿಳಾ ದರ್ಬಾರ್​ ಕಾರ್ಯಕ್ರಮ ಆಯೋಜಿಸಿದ್ದಾರೆ.

ಇದನ್ನೂ ಓದಿ: ಮಗನ ಶವ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ.. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ದಂಪತಿ!

ಪ್ರಜಾ ದರ್ಬಾರ್​​ ನಿಮಿತ್ತ ಮಹಿಳೆಯರ ಧ್ವನಿಯಾಗಲು ಮಹಿಳಾ ದರ್ಬಾರ್​ ನಡೆಸಲಿದ್ದು, ಇಲ್ಲಿ ಮಹಿಳೆಯರ ನೋವು ಹೇಳಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿದು ಬಂದಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ರಾಜ್ಯಪಾಲರನ್ನ ಭೇಟಿಯಾಗಲು ಬಯಸುವ ಮಹಿಳೆಯರು 040-23310521ಗೆ ಕರೆ ಮಾಡಬಹುದಾಗಿದ್ದು, ಅಥವಾ rajbhavan-hyd@gov.in ಗೆ ಇಮೇಲ್ ಮಾಡಿ, ಅಪಾಯಿಂಟ್​​ಮೆಂಟ್​ ಪಡೆದುಕೊಳ್ಳಬಹುದಾಗಿದೆ ಎಂದು ರಾಜಭವನ ತಿಳಿಸಿದೆ.

ಮೇ. 28ರಂದು ಜುಬಿಲಿ ಹಿಲ್ಸ್​ನಲ್ಲಿ ನಡೆದ ಅಪ್ರಾಪ್ತೆ ಅತ್ಯಾಚಾರದ ಬೆನ್ನಲ್ಲೇ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿವೆ. ಇದರ ಬೆನ್ನಲ್ಲೇ ರಾಜ್ಯಪಾಲರು ಮಹಿಳಾ ದರ್ಬಾರ್​ ನಡೆಸುತ್ತಿದ್ದಾರೆ. ಇದು ರಾಜ್ಯ ಸರ್ಕಾರ ಹಾಗೂ ಗವರ್ನರ್ ನಡುವಿನ ಉದ್ವಿಗ್ನತೆಗೆ ಮತ್ತಷ್ಟು ಕಾರಣವಾಗುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.