ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ನಾಮಪತ್ರ ಸಲ್ಲಿಕೆ ಭರಾಟೆ ಶುಕ್ರವಾರಕ್ಕೆ ಮುಕ್ತಾಯವಾಗಿದೆ. ಕೋಟ್ಯಾಧಿಪತಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಕಾರ್ಪೊರೇಟ್ ಕಾಲೇಜು ಮಾಲೀಕರು ಸೇರಿದಂತೆ ಹಲವು ಉದ್ಯಮಿಗಳು ವಿವಿಧ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ಪೈಕಿ 119 ಸದಸ್ಯ ಬಲದ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಪರವಾಗಿ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವುದಾಗಿ ಎಂದು ಹೇಳಿಕೊಂಡಿದ್ದಾರೆ.
600 ಕೋಟಿ, 400 ಕೋಟಿ, 200 ಕೋಟಿ, 100 ಕೋಟಿ... ಹೀಗೆ ಒಬ್ಬೊಬ್ಬ ಅಭ್ಯರ್ಥಿ ಕೂಡ ತಮ್ಮ ಆಸ್ತಿಯನ್ನು ಬಹಿರಂಗ ಪಡಿಸಿದ್ದಾರೆ. ಎಲ್ಲ ಪಕ್ಷಗಳ ಸೇರಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ 50 ಕೋಟಿಗೂ ಅಧಿಕ ಆಸ್ತಿಯನ್ನು ತೋರಿಸಿದ್ದಾರೆ. ಕೆಲವು ಅಭ್ಯರ್ಥಿಗಳ ಆಸ್ತಿಯಲ್ಲಿ ಸಿಂಹಪಾಲು ಅವರ ಪತ್ನಿಯರ ಹೆಸರಿನಲ್ಲಿದೆ. ಕೆಲವರು ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಅಥವಾ ಮನೆ ಇಲ್ಲ ಎಂದು ಘೋಷಿಸಿದ್ದಾರೆ.
ಮತ್ತೊಂದೆಡೆ, ಕೊಡಂಗಲ್ ಹಾಗೂ ಕಾಮರೆಡ್ಡಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ತಮ್ಮ ವಿರುದ್ಧ 89 ಪ್ರಕರಣಗಳು ದಾಖಲಾಗಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಗೋಶಾಮಹಲ್ ಬಿಜೆಪಿ ಅಭ್ಯರ್ಥಿ ರಾಜಾಸಿಂಗ್ ತಮ್ಮ ವಿರುದ್ಧ 75 ಪ್ರಕರಣಗಳು ದಾಖಲಾಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಆಡಳಿತ ಪಕ್ಷದ ಕೆಲ ಸದಸ್ಯರ ಮೇಲಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.
ಯಾವ ಪಕ್ಷದ ಅಭ್ಯರ್ಥಿಗಳ ಆಸ್ತಿ ಎಷ್ಟು?
ಕಾಂಗ್ರೆಸ್
ಅಭ್ಯರ್ಥಿಯ ಹೆಸರು | ಕ್ಷೇತ್ರ | ಆಸ್ತಿ |
ಜಿ.ವಿವೇಕ್ | ಚೆನ್ನೂರು | 606.67 ಕೋಟಿ |
