ನವದೆಹಲಿ: 2012ರಲ್ಲಿ ಕೋಮು ಪ್ರಚೋದಕ ಭಾಷಣ ಮಾಡಿದ್ದ ಗುರುತರ ಆರೋಪದಡಿ ಅಸಾದುದ್ದೀನ್ ಒವೈಸಿ ಸಹೋದರ ಹಾಗು ತೆಲಂಗಾಣ ಶಾಸಕ ಅಕ್ಬರುದ್ದೀನ್ ಒವೈಸಿ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣಗಳು ಇದೀಗ ಖುಲಾಸೆಗೊಂಡಿವೆ. ಎರಡು ಭಾಷಣಗಳಲ್ಲಿ ಕೋಮು ಪ್ರಚೋದನೆ ನೀಡುವಂತಹ ಅಂಶಗಳು ಕಂಡುಬಾರದ ಕಾರಣಕ್ಕಾಗಿ ಪ್ರಕರಣವನ್ನು ಖುಲಾಸೆಗೊಳಿಸಿ ನಾಂಪಲ್ಲಿ ಮೆಟ್ರೋಪಾಲಿಟನ್ ವಿಶೇಷ ನ್ಯಾಯಾಲಯ ಆದೇಶಿಸಿದೆ.
-
Alhamdulilah Akbaruddin Owaisi has been acquitted by MP/MLA Special Court in two criminal cases against him for alleged hate speeches. Grateful to all for their prayers & support. Special thanks to Advocate Abdul Azeem sb & senior lawyers who provided their valuable assistance
— Asaduddin Owaisi (@asadowaisi) April 13, 2022 " class="align-text-top noRightClick twitterSection" data="
">Alhamdulilah Akbaruddin Owaisi has been acquitted by MP/MLA Special Court in two criminal cases against him for alleged hate speeches. Grateful to all for their prayers & support. Special thanks to Advocate Abdul Azeem sb & senior lawyers who provided their valuable assistance
— Asaduddin Owaisi (@asadowaisi) April 13, 2022Alhamdulilah Akbaruddin Owaisi has been acquitted by MP/MLA Special Court in two criminal cases against him for alleged hate speeches. Grateful to all for their prayers & support. Special thanks to Advocate Abdul Azeem sb & senior lawyers who provided their valuable assistance
— Asaduddin Owaisi (@asadowaisi) April 13, 2022
2012ರಲ್ಲಿ ಅಕ್ಬರುದ್ದೀನ್ ಒವೈಸಿ ದ್ವೇಷಪೂರಿತ ಭಾಷಣ ಮಾಡಿದ್ದರು ಎಂದು ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಇದೀಗ ಈ ಪ್ರಕರಣಗಳು ದೋಷಮುಕ್ತವಾಗಿವೆ ಎಂದು ಅಸಾದುದ್ದೀನ್ ಒವೈಸಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನಿಜಾಮಾಬಾದ್ ಮತ್ತು ನಿರ್ಮಲ್ನಲ್ಲಿ ಮಾತನಾಡಿದ್ದ ಅಕ್ಬರುದ್ದೀನ್ ದ್ವೇಷಪೂರಿತವಾಗಿ ಮಾತನಾಡಿದ್ದರು ಎಂಬ ಆರೋಪವಿತ್ತು. ಇದರ ಬೆನ್ನಲ್ಲೇ ಅವರನ್ನು ಬಂಧನ ಮಾಡಿ, ತದನಂತರ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2: ಯಶ್, ಸಂಜಯ್ ದತ್, ರವೀನಾ, ಶ್ರೀನಿಧಿ ಪಡೆದ ಸಂಭಾವನೆ ವಿವರ ಹೀಗಿದೆ..
ಇದಕ್ಕೆ ಸಂಬಂಧಿಸಿದಂತೆ 41ಕ್ಕೂ ಅಧಿಕ ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಜೊತೆಗೆ, 2016ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಆದರೆ, ತಮ್ಮ ಸಹೋದರನ ವಿರುದ್ಧ ಕೇಳಿ ಬಂದ ಆರೋಪವನ್ನ ಓವೈಸಿ ಅಲ್ಲಗಳೆದಿದ್ದರು.