ETV Bharat / bharat

'ಭಾರತದಲ್ಲಿ ಬದಲಾವಣೆ ತರಲು ಹೊಸ ಸಂವಿಧಾನ ಬರೆಯಬೇಕು'.. ತೆಲಂಗಾಣ ಸಿಎಂ ಕೆಸಿಆರ್​ ವಿವಾದಿತ ಹೇಳಿಕೆ

KCR Controversial statement about constitution : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಮೂರು ವರ್ಷ ಕಳೆದರೆ ಸಂವಿಧಾನ ಅಳವಡಿಸಿಕೊಂಡು 75 ವರ್ಷ ಕಳೆಯಲಿದೆ. ಆದರೆ, ಈವರೆಗೆ ಜನರ ಆಶೋತ್ತರ ಪೂರ್ಣವಾಗಿ ಈಡೇರಿಲ್ಲ. ಹೀಗಾಗಿ, ಕಾಲಕ್ಕೆ ತಕ್ಕಂತಹ ಹೊಸ ಸಂವಿಧಾನದ ಅಗತ್ಯವಿದೆ. ಇದರ ಬಗ್ಗೆ ಕೂಲಂಕಷವಾಗಿ ಚರ್ಚೆ, ಚಿಂತನೆ ನಡೆಯಬೇಕು..

KCR Controversial statement about constitution

author img

By

Published : Feb 2, 2022, 4:09 PM IST

ಹೈದರಾಬಾದ್​(ತೆಲಂಗಾಣ) : ದೇಶದ ಜನರ ನಿರೀಕ್ಷೆ ಪೂರೈಸಲು ಹಾಗೂ ಬದಲಾವಣೆ ತರಲು ಹೊಸ ಸಂವಿಧಾನ ಬರೆಯುವ ಅಗತ್ಯವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ನೀಡಿರುವ ಹೇಳಿಕೆ ಇದೀಗ ವಿವಾದದ ರೂಪ ಪಡೆದಿದೆ.

ಕಳೆದ 75 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಜನರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಬದಲಾವಣೆ ತರಲು ಕಾಲಕ್ಕೆ ತಕ್ಕನಾದ ಹೊಸ ಸಂವಿಧಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿರುವ ಬಜೆಟ್​ ವಿಚಾರವಾಗಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೆಸಿಆರ್‌, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಮೂರು ವರ್ಷ ಕಳೆದರೆ ಸಂವಿಧಾನ ಅಳವಡಿಸಿಕೊಂಡು 75 ವರ್ಷ ಕಳೆಯಲಿದೆ.

ಆದರೆ, ಈವರೆಗೆ ಜನರ ಆಶೋತ್ತರ ಪೂರ್ಣವಾಗಿ ಈಡೇರಿಲ್ಲ. ಹೀಗಾಗಿ, ಕಾಲಕ್ಕೆ ತಕ್ಕಂತಹ ಹೊಸ ಸಂವಿಧಾನದ ಅಗತ್ಯವಿದೆ. ಇದರ ಬಗ್ಗೆ ಕೂಲಂಕಷವಾಗಿ ಚರ್ಚೆ, ಚಿಂತನೆ ನಡೆಯಬೇಕು ಎಂದು ಕೆಸಿಆರ್ ತಿಳಿಸಿದ್ದರು.

ಇದನ್ನೂ ಓದಿರಿ: ಕಿತ್ತು ತಿನ್ನುವ ಬಡತನ.. ₹5 ಸಾವಿರಕ್ಕೆ ನವಜಾತ ಶಿಶು ಮಾರಿದ್ಲು ಅಮ್ಮ!

ಕೇಂದ್ರ ಸರ್ಕಾರದಿಂದ ಮಂಡನೆಯಾಗಿರುವ ಬಜೆಟ್​​ ದಿಕ್ಕು ದೆಸೆ ಇಲ್ಲದ ಗೋಲ್ಮಾಲ್​ ಬಜೆಟ್​ ಆಗಿದೆ. ಇದರಲ್ಲಿ ಮಧ್ಯಮ ವರ್ಗ ಹಾಗೂ ರೈತರನ್ನ ಸಂಪೂರ್ಣವಾಗಿ ಕಡಗಣಿಸಲಾಗಿದೆ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕೆಸಿಆರ್, ರಾಷ್ಟ್ರೀಯ ನಾಯಕತ್ವದಲ್ಲಿ ಬದಲಾವಣೆ ತರಲು ಅಗತ್ಯವಿದೆ. ಇದೇ ಕಾರಣಕ್ಕಾಗಿ ನಾನು ಹೋರಾಟ ನಡೆಸುತ್ತಿದ್ದೇನೆ ಎಂದಿದ್ದಾರೆ.

ಕೆಸಿಆರ್​ ಹೇಳಿಕೆಗೆ ಆಕ್ರೋಶ

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಹೇಳಿಕೆಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್​ ಪಕ್ಷ 48 ಗಂಟೆಗಳ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಜೊತೆಗೆ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದಲೂ ಟೀಕೆ ವ್ಯಕ್ತವಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.