ETV Bharat / bharat

ತೆಲಂಗಾಣದಲ್ಲಿ ವರುಣನ ಅಬ್ಬರ : ನೆರವು ನೀಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದ ರಾಹುಲ್​ ಗಾಂಧಿ - ಕಾರ್ಯಕರ್ತರಿಗೆ ಸೂಚಿಸಿದ ರಾಹುಲ್​ ಗಾಂಧಿ

ತೆಲಂಗಾಣದ ಹದಿರಾರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಇಂದು ಮುನ್ಸೂಚನೆ ನೀಡಿದೆ. ನಿರ್ಮಲ್ ಜಿಲ್ಲೆಯಲ್ಲಿ ನಿನ್ನೆ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 100 ಜನರನ್ನು ರಾಷ್ಟ್ರೀಯ ವಿಪತ್ತು ಪಡೆ ಮತ್ತು ರಾಜ್ಯ ವಿಪತ್ತು ಪಡೆ ತಂಡಗಳು ಸ್ಥಳಾಂತರಿಸಿವೆ..

ತೆಲಂಗಾಣದಲ್ಲಿ ವರುಣನ ಅಬ್ಬರ
ತೆಲಂಗಾಣದಲ್ಲಿ ವರುಣನ ಅಬ್ಬರ
author img

By

Published : Jul 23, 2021, 3:28 PM IST

ನವದೆಹಲಿ : ತೆಲಂಗಾಣದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಭೀಕರ ರೂಪ ಪಡೆಯುತ್ತಿದೆ. ಈ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಜ್ಯದ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ನನ್ನ ಪ್ರಕಾರ ತೆಲಂಗಾಣದಲ್ಲಿರುವ ನಮ್ಮ ಸಹೋದರ ಸಹೋದರಿಯರು ಭಾರಿ ಪ್ರವಾಹವನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಇನ್ನೂ ಹೆಚ್ಚಿನ ಮಳೆಯಾಗುವ ಎಚ್ಚರಿಕೆಗಳಿವೆ. ದಯವಿಟ್ಟು ಕಾಳಜಿವಹಿಸಿ ಸುರಕ್ಷಿತವಾಗಿರಿ ಎಂದು ಟ್ವೀಟ್​ ಮಾಡಿದ್ದಾರೆ.

  • My thoughts are with our brothers and sisters in Telangana facing massive floods.
    I appeal to Congress workers to provide all possible assistance in the rescue operations.

    There are still warnings of more heavy rainfall. Please take care and stay safe. pic.twitter.com/izflt2z4YS

    — Rahul Gandhi (@RahulGandhi) July 23, 2021 " class="align-text-top noRightClick twitterSection" data=" ">

ತೆಲಂಗಾಣದ ಹದಿರಾರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಇಂದು ಮುನ್ಸೂಚನೆ ನೀಡಿದೆ.

ವಿಡಿಯೋ ನೋಡಿ: ಮಹಾರಾಷ್ಟ್ರದಲ್ಲಿ ವರುಣಾರ್ಭಟ.. ಭೂಕುಸಿತ.. ಪ್ರವಾಹಕ್ಕೆ ನಲುಗಿದ ಜನ!

ಇನ್ನು, ನಿರ್ಮಲ್ ಜಿಲ್ಲೆಯಲ್ಲಿ ನಿನ್ನೆ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 100 ಜನರನ್ನು ರಾಷ್ಟ್ರೀಯ ವಿಪತ್ತು ಪಡೆ ಮತ್ತು ರಾಜ್ಯ ವಿಪತ್ತು ಪಡೆ ತಂಡಗಳು ಸ್ಥಳಾಂತರಿಸಿ ರಕ್ಷಣೆ ಮಾಡಿವೆ.

ನಿಜಾಮಾಬಾದ್ ಜಿಲ್ಲೆಯ ಸಾವೆಲ್ ಗ್ರಾಮದಲ್ಲಿ ಉಂಟಾದ ಪ್ರವಾಹದಿಂದಾಗಿ ವೃದ್ಧಾಶ್ರಮದಲ್ಲಿ ಸಿಲುಕಿದ್ದ 7 ಜನರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿವೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು (ಜಿಹೆಚ್‌ಎಂಸಿ) ಪೊಲೀಸರ ಸಹಾಯದಿಂದ ಮುಸಿ ಜಲಾನಯನ ಪ್ರದೇಶಗಳಾದ ಬಸ್ತಿ, ಚಾದರ್‌ಘಾಟ್, ಶಂಕರ್‌ನಗರ, ರಸೂಲ್‌ಪುರ, ಮುಸರಂಬಾಗ್, ಮತ್ತು ಮೂಸಿ ವಿಸ್ತಾರದ ತಗ್ಗು ಪ್ರದೇಶಗಳ ನಿವಾಸಿಗಳನ್ನು ರಕ್ಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.