ಹೈದರಾಬಾದ್: ಬರೋಬ್ಬರಿ 10 ತಿಂಗಳ ಸುದೀರ್ಘ ವಿರಾಮದ ಬಳಿಕ ತೆಲಂಗಾಣದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ.
15 ದಿನಗಳ ಬಳಿಕ 6ರಿಂದ 8ನೇ ತರಗತಿಗಳನ್ನು ಪ್ರಾರಂಭಿಸುವ ಯೋಜನೆಯಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಆನ್ಲೈನ್ ಮತ್ತು ಡಿಜಿಟಲ್ ಕ್ಲಾಸ್ ಮುಂದುವರೆಯಲಿದೆ. ಈ ವರ್ಷ ಪರೀಕ್ಷೆ ಬರೆಯಲು ಕನಿಷ್ಠ ಹಾಜರಾತಿಯ ಅವಶ್ಯಕತೆಯಿಲ್ಲ. ಮಾಧ್ಯಮಿಕ ಶಾಲಾ ಪ್ರಮಾಣಪತ್ರ (ಎಸ್‌ಎಸ್‌ಸಿ) ಪರೀಕ್ಷೆಗಳು ಮೇ 17 ರಿಂದ 26 ರವರೆಗೆ ನಡೆಯಲಿವೆ ಎಂದು ತೆಲಂಗಾಣ ಶಿಕ್ಷಣ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಬಜೆಟ್ನಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ: ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಗಗನಮುಖಿ!
ಕೊರೊನಾ ಸಾಂಕ್ರಾಮಿಕದಿಂದಾಗಿ ರಾಜ್ಯದಲ್ಲಿ 2020ರ ಮಾರ್ಚ್ 22ರಂದು ಶಾಲೆಗಳನ್ನು ಮುಚ್ಚಲಾಗಿತ್ತು. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲ ಕೋವಿಡ್ ನಿಯಮಗಳನ್ನು ಪಾಲಿಸಿ ಶಾಲೆಗಳು ಆರಂಭಗೊಂಡಿವೆ. ದೈಹಿಕ ಅಂತರ ಕಾಪಾಡಿಕೊಳ್ಳಲು ಒಂದು ಕೊಠಡಿಯಲ್ಲಿ ಕೇವಲ 20 ವಿದ್ಯಾರ್ಥಿಗಳು ಮಾತ್ರ ಕೂರಲು ಅವಕಾಶ ನೀಡಲಾಗಿದೆ.