ಹೈದರಾಬಾದ್ (ತೆಲಂಗಾಣ): 2014ರಲ್ಲಿ ಚುನಾವಣೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ವಿರುದ್ಧ ತೆಲಂಗಾಣ ಕೋರ್ಟ್ನಿಂದ ಸಮನ್ಸ್ ಜಾರಿಯಾಗಿದೆ.
ಈಗಾಗಲೇ ತೆಲಂಗಾಣದ ಕೊಡಾಡಾ ಪೊಲೀಸ್ ಠಾಣೆಯಲ್ಲಿ ಆಂಧ್ರ ಸಿಎಂ ವಿರುದ್ಧ ಪ್ರಕರಣ ದಾಖಲಾಗಿದೆ. 2014ರ ಚುನಾವಣೆ ಪ್ರಚಾರದ ವೇಳೆ ರಾಷ್ಟ್ರೀಯ ಹೆದ್ದಾರಿ-65ರಲ್ಲಿ ಅನಿಧಿಕೃತವಾಗಿ ರ‍್ಯಾಲಿ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.
ಓದಿ: ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ
ಪ್ರಕರಣದಲ್ಲಿ ಜಗನ್ಮೋಹನ್ ರೆಡ್ಡಿ A1 ಆರೋಪಿಯಾಗಿದ್ದು, ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಇದೀಗ ಫೆಬ್ರವರಿ 12ರಂದು ಕೋರ್ಟ್ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈಗಾಗಲೇ A2 ಮತ್ತು A3 ಆರೋಪಿಗಳ ವಿರುದ್ಧದ ಪ್ರಕರಣ ವಜಾಗೊಳಿಸಲಾಗಿದೆ.