ಕೆ.ರಾಜಗೋಪಾಲ್ ರೆಡ್ಡಿ | ಮುನುಗೋಡು | 458.39 ಕೋಟಿ |
ಪಿ.ಶ್ರೀನಿವಾಸ ರೆಡ್ಡಿ | ಪಾಲೇರು | 433.93 ಕೋಟಿ |
ಜಿ.ವಿನೋದ್ | ಬೆಳ್ಳಂಪಲ್ಲಿ | 197.12 ಕೋಟಿ |
ವಿ.ಜಗದೀಶ್ವರ್ ಗೌಡ್ | ಸೆರಿಲಿಂಗಂಪಲ್ಲಿ | 124.49 ಕೋಟಿ |
ಎಂ. ಸುನೀಲ್ ಕುಮಾರ್ | ಬಾಳ್ಕೊಂಡ | 104.13 ಕೋಟಿ |
ಪಿ.ಸುದರ್ಶನ ರೆಡ್ಡಿ | ಬೋಧನ್ | 102.20 ಕೋಟಿ |
ಕೆ.ಹನಮಂತ ರೆಡ್ಡಿ | ಕುತ್ಬುಳ್ಳಾಪುರ | 95.34 ಕೋಟಿ |
ಎಂ. ರಂಗಾರೆಡ್ಡಿ | ಇಬ್ರಾಹಿಂಪಟ್ಟಣಂ | 83.78 ಕೋಟಿ |
ಕೆ.ಮದನಮೋಹನ್ ರಾವ್ | ಎಲ್ಲರೆಡ್ಡಿ | 71.94 ಕೋಟಿ |
ಬಿಆರ್ಎಸ್
ಅಭ್ಯರ್ಥಿಯ ಹೆಸರು | ಕ್ಷೇತ್ರ | ಆಸ್ತಿ |
ಪಿ.ಶೇಖರರೆಡ್ಡಿ | ಭುವನಗಿರಿ | 227.51 ಕೋಟಿ |
ಬಿ.ಗಣೇಶ್ | ನಿಜಾಮಾಬಾದ್ ಸಿಟಿ | 197.40 ಕೋಟಿ |
ಕೆ.ಪ್ರಭಾಕರ | ದುಬ್ಬಾಕ | 124.24 ಕೋಟಿ |
ಜನಾರ್ದನ ರೆಡ್ಡಿ | ನಾಗರಕರ್ನೂಲ್ | 112.33 ಕೋಟಿ |
ರಾಜೇಂದರ್ ರೆಡ್ಡಿ | ನಾರಾಯಣ ಪೇಟೆ | 111.42 ಕೋಟಿ |
ಎಂ.ರಾಜಶೇಖರ್ | ಮಲ್ಕಾಜಿಗಿರಿ | 97.00 ಕೋಟಿ |
ಮಲ್ಲಾರೆಡ್ಡಿ | ಮೇಡ್ಚಲ್ | 95.94 ಕೋಟಿ |
ಕೆ.ಉಪೇಂದ್ರ ರೆಡ್ಡಿ | ಪಾಲೇರು | 89.57 ಕೋಟಿ |
ಬಿ.ಲಕ್ಷ್ಮರೆಡ್ಡಿ | ಉಪ್ಪಲ್ | 85.75 ಕೋಟಿ |
ಎ. ಗಾಂಧಿ | ಸೆರಿಲಿಂಗಂಪಲ್ಲಿ | 85.14 ಕೋಟಿ |
ಬಿಜೆಪಿ
ಅಭ್ಯರ್ಥಿಯ ಹೆಸರು | ಕ್ಷೇತ್ರ | ಆಸ್ತಿ |
ಎಂ.ರವಿಕುಮಾರ್ | ಸೆರಿಲಿಂಗಂಪಲ್ಲಿ | 166.93 ಕೋಟಿ |
ಡಿ.ಅರವಿಂದ | ಕೋರುಟ್ಲ | 107.43 ಕೋಟಿ |
ಈಟಾಲ ರಾಜೇಂದರ್ | ಹುಜೂರಾಬಾದ್ | 53.94 ಕೋಟಿ |
ಎಂ.ಶಶಿಧರ್ ರೆಡ್ಡಿ | ಸನತ್ ನಗರ | 51.14 ಕೋಟಿ |
ಕೆ.ವೆಂಕಟರಮಣ ರೆಡ್ಡಿ | ಕಾಮರೆಡ್ಡಿ | 49.71 ಕೋಟಿ |
ವಿ.ರಘುನಾಥ ರಾವ್ | ಮಂಚಿರ್ಯಾಲ | 48.18 ಕೋಟಿ |
ಬಿ.ಸುಭಾಷ್ ರೆಡ್ಡಿ | ಎಲ್ಲರೆಡ್ಡಿ | 42.55 ಕೋಟಿ |
ಪಿ.ಕಾಳಿಪ್ರಸಾದ್ ರಾವ್ | ಪರಕಳ | 39.88 ಕೋಟಿ |
ವಿ.ಮೋಹನ್ ರೆಡ್ಡಿ | ಬೋಧನ್ | 38.68 ಕೋಟಿ |
ನಿವೇದಿತಾ | ನಾಗಾರ್ಜುನ ಸಾಗರ | 34.95 ಕೋಟಿ |