ETV Bharat / bharat

ಆಸ್ಪತ್ರೆಯಲ್ಲೇ ನಡೆಯಿತು ಸಾಮೂಹಿಕ ಅತ್ಯಾಚಾರ: ಆರೋಪಿಗಳಿಗಾಗಿ ಬಲೆ ಬೀಸಿದ ಖಾಕಿ - ನಿಜಾಮಬಾದ್‌ನ ಆಸ್ಪತ್ರೆಯಲ್ಲಿ ಘಟನೆ

ತೆಲಂಗಾಣದ ನಿಜಾಮಬಾದ್‌ನ ಆಸ್ಪತ್ರೆಯೊಂದರಲ್ಲಿ ಯುವತಿ ಮೇಲೆ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Gang rape on a young woman in the hospital room
ಆಸ್ಪತ್ರೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Sep 29, 2021, 10:53 AM IST

Updated : Sep 29, 2021, 11:18 AM IST

ತೆಲಂಗಾಣ: ಆಸ್ಪತ್ರೆಯಲ್ಲಿ ಯುವತಿ ಮೇಲೆ ನಾಲ್ವರು ಕಿರಾತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತೆಲಂಗಾಣದ ನಿಜಾಮಬಾದ್‌ನ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಕಾಮುಕರು ಮೊದಲಿಗೆ ಯುವತಿಗೆ ಮದ್ಯಪಾನ ಮಾಡಿಸಿ ಆಸ್ಪತ್ರೆಯ ಕೊಠಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ, ಆ ಬಳಿಕ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತ ಸಂತ್ರಸ್ತ ಯುವತಿಗೆ ಸ್ಥಳೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಯಾವುದೇ ಭದ್ರತೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆರೋಗ್ಯಕರ ಜೀವನಕ್ಕೆ ನಾನು ಇನ್ಮೇಲೆ ನಿಯಮಿತ ವಾಕ್ ಮಾಡ್ತೀನಿ : ಸಿಎಂ ಬೊಮ್ಮಯಿ

Last Updated : Sep 29, 2021, 11:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.